Connect with us

    ಹೆಸರಿಗಷ್ಟೇ ಶುದ್ಧ ಕುಡಿಯುವ ನೀರಿನ ಘಟಕ | ನೀರು ಮಾತ್ರ ಕೇಳ್ಬೇಡಿ

    ಕೆಟ್ಟು ನಿಂತಿರುವ ಶುದ್ದ ಕುಡಿಯುವ ನೀರಿನ ಘಟಕ

    ಚಳ್ಳಕೆರೆ

    ಹೆಸರಿಗಷ್ಟೇ ಶುದ್ಧ ಕುಡಿಯುವ ನೀರಿನ ಘಟಕ | ನೀರು ಮಾತ್ರ ಕೇಳ್ಬೇಡಿ

    CHITRADURGA NEWS | 08 JUNE 2024

    (ವಿಶೇಷ ವರದಿ ಸಿ.ಕಾಟೇಶ್ )

    ಚಳ್ಳಕೆರೆ: ತಾಲೂಕಿನ ನನ್ನಿವಾಳ ಪಂಚಾಯ್ತಿ ವ್ಯಾಪ್ತಿಗೊಳಪಡುವ ಪೂಜಾರಿ ಪಾಲಯ್ಯನ ಹಟ್ಟಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಿ ವರ್ಷಗಳೆ ಕಳೆದರು ನೀರು ಮಾತ್ರ ಇಲ್ಲ.

    ಇದನ್ನೂ ಓದಿ: ಹೊಳಲ್ಕೆರೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು |  ಅರ್ಜಿ ಅಹ್ವಾನ 

    ಸಾರ್ವಜನಿಕರಿಗೆ ಉಪಯೋಗವಾಗಲಿ ಎನ್ನುವ ದೃಷ್ಠಿಯಿಂದ ಲಕ್ಷಾಂತರ ರೂ. ಖರ್ಚು ಮಾಡಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಿದೆ. ಆದರೆ ಜನರಿಗೆ ಕುಡಿಯಲು ನೀರು ಕೊಡದೆ ಘಟಕವನ್ನು ಪ್ರದರ್ಶನದ ವಸ್ತುವಂತೆ ಇರಿಸಲಾಗಿದೆ. ದುರಸ್ಥಿಗೆ ಬಂದು ವರ್ಷಗಳೇ ಕಳೆದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು.

    ಜನರ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಲಕ್ಷಾಂತರ ರೂ. ವ್ಯಯಿಸಿ ಶುದ್ದ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಘಟಕ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ವಿವಿಧ ಕಾರಣಗಳಿಂದ ಕೈಕೊಡುವ ಯಂತ್ರೋಪಕರಣಗಳಿಂದ, ದುರಸ್ಥಿ ಕಾಣದೆ ಸಂಪೂರ್ಣ ಹಾಳಾಗಿದೆ.

    ಇದನ್ನೂ ಓದಿ: ಕು.ಬೇಬಿ ಪ್ರಿಯಾಂಕ ಭರತನಾಟ್ಯ ರಂಗ ಪ್ರವೇಶ

    ಸುಮಾರು 2 ರಿಂದ 3 ವರ್ಷಗಳೇ ಕಳೆದರೂ ಸ್ಥಳೀಯ ಅಧಿಕಾರಿಗಳು ಘಟಕವನ್ನು ದುರಸ್ಥಿಗೊಳಿಸಿ, ಶುದ್ದ ಕುಡಿಯುವ ನೀರು ಕೊಡದೆ ಬೇಜವಾಬ್ದಾರಿ ತೋರುತ್ತಿದ್ದಾರೆ.

    ಗ್ರಾಮದಲ್ಲಿ 3 ಮಿನಿ ನೀರಿನ ಟ್ಯಾಂಕ್‌ಗಳಿದ್ದು, 2 ಟ್ಯಾಂಕ್‌ಗಳಿಗೆ ನೀರು ಸರಬರಾಜಾಗುತ್ತಿಲ್ಲ. ಟ್ಯಾಂಕ್‌ಗಳನ್ನು ಸ್ವಚ್ಚಗೊಳಿಸಿ ವರ್ಷಗಳೇ ಕಳೆದಿವೆ, ಟ್ಯಾಂಕ್‌ಗಳ ಸುತ್ತಲೂ ಸ್ವಚ್ಚತೆ ಎನ್ನುವುದು ಮರೀಚಿಕೆಯಾಗಿ, ಗಿಡ ಗಂಟೆಗಳು ಬೆಳೆದು ನಿಂತು ಕೊಳಚೆಯಿಂದ ಗಬ್ಬು ನಾರುತ್ತಿದೆ.

    ಗ್ರಾಮಕ್ಕೆ ಕುಡಿಯುವ ನೀರು ಸರಬರಾಜಾಗುವ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರಿದ್ದರೂ, ಸಮರ್ಪಕವಾಗಿ ಕುಡಿಯುವ ನೀರು ಒದಗಿಸುತ್ತಿಲ್ಲ. ಇದು ಕೇವಲ ಇದು ಒಂದೇ ಗ್ರಾಮದ ಸಮಸ್ಯೆಯಲ್ಲಾ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಬಹುತೇಕ ಗ್ರಾಮಗಳ ಪರಿಸ್ಥಿತಿ ಇದು.

    ಇದನ್ನೂ ಓದಿ: ವಾಣಿವಿಲಾಸ ಸಾಗರಕ್ಕೆ ಮತ್ತೆ ಹರಿದ ನೀರು | ಈಗ ಜಲಾಶಯದ ನೀರಿನ ಮಟ್ಟ ಎಷ್ಟಿದೆ

    ಕೆಲವು ದಿನಗಳ ಹಿಂದಷ್ಟೇ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸರಬರಾಜಿನಿಂದ ವಾಂತಿ, ಭೇದಿಯಿಂದ ಹಲವಾರು ಜನರ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.

    ಈ ರೀತಿಯ ಘಟನೆ ಮರುಕಳಿಸುವ ಮುನ್ನವೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಚಳ್ಳಕೆರೆ

    To Top