Connect with us

    ಕೋಟೆನಾಡಲ್ಲಿ ತಡರಾತ್ರಿ ಅಬ್ಬರಿಸಿದ ಮಳೆ | ಕೊಚ್ಚಿ ಹೋದ ರಸ್ತೆ, ಕುಸಿದು ಬಿದ್ದ ಮನೆ

    ಮುಖ್ಯ ಸುದ್ದಿ

    ಕೋಟೆನಾಡಲ್ಲಿ ತಡರಾತ್ರಿ ಅಬ್ಬರಿಸಿದ ಮಳೆ | ಕೊಚ್ಚಿ ಹೋದ ರಸ್ತೆ, ಕುಸಿದು ಬಿದ್ದ ಮನೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 21 MAY 2024
    ಚಿತ್ರದುರ್ಗ: ಜಿಲ್ಲೆಯಾದ್ಯಂತ‌ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದ್ದು, ರೈತರು ಸಂತಸಗೊಂಡಿದ್ದಾರೆ. ಕೆರೆ, ಕಟ್ಟೆಗಳಿಗೆ ಜೀವಕಳೆ ಬಂದಿದೆ.

    ರಾತ್ರಿ 7 ಗಂಟೆ ಸುಮಾರಿಗೆ ನಿಧಾನಗತಿಯಲ್ಲಿ ಪ್ರಾರಂಭವಾದ ಮಳೆ 9 ರ ವೇಳೆಗೆ ಅಬ್ಬರಿಸಿತು. ಆಕಾಶಕ್ಕೆ ತೂತು ಬಿದ್ದಂತೆ ಕ್ಷಣ ಮಾತ್ರವೂ ಬಿಡುವು ನೀಡದೆ ಸುರಿಯಿತು.

    ಮಳೆಯ ಅಬ್ಬರಕ್ಕೆ ರಸ್ತೆಗಳು ಕೊಚ್ಚಿ ಹೋಗಿದ್ದು, ಮನೆಗಳು ಭಾಗಶಃ ಹಾನಿಗೆ ತುತ್ತಾಗಿವೆ. ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಮೊಳಕಾಲ್ಮುರು, ನಾಯಕನಹಟ್ಟಿ, ಚಳ್ಳಕೆರೆ, ಧರ್ಮಪುರ, ಚಿಕ್ಕಜಾಜೂರು, ಸಿರಿಗೆರೆ ಭಾಗದಲ್ಲಿ ತುಸು ಹೆಚ್ಚಾಗಿ ಸುರಿದಿದೆ.

    ಚಿಕ್ಕಜಾಜೂರಿನಲ್ಲಿ ಬಡಾವಣೆಗಳು ಜಲಾವೃತಗೊಂಡಿವೆ. ಇತ್ತ ಧರ್ಮಪುರ ಹೋಬಳಿಯಲ್ಲಿ ಧರ್ಮಪುರ- ಅರಳೀಕೆರೆ ಸಂಪರ್ಕ ರಸ್ತೆ ಕುಸಿದಿದ್ದು ಕಾರೊಂದು ಜಖಂಗೊಂಡಿದೆ. ಧರ್ಮಸ್ಥಳಕ್ಕೆ ಹೋಗಿ ತಡರಾತ್ರಿ ಅರಳೀಕೆರೆ ಪಾಳ್ಯಕ್ಕೆ ಬರುತ್ತಿದ್ದಾಗ ಕಾರು ಗುಂಡಿಯಲ್ಲಿ ಇಳಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಅರಳೀಕೆರೆ. ಅರಳೀಕೆರೆ ಪಾಳ್ಯ ಮತ್ತು ಅರಳೀಕೆರೆ ಗೊಲ್ಲರಹಟ್ಟಿಯ ಸಂಪರ್ಕ ರಸ್ತೆ ಕಡಿತಗೊಂಡಿದ್ದು. ಸಾರ್ವಜನಿಕರು ಹೊಸಕೆರೆ, ಬೆಟ್ಟಗೊಂಡನಹಳ್ಳಿ ಮಾರ್ಗವಾಗಿ ಸಂಚಾರ ನಡೆಸುತ್ತಿದ್ದಾರೆ.

    ಕ್ಲಿಕ್ ಮಾಡಿ ಓದಿ: ತೆರೆದಿದೆ ಉದ್ಯೋಗಾವಕಾಶದ ಬಾಗಿಲು | 22ರಂದು ನೇರ ನೇಮಕಾತಿ ಸಂದರ್ಶನ

    ಚಿತ್ರದುರ್ಗ ನಗರದ ರಸ್ತೆಗಳು ಜಲಾವೃತಗೊಂಡಿದ್ದವು. ಬ್ಯಾಂಕ್‌ ಕಾಲೊನಿ, ಮೇದೆಹಳ್ಳಿ, ಜೆಸಿಆರ್‌ ಅಂಡರ್‌ಪಾಸ್‌, ಚಳ್ಳಕೆರೆ ಟೋಲ್‌ಗೇಟ್‌ನಲ್ಲಿ ನೀರು ಹಳ್ಳದಂತೆ ಹರಿದ ಪರಿಣಾಮ ವಾಹನ ಸವಾರರು ಸಮಸ್ಯೆ ಅನುಭವಿಸಿದರು. ಜಿಲ್ಲಾ ಆರೋಗ್ಯ ಕುಟುಂಬ ಮತ್ತು ಕಲ್ಯಾಣ ಇಲಾಖೆ (ಡಿಎಚ್‌ಒ) ಕಚೇರಿ ಮುಂಭಾಗದ ಬೇವಿನ ಮರ ಉರುಳಿ ಬಿದ್ದಿದೆ.

    ಹಳೇ ವೈಶಾಲಿ ಜಂಕ್ಷನ್‌ ಬಳಿ ಚರಂಡಿ ತುಂಬಿ ಹರಿದ ಪರಿಣಾಮ ಗೂಡಂಗಡಿಗಳಿಗೆ ನೀರು ನುಗ್ಗಿದ್ದು, ವ್ಯಾಪಾರಸ್ಥರು ಸಮಸ್ಯೆಗೆ ಸಿಲುಕಿದ್ದಾರೆ. ರಾತ್ರಿ ಕಳೆದು ಬೆಳಕು ಹರಿಯುವ ಹೊತ್ತಿಗೆ ರಸ್ತೆಗಳ ಚಿತ್ರಣವೇ ಮಳೆಯಿಂದ ಬದಲಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top