Connect with us

    ಫೈಓವರ್ ನಿರ್ಮಾಣಕ್ಕೆ ಕರುನಾಡ ವಿಜಯಸೇನೆ ಅಗ್ರಹ 

    ಫೈಓವರ್ ನಿರ್ಮಾಣಕ್ಕೆ ಕರುನಾಡ ವಿಜಯಸೇನೆ ಅಗ್ರಹ 

    ಮುಖ್ಯ ಸುದ್ದಿ

    ಫೈಓವರ್ ನಿರ್ಮಾಣಕ್ಕೆ ಕರುನಾಡ ವಿಜಯಸೇನೆ ಅಗ್ರಹ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 25 JUNE 2024

    ಚಿತ್ರದುರ್ಗ: ಚಳ್ಳಕೆರೆ ಟೋಲ್‍ಗೇಟ್‍ನಿಂದ ಆರ್.ಟಿ.ಓ.ಆಫೀಸ್ ರಸ್ತೆವರೆಗೆ ಫೈಓವರ್ ನಿರ್ಮಾಣ ಮಾಡುವಂತೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಅಗ್ರಹಿಸಿದರು.

    ಇದನ್ನೂ ಓದಿ: ಅಂಬೇಡ್ಕರ್ ವೃತ್ತದಲ್ಲಿ ಗಾಳಿಗೆ ಬಿದ್ದ ಮರ | ಪಲ್ಸರ್ ಬೈಕ್ ಟ್ಯಾಂಕ್ ಜಖಂ

    ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದರು.

    ಡಾನ್‍ಬೋಸ್ಕೋ ಶಾಲೆ, ಬಸವೇಶ್ವರ ಆಸ್ಪತ್ರೆ, ಲಕ್ಷ್ಮಿವೆಂಕಟೇಶ್ವರ ಶಾಲಾ ಕಾಲೇಜು ಮತ್ತು ನರ್ಸಿಂಗ್ ಕಾಲೇಜುಗಳು ಇರುವುದರಿಂದ ಹೆದ್ದಾರಿ ದಾಟಿ ಬರಬೇಕಾಗುವ ಸಂದರ್ಭದಲ್ಲಿ ಅನೇಕ ಅಪಘಾತಗಳಾಗಿ ಸಾವು-ನೋವು ಸಂಭವಿಸುತ್ತಿರುವುದರಿಂದ ಇಲ್ಲಿ ಫೈಓವರ್ ನಿರ್ಮಾಣ ಮಾಡಿ ಅಮೂಲ್ಯವಾದ ಪ್ರಾಣಗಳನ್ನು ಕಾಪಾಡಬೇಕಾಗಿದೆ.

    ಬಸವೇಶ್ವರ ಆಸ್ಪತ್ರೆ ಹಾಗೂ ಡಾನ್‍ಬೋಸ್ಕೋ ಶಾಲೆಗೆ ಬರುವವರು ಜೀವ ಕೈಯಲ್ಲಿ ಹಿಡಿದುಕೊಳ್ಳುವಂತಾಗಿದೆ. ಇಲ್ಲಿ ನಡೆಯುವ ಅನಾಹುತಗಳಿಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

    ಇದನ್ನೂ ಓದಿ: ಕರ್ನಾಟಕ ಸಂಭ್ರಮ 50 | ಕೋಟೆನಾಡಿಗೆ ಕರ್ನಾಟಕ ಜ್ಯೋತಿ ರಥಯಾತ್ರೆ

    ಹತ್ತು ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಎಚ್ಚರಿಸಿದರು.

    ಪ್ರತಿಭಟನೆಯಲ್ಲೂ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಯದರ್ಶಿ ಜಗದೀಶ್, ಉಪಾಧ್ಯಕ್ಷೆ ರತ್ನಮ್ಮ, ರಾಜ್ಯ ಸಮಿತಿಯ ನಿಸಾರ್ ಅಹಮದ್, ಸಂಚಾಲಕ ಹರೀಶ್‍ಕುಮಾರ್, ಯುವ ಘಟಕದ ಅಧ್ಯಕ್ಷ ನಾಗರಾಜ್‍ಮುತ್ತು, ನಾಗೇಶ್ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top