ಮುಖ್ಯ ಸುದ್ದಿ
Groundwater: ಇನ್ನು ಮುಂದೆ ಈ ಸ್ಥಳಗಳಲ್ಲಿ ಬೋರ್ ವೆಲ್ ಹಾಕಿಸಲು ಅನುಮತಿ ಕಡ್ಡಾಯ | ಜಿಲ್ಲಾಧಿಕಾರಿ
CHITRADURGA NEWS | 28 NOVEMBER 2024
ಚಿತ್ರದುರ್ಗ: ಕೃಷಿ ಹೊರತುಪಡಿಸಿ, ವಾಣಿಜ್ಯ, ಕೈಗಾರಿಕೆ(Industry) ಹಾಗೂ ಗಣಿಗಾರಿಕೆ(Mining) ಸಂಬಂಧಿಸಿದ ಸ್ಥಳಗಳಲ್ಲಿ ಕೊಳವೆ ಬಾವಿ ಕೊರೆದು ಅಂತರ್ಜಲ ಬಳಕೆ ಮಾಡಲು, ಕಡ್ಡಾಯವಾಗಿ ಜಿಲ್ಲಾ ಅಂರ್ತಜಲ ಸಮಿತಿಯಿಂದ ಅನುಮತಿ(permission) ಪಡೆಯಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ಕ್ಲಿಕ್ ಮಾಡಿ ಓದಿ: ಸಂವಿಧಾನ ಸನ್ಮಾನ | ಕಾನೂನು ಸಚಿವ ಸ್ಥಾನಕ್ಕೆ ಅಂಬೇಡ್ಕರ್ ರಾಜಿನಾಮೆ ಕೊಟ್ಟಿದ್ದೇಕೆ ?
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಜರುಗಿದ ಜಿಲ್ಲಾ ಅಂರ್ತಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂರ್ತಜಲ ಸಮಿತಿಯಿಂದ ಅಧಿಕೃತವಾಗಿ ನೊಂದಣಿಯಾದ ರಿಗ್ (ಬೋರ್‍ವೆಲ್ ಕೊರೆಯವ ಲಾರಿ) ವಾಹನಗಳು ಮಾತ್ರ ಕೊಳವೆ ಬಾವಿ ಕೊರೆಯಬೇಕು. ನೊಂದಣಿ ಅವಧಿ ಪೂರ್ಣಗೊಂಡ ವಾಹನ ಮಾಲಿಕರು, ಕೂಡಲೇ ನೊಂದಣಿ ನವೀಕರಿಸಿಕೊಳ್ಳಬೇಕು.
ವಾಣಿಜ್ಯ ಸ್ಥಳಗಳ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಜಿಲ್ಲಾ ಅಂರ್ತಜಲ ಸಮಿತಿಯಿಂದ ನಿರಾಕ್ಷೇಪಣ ಪತ್ರ ಪಡೆದ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಖಚಿತ ಪಡಿಸಿಕೊಳ್ಳಬೇಕು. ಅನುಪಯುಕ್ತ ಹಾಗೂ ವಿಫಲ ಕೊಳವೆ ಬಾವಿಗಳನ್ನು ಮುಚ್ಚಲಾಗಿದೆಯೇ ಎಂಬುದರ ಬಗ್ಗೆ ತಹಶೀಲ್ದಾರ್, ತಾ.ಪಂ. ಇಓ ಹಾಗೂ ಪಿಡಿಓಗಳು ತಪಾಸಣೆ ನಡೆಸಬೇಕು.
ಕ್ಲಿಕ್ ಮಾಡಿ ಓದಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಿತ್ತು ಹೆಣ | ಭೀಕರವಾಗಿ ಕೊಲೆಯಾದ ಯುವಕ
ರೈತರು ವಿಫಲ ಕೊಳವೆ ಬಾವಿಗಳ ಕೇಸಿಂಗ್ ಪೈಪ್‍ನ್ನು ತೆಗೆಯುವುದರಿಂದ, ಇಂತಹ ಸ್ಥಳಗಳು ಅವಘಡಗಳಿಗೆ ಕಾರಣವಾಗುತ್ತವೆ. ಹೀಗಾಗಿ ವಿಫಲ ಕೊಳವೆ ಬಾವಿಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಈ ಬಗ್ಗೆ ತಿಳುವಳಿಕೆ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಸಭೆಯಲ್ಲಿ ಜಿ.ಪಂ.ಸಿಇಒ ಎಸ್.ಜೆ.ಸೋಮಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್, ಹಿರಿಯ ಭೂ ವಿಜ್ಞಾನಿ ಬಸಂತ್ ಸೇರಿಂದತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.