ಮುಖ್ಯ ಸುದ್ದಿ
ಸಂಸದ ಗೋವಿಂದ ಕಾರಜೋಳ ಆಪ್ತ ಸಹಾಯಕರಾಗಿ ಸಿ.ಹೆಚ್.ದೇವರಾಜ್

CHITRADURGA NEWS | 05 JULY 2024
ಚಿತ್ರದುರ್ಗ: ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳರವರ ಆಪ್ತ ಸಹಾಯಕರಾಗಿ ಫಾರ್ಮಸಿ ಅಧಿಕಾರಿ ದಾವಣಗೆರೆಯ ಸಿ.ಹೆಚ್.ದೇವರಾಜ್ ಜಿಲ್ಲಾಧಿಕಾರಿ ಕಚೇರಿಯಿಂದ ಆದೇಶ ಪತ್ರ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇದನ್ನೂ ಓದಿ: Himalaya; ಹಿಮಾಲಯ ಟ್ರಕ್ಕಿಂಗ್ ಮಾಡಿದ ದುರ್ಗದ ವೈದ್ಯ ಡಾ.ಪ್ರಹ್ಲಾದ್
ದಾವಣಗೆರೆ ಲೋಕಸಭಾ ಸದಸ್ಯರ ಆಪ್ತ ಸಹಾಯಕನಾಗಿ ಕಳೆದ ಇಪ್ಪತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿರುವ ಅನುಭವವುಳ್ಳ ಸಿ.ಹೆಚ್.ದೇವರಾಜ್ ಈಗ ಚಿತ್ರದುರ್ಗ ಸಂಸದರ ಆಪ್ತ ಸಹಾಯಕರಾಗಿ ನಿಯೋಜನೆಗೊಂಡಿದ್ದು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಪುರಸ್ಕøತ ಯೋಜನೆಗಳಾದ ಸ್ಮಾರ್ಟ್‍ಸಿಟಿ ಯೋಜನೆ, ಕುಡಿಯುವ ನೀರಿನ ಜಲಸಿರಿ ಯೋಜನೆ, ಕೇಂದ್ರಿಯ ವಿದ್ಯಾಲಯ, ದಾವಣಗೆರೆ ಹಾಗೂ ಹರಿಹರದಲ್ಲಿ ನೂತನ ರೈಲು ನಿಲ್ದಾಣಗಳ ನಿರ್ಮಾಣ, ಬುದ್ದಿ ಮಾಂಧ್ಯ ಮಕ್ಕಳಿಗೆ ಸಿ.ಆರ್.ಸಿ. ಕೇಂದ್ರ, ಕೆರೆ ತುಂಬಿಸುವ ಯೋಜನೆಗಳು ಹೀಗೆ ಕೇಂದ್ರದ ಅನೇಕ ಯೋಜನೆಗಳನ್ನು ದಾವಣಗೆರೆಗೆ ತರುವಲ್ಲಿ ಸಂಸದರ ಜೊತೆ ಕೈಜೋಡಿಸಿದ್ದ ಸಿ.ಹೆಚ್.ದೇವರಾಜ್ ಚಿತ್ರದುರ್ಗದಲ್ಲಿಯೂ ಸಂಸದರ ಆಪ್ತ ಸಹಾಯಕರಾಗಿ ಕೆಲಸ ಮಾಡುವ ಉತ್ಸುಕದಲ್ಲಿದ್ದಾರೆ.
