Connect with us

    BREAKIN NEWS: DCC ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟ | ಐದು ಜನರ ಗೆಲುವು

    DCC ELECTION

    ಮುಖ್ಯ ಸುದ್ದಿ

    BREAKIN NEWS: DCC ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟ | ಐದು ಜನರ ಗೆಲುವು

    CHITRADURGA NEWS | 12 SEPTEMBER 2024

    ಚಿತ್ರದುರ್ಗ: ತೀವ್ರ ಕುತೂಹಲ ಮೂಡಿಸಿದ್ದ ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಡಿಸಿಸಿ) ಚುನಾವಣೆ ಸಂಜೆ 4 ಗಂಟೆಗೆ ಮುಕ್ತಾಯವಾಯಿತು.

    ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎ ವರ್ಗದ ಕ್ಷೇತ್ರಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.

    ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ ಸಚಿವ ಡಿ.ಸುಧಾಕರ್ ಸೇರಿ 6 ಜನ ಅವಿರೋಧ ಆಯ್ಕೆ

    ಇಲ್ಲಿ ಮೆದೇಹಳ್ಳಿ ಸೊಸೈಟಿಯಿಂದ ಎಚ್.ಎಂ.ದ್ಯಾಮಣ್ಣ, ಭೀಮಸಮುದ್ರದಿಂದ ಟಿ.ಪಿ.ಅನೂಫ್ ಹಾಗೂ ಪಿಳ್ಳೆಕೇರೆನಹಳ್ಳಿಯಿಂದ ಬಿ.ಮಂಜುನಾಥ್ ಪೈಪೋಟಿ ನಡೆಸಿದ್ದರು.

    ಅಂತಿಮವಾಗಿ ಮೆದೇಹಳ್ಳಿ ಸೊಸೈಟಿಯ ಎಚ್.ಎಂ.ದ್ಯಾಮಣ್ಣ 10 ಮತಗಳಿಂದ ಗೆಲುವು ಸಾಧಿಸಿದ್ದಾರೆ.

    ಹೊಸದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ವೆಂಗಳಾಪುರ ಸೊಸೈಟಿಯ ಕೆ.ಅನಂತ್ ಹಾಗೂ ಕಾರೇಹಳ್ಳಿ ಸೊಸೈಟಿಯ ಎಚ್.ಬಸವರಾಜ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕೆ.ಅನಂತ್ 10 ಮತಗಳಿಂದ ಆಯ್ಕೆಯಾಗಿದ್ದಾರೆ.

    ಇದನ್ನೂ ಓದಿ: ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಸಂಸದ ಗೋವಿಂದ ಕಾರಜೋಳ ಉಪನ್ಯಾಸ

    ಮೊಳಕಾಲ್ಮೂರು ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ತಿರುಮಲಾಪುರ ಸೊಸೈಟಿಯ ಜಿಂಕಲ್ ಬಸವರಾಜ್ ಹಾಗೂ ಜೆ.ಬಿ.ಹಳ್ಳಿಯಿಂದ ಎಚ್.ಟಿ.ನಾಗೀರೆಡ್ಡಿ ನಡುವೆ ಪೈಪೋಟಿ ನಡೆದು, ಎಚ್.ಟಿ.ನಾಗೀರೆಡ್ಡಿ 6 ಮತಗಳಿಂದ ಗೆದ್ದಿದ್ದಾರೆ.

    ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಹಾಲು ಉತ್ಪಾಧಕರ ಸಹಾಕರ ಸಂಘದ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಲಕ್ಕವ್ವನಹಳ್ಳಿ ಸೊಸೈಟಿಯ ಎಂ.ಭಾರತಿ ಹಾಗೂ ತಿಮ್ಮಪ್ಪಯ್ಯನಹಳ್ಳಿ ಸೊಸೈಟಿಯ ಪಿ.ವಿನೋದಸ್ವಾಮಿ ನಡುವೆ ಹಣಾಹಣಿ ನಡೆದು, ಪಿ.ವಿನೋದಸ್ವಾಮಿ 3 ಮತಗಳಿಂದ ಜಯದ ನಗೆ ಬೀರಿದ್ದಾರೆ.

    ಇದನ್ನೂ ಓದಿ: ಸಿಟಿ ಕ್ಲಬ್‍ನಲ್ಲಿ ಅವ್ಯವಹಾರ ಆರೋಪ | ಮೂವರ ವಿರುದ್ಧ ದೂರು ದಾಖಲು

    ಜಿಲ್ಲೆಯ ಇತರೆ ಸಹಕಾರಿ ಕ್ಷೇತ್ರದ ಪರವಾಗಿ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಳ್ಳಕೆರೆಯ ಬಿ.ಸಿ.ಸಂಜೀವಮೂರ್ತಿ ಹಾಗೂ ಚಿತ್ರದುರ್ಗದ ನಿಶಾನಿ ಎಂ.ಜಯ್ಯಣ್ಣ ನಡುವೆ ಪೈಪೋಟಿ ನಡೆದು, ಅಂತಿಮವಾಗಿ ನಿಶಾನಿ ಎಂ.ಜಯ್ಯಣ್ಣ 8 ಮತಗಳಿಂದ ಗೆದ್ದಿದ್ದಾರೆ.

    ಸಚಿವ ಸುಧಾಕರ್ ಸೇರಿ 7 ಜನ ಅವಿರೋಧ:

    ಡಿಸಿಸಿ ಬ್ಯಾಂಕಿನ ಹಾಲಿ ಅಧ್ಯಕ್ಷರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನಗರಂಗೆರೆ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದರು.

    ಇವರೊಟ್ಟಿಗೆ ಹೊಳಲ್ಕೆರೆ ತಾಲೂಕು ಶಿವಗಂಗಾ ಸೊಸೂಟಿಯ ಎಸ್.ಆರ್.ಗಿರೀಶ್, ಹಿರಿಯೂರಿನಿಂದ ಓ.ಮಂಜುನಾಥ್, ಟಿಎಪಿಸಿಎಂಎಸ್‍ನಿಂದ ಹೊಸದುರ್ಗದ ಎಚ್.ಬಿ.ಮಂಜುನಾಥ್, ನೇಕಾರಿಕೆ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಜಗಣ್ಣ, ಪಟ್ಟಣ ಸಹಕಾರಿ ಬ್ಯಾಂಕ್ ಕ್ಷೇತ್ರದಿಂದ ರಘುರಾಮ ರೆಡ್ಡಿ, ಹಾಲು ಉತ್ಪಾಧಕರ ಕ್ಷೇತ್ರದಿಂದ ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top