ಚಳ್ಳಕೆರೆ
Murugha math; ಕಾಯಕದಲ್ಲಿ ಕೈಲಾಸ ಕಾಣುವುದು ದೊಡ್ಡದು | ಡಾ.ಜಿ.ವಿ.ರಾಜಣ್ಣ
CHITRADURGA NEWS | 30 AUGUST 2024
ಚಳ್ಳಕೆರೆ: ದುಡ್ಡಿದ್ದರೆ ಎಲ್ಲಿಗೆ ಬೇಕಾದರೂ ಹೋಗಬಹುದು ಅದು ದೊಡ್ಡದಲ್ಲ. ಕಾಯಕದಲ್ಲಿ ಕೈಲಾಸ ಕಾಣುವುದು ದೊಡ್ಡದು ಎಂದು ಚಿತ್ರದುರ್ಗ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಕರಾದ ಡಾ.ಜಿ.ವಿ.ರಾಜಣ್ಣ ಹೇಳಿದರು.
ಕ್ಲಿಕ್ ಮಾಡಿ ಓದಿ: Application; ಮೀನುಗಾರಿಕೆ ಇಲಾಖೆ | ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿರುವ ಅನುಭಾವ ಶ್ರಾವಣ ಕಾರ್ಯಕ್ರಮ ಚಳ್ಳಕೆರೆ ತಾಲೂಕಿನ ನಾಗಗೊಂಡನಹಳ್ಳಿಯ ಚಿಲುಮೆ ರುದ್ರಸ್ವಾಮಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ,
ಸಾಧಕರು, ಪವಾಡ ಪುರುಷರು ಅವರಿದ್ದ, ಓಡಾಡಿದ ಜಾಗ ತಪೋಭೂಮಿಯಾಗಿ ಸಾರ್ವಜನಿಕರ ಶ್ರದ್ಧಾಭಕ್ತಿ ಕೇಂದ್ರಗಳಾಗಿವೆ. ಅದರಂತೆ ವೇದಾವತಿ ನದಿಯ ತೀರದಲ್ಲಿ ಸಮಾಧಿಯಾಗಿರುವ ಚಿಲುಮೆ ರುದ್ರ ಸ್ವಾಮಿಯವರು.
ಸಾಮಾಜಿಕ ಕಾರ್ಯಗಳ ಮೂಲಕ ಜನ ಮನ್ನಣೆಗಳಿಸಿದ್ದಾರೆ. ಚಿಲುಮೆ ಎಂದರೆ ಇಲ್ಲಿರುವ ಪ್ರದೇಶದಲ್ಲಿ ಅವರ ಸಂಕಲ್ಪ ಶಕ್ತಿಯಿಂದ ಸ್ವಲ್ಪ ಮಣ್ಣನ್ನ ಸರಿಸಿದರು ಅಲ್ಲಿ ನೀರು ಜಿನುಗುವುದನ್ನು ಕಾಣಬಹುದಿತ್ತಂತೆ. ಆ ಕಾರಣದಿಂದ ಚಿಲುಮೆ, ಚಿಲುಮೆ ರುದ್ರರು ಎಂಬುದಾಗಿ ಹೆಸರಾಗಿದೆ. ಜೊತೆಗೆ ಅವರು ಸಮಾಧಿಯಾದ ಸ್ಥಳ ಇದು. ಇಂಥ ಸಮಾಧಿ ಸ್ಥಳಗಳು ಮಹಿಮಾ ಸ್ಥಳಗಳು ಎಂದರು.
ಈ ಕ್ಷೇತ್ರವು ಕೂಡ ಅಭಿವೃದ್ಧಿ ಕಾಣುತ್ತಿದೆ. 12ನೇ ಶತಮಾನದಲ್ಲಿ ಮಾತಿಲ್ಲದ ಕೆಳ ವರ್ಗಗಳಿಗೂ ಮಾತು ಕೊಟ್ಟವರು ಬಸವಣ್ಣನವರು. ಕಷ್ಟಪಡುವ ಶ್ರಮಿಕರ ಸಂಘಟನೆ ಮಾಡಿ ಒಂದೆಡೆ ಸೇರಿಸಿದವರು ಬಸವಣ್ಣನವರು. ಅದು ಅದ್ಭುತ ಸಮ ಸಮಾಜ.
ಕ್ಲಿಕ್ ಮಾಡಿ ಓದಿ: City council election: ‘ಕೈ’ ಬಲಪಡಿಸಿದ ಜೆಡಿಎಸ್ | ಚಳ್ಳಕೆರೆ ನಗರಸಭೆ ಕಾಂಗ್ರೆಸ್ ತಕ್ಕೆಗೆ
ದೇವರನ್ನ ಹುಡುಕುತ್ತಾ ದೇವಸ್ಥಾನಗಳಿಗೆ ಓಡಾಡುವುದು ದೊಡ್ಡದಲ್ಲ. ದೇವರೆಂಬ ಭಾವನೆಯಲ್ಲಿ ಸೇರಿ ಹೋಗುವುದು ದೊಡ್ಡತನ. ಈ ರೀತಿಯ ಅನುಭವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಎಲ್ಲರೂ ಜ್ಞಾನವಂತರಾಗಬೇಕು.
ನಮ್ಮ ಬದುಕಿನ ಶಿಲ್ಪಿಗಳು ನಾವೇ ಎಂದುಕೊಂಡು ಎಲ್ಲರೂ ಒಂದೆಡೆ ಸೇರಿಕೊಂಡವರು ಬಸವೇಶ್ವರರು. ಅವರಂತೆ ನಾವು ಸಮಾಜದಲ್ಲಿ ಯಾರಿಗೂ ಕೆಡುಕನ್ನ ಮಾಡದೆ ನೋವನ್ನ ಕೊಡದೆ ಬದುಕಬೇಕು ಎಂದು ಹೇಳಿದರು.
ಮುರುಘಾಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಷಣ್ಮುಖ ಶಿವಯೋಗಿಗಳು ಕಲ್ಬುರ್ಗಿಯವರು ಜೇವರ್ಗಿಯಲ್ಲಿ ಬಸವಾದಿ ಶರಣರ ನಂತರದ 15-16ನೇ ಶತಮಾನದ ಕಾಲಘಟ್ಟದಲ್ಲಿ ಬಂದವರು. ಅವರು ಅನೇಕ ವಚನಗಳನ್ನು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರ ಬದುಕೇ ಒಂದು ನಿದರ್ಶನ ಮತ್ತು ದರ್ಶನ.
ಪ್ರಾಣಿಗಳಿಗೆ ಹೋಲಿಸಿದರೆ ನಮ್ಮದು ವಿಶೇಷವಾದ ಬದುಕು. ಅದನ್ನು ನಾವು ಸಾರ್ಥಕ ಪಡಿಸಿಕೊಳ್ಳಬೇಕು. ಇಂತಹ ಬದುಕು ನಮಗೆ ಏಕೆ ಸಿಕ್ಕಿದೆ, ಅದನ್ನ ಹೇಗೆ ಸಾರ್ಥಕ ಪಡಿಸಿಕೊಳ್ಳುವುದು. ನಾವು ಸಮಾಜದಲ್ಲಿ ಹೇಗೆ ಬದುಕಬೇಕು ಇವೆಲ್ಲದರ ಮಾಹಿತಿಗಳನ್ನ ನಮಗೆ ಬಸವಾದಿ ಶರಣರು ಒದಗಿಸಿಕೊಟ್ಟಿದ್ದಾರೆ.
ಕ್ಲಿಕ್ ಮಾಡಿ ಓದಿ: Sirigere mata: ಉತ್ತರಾಧಿಕಾರಿ ನೇಮಕದ ಹೊಣೆ ಭಕ್ತರ ಮೇಲಿದೆ | ಸಿರಿಗೆರೆ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸ್ಪಷ್ಟನೆ
ಕೆಲವೊಮ್ಮೆ ಮೂಕನಾಗುವುದನ್ನು ಕಲಿಯಬೇಕು. ಇನ್ನೂ ಕೆಲವೊಮ್ಮೆ ಎಷ್ಟು ಬೇಕೋ ಅಷ್ಟು ಮಿತವಾದ ಮಾತನಾಡಬೇಕು. ಏನು ಮಾಡಬೇಕು ಎಂಬುದನ್ನ ಜೀವನ ಪೂರ್ತಿ ಕಲಿಯುತ್ತೇವೆ. ಆದರೆ ಏನು ಮಾಡಬಾರದು ಎಂಬುದರ ಬಗ್ಗೆ ಗಮನಹರಿಸಬೇಕು.
ತಂದೆ-ತಾಯಿಗಳು ಸಂಸ್ಕಾರವಂತರಾದರೆ ಅದನ್ನು ಮಕ್ಕಳು ಅನುಸರಿಸುತ್ತಾರೆ. ಈ ರೀತಿಯ ಮಾರ್ಗದರ್ಶನ ನೀಡಿದವರು ನಮ್ಮ ಷಣ್ಮುಖ ಶಿವಯೋಗಿಗಳು. ನಮ್ಮ ನಮ್ಮ ಪಾತ್ರಗಳನ್ನ ನಾವು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು. ಸತ್ಯ- ಶುದ್ಧತೆಯಿಂದ ಬದುಕನ್ನು ನಿಭಾಯಿಸುವವರು ನಾವಾಗಬೇಕು.
ಜಯದೇವ ಶ್ರೀಗಳು ಕಟ್ಟಿದ್ದ ಪ್ರಸಾದ ನಿಲಯವನ್ನ ಗಮನಿಸಿದ ಸರ್ಕಾರಗಳು ಕೂಡ ಉಚಿತ ಹಾಸ್ಟೆಲ್ ತೆರೆಯಲು ಮುಂದಾದರೂ ಎನ್ನುವುದು ಇತಿಹಾಸ. ಇಂಥ ಎಲ್ಲ ಮಹಾತ್ಮರ ಮಾರ್ಗದರ್ಶನ ಅನುಸರಿಸುವ ಮೂಲಕ ಒಂದೊಳ್ಳೆಯ ಸಮಾಜ ನಿರ್ಮಾಣ ಕಾರ್ಯ ಆಗಬೇಕೆಂಬ ಆಶಯ ಎಲ್ಲರಿಂದ ಬರಲಿ ಎಂದು ನುಡಿದರು.
ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದರಿಂದ ವಚನ ಪ್ರಾರ್ಥನೆ ನಡೆಯಿತು.
ಈ ಸಂದರ್ಭದಲ್ಲಿ ಶಿವಮೂರ್ತಿ, ಬಂಡೆ ರುದ್ರಪ್ಪ, ಹೆಚ್. ಸಿ. ಮಹೇಶ್, ಪಿ.ವೀರೇಂದ್ರ ಕುಮಾರ್, ಅಶೋಕ್, ಚೆಲಮಣಿ, ರವಿ, ಓಬಯ್ಯ ಇದ್ದರು.