Connect with us

    Job’s ; ಚಿತ್ರದುರ್ಗ, ಹೊಳಲ್ಕೆರೆ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಅಹ್ವಾನ 

    jobs in chitradurga news

    ಮುಖ್ಯ ಸುದ್ದಿ

    Job’s ; ಚಿತ್ರದುರ್ಗ, ಹೊಳಲ್ಕೆರೆ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಅಹ್ವಾನ 

    CHITRADURGA NEWS | 06 AUGUST 2024

    ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ(Job’s)ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 30 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

    ಕ್ಲಿಕ್ ಮಾಡಿ ಓದಿ: RESERVATION: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ

    ಆಸಕ್ತ ಅರ್ಹ ಅಭ್ಯರ್ಥಿಗಳು ಇಲಾಖೆ ವೆಬ್ಸೈಟ್ https://karnemakaone.kar.nic.in/abcd/ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹದು.

    ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮೀಸಲಾತಿ ವಿವರ:

    ಜೆ.ಎನ್.ಕೋಟೆ ಗ್ರಾ.ಪಂ.ನ ಜೆ.ಎನ್.ಕೋಟೆ-ಬಿ ಹಾಗೂ ಜೆ.ಸಿ.ಹಳ್ಳಿ ಗೊಲ್ಲರಹಟ್ಟಿ ಅಂಗನವಾಡಿ ಕೇಂದ್ರ ಎಸ್.ಟಿ ವರ್ಗಕ್ಕೆ ಮತ್ತು ಇಂಗಳದಾಳ್ ಗ್ರಾ.ಪಂ.ನ ಎರೇಹಳ್ಳಿ ಅಂಗನವಾಡಿ ಕೇಂದ್ರ ಎಸ್.ಸಿ ಗೆ ವರ್ಗಕ್ಕೆ ಮೀಸಲಿವೆ.

    ಅಂಗನವಾಡಿ ಸಹಾಯಕಿಯರ ಮೀಸಲಾತಿ ವಿವರ:

    ಚಿತ್ರದುರ್ಗ ನಗರದ ವಾರ್ಡ್ ಸಂಖ್ಯೆ -27 ರ ಕೆ.ಎಸ್.ಎಫ್.ಸಿ ಹತ್ತಿರದ ಅಂಗನವಾಡಿ ಕೇಂದ್ರ, ವಾರ್ಡ್ ಸಂಖ್ಯೆ- 01 ರ ಸಣ್ಣದುಮ್ಮಿ, ವಾರ್ಡ್ ಸಂಖ್ಯೆ-29 ರ ಬಸಪ್ಪ ಆಸ್ಪತ್ರೆ ಅಂಗನವಾಡಿ ಕೇಂದ್ರ, ವಾರ್ಡ್ ಸಂಖ್ಯೆ-12 ರ ಫಾತಿಮಾ ಮಸೀದಿ ಅಂಗನವಾಡಿ ಕೇಂದ್ರ, ವಾರ್ಡ್ ಸಂಖ್ಯೆ-13 ರ ನೆಹರು ನಗರ ಅಂಗನವಾಡಿ ಕೇಂದ್ರ-ಬಿ ಮತ್ತು ಡಿ ಕೇಂದ್ರ, ವಾರ್ಡ್ ಸಂಖ್ಯೆ-11 ರ ಚೇಳಗುಡ್ಡ-ಎ, ಜಾನುಕೊಂಡ ಗ್ರಾ.ಪಂ.ನ ಗಂಜಿಗಟ್ಟೆ, ಸಿದ್ದಾಪುರ ಗ್ರಾ.ಪಂ.ನ ಮಾನಂಗಿ, ಅನ್ನೇಹಾಳ್ ಗ್ರಾ.ಪಂ.ನ ಅನ್ನೇಹಾಳ್ ಗೊಲ್ಲರಹಟ್ಟಿ, ಎಂ.ಕೆ.ಹಟ್ಟಿ ಗ್ರಾ.ಪಂ.ನ ಎಂ.ಆರ್.ನಗರದ – ಎ ಅಂಗನವಾಡಿ ಕೇಂದ್ರ ಇತರೆ ವರ್ಗಕ್ಕೆ ಮತ್ತು ಮದಕರಿಪುರ ಗ್ರಾ.ಪಂ.ನ ಮದಕರಿಪುರ-ಎ ಅಂಗನವಾಡಿ ಕೇಂದ್ರ ಎಸ್.ಸಿ ಗೆ ಮೀಸಲಿವೆ.

    ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾ ಕ್ರೀಡಾಂಗಣ ಹತ್ತಿರದ, ಜಿಲ್ಲಾ ಭಾಲಭವನ ಆವರಣದಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹದು.

    ಕ್ಲಿಕ್ ಮಾಡಿ ಓದಿ: APMC: ಆಗಸ್ಟ್ 6 ರಿಂದ ಹತ್ತಿ ಮಾರುಕಟ್ಟೆ ಬಂದ್ | ನಾಳೆಯಿಂದ ರೈತರು ಮಾರುಕಟ್ಟೆಗೆ ಹತ್ತಿ ತರದಂತೆ ಸೂಚನೆ

    ಹೊಳಲ್ಕೆರೆ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

    ಹೊಳಲ್ಕೆರೆ: ಹೊಳಲ್ಕೆರೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ನಿವೃತ್ತಿ, ಇತರೆ ಕಾರಣಗಳಿಂದ ತೆರವಾಗಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 30 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

    ಹೊಳಲ್ಕೆರೆ ತಾಲ್ಲೂಕಿನಾದ್ಯಂತ 9 ಅಂಗನವಾಡಿ ಕಾರ್ಯಕರ್ತೆ, 1 ಮಿನಿ ಅಂಗನವಾಡಿ ಕಾರ್ಯಕರ್ತೆ ಮತ್ತು 14 ಅಂಗನವಾಡಿ ಸಹಾಯಕಿರ ಹುದ್ದೆಗಳಿಗೆ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ www.anganwadirecuruit.kar.nic.in ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 19 ರಿಂದ 35 ವರ್ಷ ವಯೋಮಿತಿಯೊಳಗಿರಬೇಕು.

    ಕ್ಲಿಕ್ ಮಾಡಿ ಓದಿ: Mass marriage: ದುಂದು ವೆಚ್ಚಕ್ಕೆ ಕಡಿವಾಣ ಹಾಕಿ | ಡಾ.ಬಸವಕುಮಾರ ಸ್ವಾಮೀಜಿ

    ಅಂಗನವಾಡಿ ಕಾರ್ಯಕರ್ತೆ ಮೀಸಲಾತಿ ವಿವರ:

    ತಾಳಿಕಟ್ಟೆ ಗ್ರಾ.ಪಂ.ನ ತಾಳಿಕಟ್ಟೆ-ಎಫ್, ತುಪ್ಪದಹಳ್ಳಿ ಗ್ರಾ.ಪಂ.ನ ಸಿಂಗೇನಹಳ್ಳಿ, ಅರೇಹಳ್ಳಿ ಗ್ರಾ.ಪಂ.ನ ಜೈಪುರ, ಮುತ್ತುಗದೂರು ಗ್ರಾ.ಪಂ.ನ ಕಾಗಳಗೆರೆ ಗೊಲ್ಲರಹಟ್ಟಿ, ಅಂದನೂರು ಗ್ರಾ.ಪಂ.ನ ಅಂದನೂರು-ಬಿ, ಶಿವಗಂಗಾ ಗ್ರಾ.ಪಂ.ನ ಶಿವಗಂಗಾ-ಎ, ಗುಂಜಿಗೂರು ಗ್ರಾ.ಪಂ.ನ ಎಸ್.ಹೆಚ್.ಹಳ್ಳಿ ಅಂಗನವಾಡಿ ಕೇಂದ್ರಗಳ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಇತರೆ ವರ್ಗಕ್ಕೆ ಹಾಗೂ ಚಿಕ್ಕೆಮ್ಮಿಗನೂರು ಗ್ರಾ.ಪಂ.ನ ಕೊಡಗವಳ್ಳಿ ಹಟ್ಟಿ ಪರಿಶಿಷ್ಟ ಪಂಗಡಕ್ಕೆ ಹಾಗೂ ಗುಂಡೇರಿ ಗ್ರಾ.ಪಂ.ನ ಗುಂಡೇರಿ ಕಾವಲ್ ಅಂಗನವಾಡಿ ಕೇಂದ್ರ ಪರಿಶಿಷ್ಟ ಜಾತಿಗೆ ಮತ್ತು ಅಂದನೂರು ಗ್ರಾ.ಪಂ. ನ ಇಂಗಳದಹಳ್ಳಿ ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

    ಅಂಗನವಾಡಿ ಸಹಾಯಕಿಯರ ಮೀಸಲಾತಿ ವಿವರ:

    ಗುಂಡೇರಿ ಗ್ರಾ.ಪಂ.ನ ಮಾಳೇನಹಳ್ಳಿ, ಆರ್.ನುಲೇನೂರ್ ಗ್ರಾ.ಪಂ.ನ ಬಸಾಪುರ, ಅರೇಹಳ್ಳಿ ಗ್ರಾ.ಪಂ.ನ ಅರೇಹಳ್ಳಿ ಆರ್.ಎಸ್, ಶಿವಪುರ ಗ್ರಾ.ಪಂ.ನ ಅಗ್ರಹಾರ, ರಾಮಗಿರಿ ಗ್ರಾ.ಪಂ.ನ ರಾಮಗಿರಿ-ಎ ಹಾಗೂ ದಾಸೀಕಟ್ಟೆ, ಗಂಗಸಮುದ್ರ ಗ್ರಾ.ಪಂ.ನ ತಾಳಕಟ್ಟ-ಎ, ಬಿದರಕೆರೆ ಗ್ರಾ.ಪಂ.ನ ಬಿದರಕೆರೆ, ಉಪ್ಪರಿಗೇನಹಳ್ಳಿ ಗ್ರಾ.ಪಂ.ನ ಗೊಲ್ಲರಹಟ್ಟಿ ಅಂಗನವಾಡಿ ಕೇಂದ್ರ ಅಂಗನವಾಡಿ ಸಹಾಯಕಿಯರ ಹುದ್ದೆ ಇತರೆ ವರ್ಗಕ್ಕೆ ಮೀಸಲಿವೆ. ಉಳಿದಂತೆ ತಾಳ್ಯ ಗ್ರಾ.ಪಂ.ನ ವೆಂಕಟೇಶಪುರ,ಅಂದನೂರು ಗ್ರಾ.ಪಂ.ನ ಗಂಜಿಗಟ್ಟಿ ಲಂಬಾಣಿಹಟ್ಟಿ, ಚಿತ್ರಹಳ್ಳಿ ಗ್ರಾ.ಪಂ.ನ ಚಿತ್ರಹಳ್ಳಿ ಗೇಟ್ ಮತ್ತು ಹೊಳಲ್ಕೆರೆ ನಗರದ ವಾರ್ಡ ನಂ-16 ರ ಎ.ಕೆ. ಕಾಲೋನಿ ಅಂಗನವಾಡಿ ಕೇಂದ್ರದ ಪರಿಶಿಷ್ಟ ಜಾತಿಗೆ ಹಾಗೂ ರಾಮಗಿರಿ ಗ್ರಾ.ಪಂ.ನ ರಾಮಗಿರಿ-ಸಿ ಅಂಗನವಾಡಿ ಕೇಂದ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

    ಕ್ಲಿಕ್ ಮಾಡಿ ಓದಿ: VV Sagar: ವಿವಿ ಸಾಗರದತ್ತ ಭದ್ರೆ ಪಯಣ | ಬೆಟ್ಟದಾವರೆ ಮೋಟರ್‌ ಪಂಪ್‌ ಚಾಲನೆ

    ಹೆಚ್ಚಿನ ಮಾಹಿತಿಗಾಗಿ ಹೊಳಲ್ಕೆರೆ ನಗರದ ಎನ್.ಹೆಚ್.-13 ರಸ್ತೆಯ ಹರಿಕೃಪ ಬಿಲ್ಡಿಂಗ್ ನಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹದು ಎಂದು ಪ್ರಕಟಣೆ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top