ಮುಖ್ಯ ಸುದ್ದಿ
eyes; ನೇತ್ರದಾನ ಮಾಡಿ ಮರಣದ ನಂತರವೂ ಇನ್ನೊಬ್ಬರಿಗೆ ಬೆಳಕಾಗಿ | ಡಾ.ಅನುಶ್ರೀ
CHITRADURGA NEWS | 05 SEPTEMBER 2024
ಚಿತ್ರದುರ್ಗ: ನೇತ್ರದಾನ ಮಾಡು(Donate eyes)ವುದರಿಂದ ಸಾವಿನ ನಂತರವೂ ಜಗತ್ತನ್ನು ನೋಡುವ ಸುಂದರ ಅವಕಾಶವಿದೆ ಎಂದು ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನೇತ್ರ ತಜ್ಞರಾದ ಡಾ.ಅನುಶ್ರೀ ತಿಳಿಸಿದರು.
ಕ್ಲಿಕ್ ಮಾಡಿ ಓದಿ: Attack: ಹಳ್ಳದ ಬಳಿ ಸಹೋದರಿಯರ ಮೇಲೆ ಹಲ್ಲೆ | ಚಿನ್ನದ ಸರ ಕಿತ್ತು ಪರಾರಿ
ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್, ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮತ್ತು ಜಿಲ್ಲಾ ಪೊಲೀಸ್ ತರಬೇತಿ ಶಾಲೆ ಐಮಂಗಲ ಇವರುಗಳ ಸಹಯೋಗದಲ್ಲಿ 39 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ 2024ರ ಅಂಗವಾಗಿ ಐಮಂಗಲದ ಜಿಲ್ಲಾ ಪೊಲೀಸ್ ತರಬೇತಿ ಶಾಲೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೇತ್ರದಾನದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಕಣ್ಣುಗಳನ್ನು ದಾನ ಮಾಡುವುದು. ನಿಸ್ವಾರ್ಥ ಸೇವೆಯಾಗಿದೆ. ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವ ಅಂಧರ ಬಾಳಲ್ಲಿ ಸಹಾಯ ಮಾಡಲು ಸಾವಿನ ನಂತರ ನಮ್ಮ ಅಮೂಲ್ಯವಾದ ಕಣ್ಣುಗಳನ್ನು ದಾನ ಮಾಡುವುದೇ ನೇತ್ರ ದಾನವಾಗಿದೆ.
ಸಾವಿನ ನಂತರವೂ ಜಗತ್ತನ್ನು ನೋಡುವ ಅವಕಾಶ ಕಲ್ಪಿಸುವ ನೇತ್ರದಾನ ಅತ್ಯಂತ ಶ್ರೇಷ್ಠವಾದುದು. ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ವ್ಯಕ್ತಿಯ ಸಾವಿನ ಜೊತೆಗೆ ಮಣ್ಣಾಗುವ ಕಣ್ಣುಗಳನ್ನು ದಾನಮಾಡಿ ಅಂಧರಿಗೆ ನೆರವಾಗಬೇಕಿದೆ ಎಂದರು.
ನೇತ್ರದಾನ ಮಾಡುವುದರಿಂದ ಅಂಧರ ಬಾಳಿಗೆ ಬೆಳಕು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಆಚರಿಸಲಾಗುತ್ತದೆ. ಮರಣದ ನಂತರ ನೇತ್ರದಾನ ಮಾಡುವುದರ ಮೂಲಕ ಜೀವಂತವಾಗಿರೋಣ ಎಂದರು.
ಕ್ಲಿಕ್ ಮಾಡಿ ಓದಿ: CRIME: ತಹಶೀಲ್ದಾರ್ ಜೀಪ್‌ಗೆ ಬೆಂಕಿ ಹಚ್ಚಿದ ಪೃಥ್ವಿರಾಜ್ | ಅನಾಹುತ ತಪ್ಪಿಸಿದ ಸಿಬ್ಬಂದಿ
ಬಸವೇಶ್ವರ ಪುನರ್‍ಜ್ಯೋತಿ ಐ ಬ್ಯಾಂಕಿನ ಸಂಚಾಲಕರಾದ ರೋಟರಿಯನ್ ವೀರೇಶ್ ಮಾತನಾಡಿ, ನಿಸ್ವಾರ್ಥಿಯಾಗಿ ಕಣ್ಣುಗಳನ್ನು ದಾನ ಮಾಡುವತ್ತ ಎಲ್ಲರೂ ಗಮನ ಹರಿಸಬೇಕು. ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಿಸಲಾಗುತ್ತದೆ.
ಸಂಸ್ಥೆಯ ವತಿಯಿಂದ 1,800 ಅಂಧ ವ್ಯಕ್ತಿಗಳಿಗೆ ದೃಷ್ಟಿ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಮಂಗಲದ ಜಿಲ್ಲಾ ಪೊಲೀಸ್ ತರಬೇತಿ ಶಾಲೆಯ ಪ್ರಾಶುಂಪಾಲ ಪಿ.ಪಾಪಣ್ಣ ಮಾತನಾಡಿ, ನೇತ್ರದಾನ ಮಹಾದಾನ, ವ್ಯರ್ಥ ಮಾಡದೇ ಮೃತ ವ್ಯಕ್ತಿಯ ಕಣ್ಣುಗಳನ್ನು ದಾನ ಮಾಡಿ ಅಂಧರ ಬದುಕಿಗೆ ದೃಷ್ಟಿ ನೀಡೋಣ.
ಯೋಗ ಗುರುಗಳಾದ ಚಿನ್ಮಯಾನಂದರವರು ಆರೋಗ್ಯ ಮತ್ತು ಯೋಗದ ಬಗ್ಗೆ ತಿಳಿಸಿಕೊಟ್ಟರು.
ಕ್ಲಿಕ್ ಮಾಡಿ ಓದಿ: Job Fair: ಉದ್ಯೋಗ ಮೇಳ 12ಕ್ಕೆ | ಬಹುರಾಷ್ಟ್ರೀಯ ಕಂಪನಿಗಳು ಭಾಗಿ
39ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಅಂಗವಾಗಿ ನೇತ್ರದಾನ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಟಿ.ವೀರಭದ್ರಸ್ವಾಮಿ, ಸಂಸ್ಥೆಯ ನಿರ್ದೇಶಕರಾದ ಕನಕರಾಜು, ಸುರೇಶ್, ಶಿವಕುಮಾರ್, ಪುಷ್ಪಲತಾ, ನಾಗರಾಜ್, ಚಿತ್ರದುರ್ಗ ಜಿಲ್ಲಾ ಪೊಲೀಸ್ ತರಬೇತಿ ಶಾಲೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.