ಮುಖ್ಯ ಸುದ್ದಿ
Competition: ಪ್ರತಿಭಾ ಕಾರಂಜಿ ಸ್ಪರ್ಧೆ | ವಿದ್ಯಾ ವಿಕಾಸ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಸಾಧನೆ

CHITRADURGA NEWS | 02 AUGUST 2024
ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಚಿತ್ರದುರ್ಗದ ಉತ್ತರ ಕ್ಲಸ್ಟರ್ ಮಟ್ಟದಲ್ಲಿ ಜುಲೈ 30 ಹಾಗೂ 31 ರಂದು ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಯಿತು. ಶಾಲೆಯ ಕಿರಿಯ,ಹಿರಿಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಮೊದಲನೇ ಹಂತ, ಎರಡನೇ ಹಂತ ಹಾಗೂ ಮೂರನೇ ಹಂತದಲ್ಲಿ ಪ್ರಶಸ್ತಿಗಳಿಸಿದ್ದಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹಂತ 1: 4 ನೇ ತರಗತಿಯ ಬಿ.ಎನ್.ವಿನಯ್ ಲಘು ಸಂಗೀತ, ಭಕ್ತಿಗೀತೆಯಲ್ಲಿ ಪ್ರಥಮ ಹಾಗೂ ದೇಶ ಭಕ್ತಿಗೀತೆಯಲ್ಲಿ ದ್ವಿತೀಯ ಸ್ಥಾನ, ವೀರ್ ಸಮರ್ಥ್ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ.
ಇದನ್ನೂ ಓದಿ: ಬಾಲ್ಯ ವಿವಾಹ ಪ್ರಕರಣ | ಎಫ್‌ಐಆರ್ ದಾಖಲು
ಹಂತ 2: 7ನೇ ತರಗತಿಯ ಕೆ.ಎಸ್.ಮೈತ್ರಿ ಲಘು ಸಂಗೀತ (ದ್ವಿತೀಯ), 6ನೇ ತರಗತಿಯ ಎಂ.ದಿಕ್ಷೀತಾ ಕಥೆ ಹೇಳುವುದು (ತೃತೀಯ), 5ನೇ ತರಗತಿಯ ವಿ.ರಿತಿಕಾ ಚಿತ್ರಕಲೆ (ದ್ವಿತೀಯ), 6 ನೇ ತರಗತಿಯ ಎನ್.ಆಧ್ಯ ಭಕ್ತಿಗೀತೆ, ದೇಶ ಭಕ್ತಿಗೀತೆ (ದ್ವಿತೀಯ), 5 ನೇ ತರಗತಿಯ ಕೀರ್ತಿ ಭೂಷಣ್ ರೆಡ್ಡಿ ಪದ್ಯ ವಾಚನ (ತೃತೀಯ).
ಇದನ್ನೂ ಓದಿ: ಸ್ನೇಹ ಬೆಳೆಸಿ ಬಾಲಕಿ ಮೇಲೆ ಅತ್ಯಾಚಾರ | ಪೋಕ್ಸೊ, ಜಾತಿ ನಿಂದನೆ ಪ್ರಕರಣ ದಾಖಲು
ಹಂತ 3: 8ನೇ ತರಗತಿಯ ಡಿ.ವಿ.ಸುಹಾಸ್ ಭಾವಗೀತೆ (ದ್ವಿತೀಯ), 9ನೇ ತರಗತಿಯ ಜಿ.ಎಂ.ವರ್ಣಿಕ ಧಾರ್ಮಿಕ ಪಠಣ ಸಂಸ್ಕೃತ (ತೃತೀಯ), ಜಿ.ಎಂ.ವಂಶಿಕ ರಂಗೋಲಿ (ತೃತೀಯ), ಮಣಿಕಂಠ ಪ್ರಬಂಧ ಸ್ಪರ್ಧೆ (ಪ್ರಥಮ).

ಚಿತ್ರದುರ್ಗದ ಉತ್ತರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮೊದಲ ಮತ್ತು ಎರಡನೇ ಹಂತದಲ್ಲಿ ವಿಜೇತರಾದ ವಿದ್ಯಾ ವಿಕಾಸ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು.
10ನೇ ತರಗತಿಯ ಆರ್.ಎಂ.ಇಂಚರ ಕನ್ನಡ ಭಾಷಣ (ತೃತೀಯ), 10ನೇ ತರಗತಿಯ ಸೈಯೆದಾ ಅಫೀಪಾ ಹಿಂದಿ ಭಾಷಣ (ಪ್ರಥಮ), ಜಿ.ಆರ್.ತೃಷಾ ಜಾನಪದ ಗೀತೆ (ಪ್ರಥಮ), ನವ್ಯಶ್ರೀ ಚಿತ್ರಕಲೆ (ತೃತೀಯ), ಡಿವಿ.ನವಮಿ ಚರ್ಚಾಸ್ಪರ್ಧೆ (ಪ್ರಥಮ), ಜಿ.ಎಂ.ವಂಶಿಕ ರಂಗೋಲಿ ಸ್ಪರ್ಧೆ (ತೃತೀಯ), ಸನಿಹಾ ಸಿಂಚನ ಆಶುಭಾಷಣ (ಪ್ರಥಮ), ನಮ್ಯ ಭರತನಾಟ್ಯ (ದ್ವಿತೀಯ), ನಮ್ಯ ಮತ್ತುತಂಡ ಜಾನಪದ ನೃತ್ಯ (ಪ್ರಥಮ), ಜಾಹ್ನವಿ ಮತ್ತು ಐಮಾನ್ ರಸಪ್ರಶ್ನೆ ಸ್ಪರ್ಧೆ (ಪ್ರಥಮ) ಸ್ಥಾನಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಐಸಿಎಸ್‌ಇ ಪ್ರಾಂಶುಪಾಲ ಪಿ.ಬಸವರಾಜಯ್ಯ, ಉಪ ಪ್ರಾಂಶುಪಾಲ ಬಿ.ಅವಿನಾಶ್, ಮುಖ್ಯ ಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
