ಮುಖ್ಯ ಸುದ್ದಿ
ಜಿಲ್ಲೆಯಾದ್ಯಂತ ಉತ್ತಮ ಮಳೆ | ಮನೆಗಳಿಗೆ ಹಾನಿ

CHITRADURGA NEWS | 20 MAY 2024
ಚಿತ್ರದುರ್ಗ: ಜಿಲ್ಲೆಯಾದ್ಯಂತ ಭಾನುವಾರ ಉತ್ತಮ ಮಳೆಯಾಗಿದ್ದು, 12 ಮನೆಗಳು ಭಾಗಶಃ ಹಾನಿಗೆ ತುತ್ತಾಗಿವೆ.
ಹಿರಿಯೂರು ತಾಲ್ಲೂಕಿನ ಹಿರಿಯೂರು 11.4 ಮಿ.ಮೀ, ಇಕ್ಕನೂರು 26 ಮಿ.ಮೀ, ಈಶ್ವರಗೆರೆ 21.8 ಮಿ.ಮೀ, ಬಬ್ಬೂರು 14.4 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 8.8, ಚಿತ್ರದುರ್ಗ-2ರಲ್ಲಿ 10.9, ತುರುವನೂರು 12.6, ಐನಹಳ್ಳಿ 9.2, ಹಿರೇಗುಂಟನೂರು 8.7, ಸಿರಿಗೆರೆ 26.2, ಭರಮಸಾಗರದಲ್ಲಿ 35 ಮಿ.ಮೀ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 46.8, ಬಾಗೂರು 3.5, ಮಾಡದಕೆರೆ 40, ಮತ್ತೋಡು 10.4, ಶ್ರೀರಾಂಪುರ 30.2, ಹೊಳಲ್ಕೆರೆಯಲ್ಲಿ 1.6ಮಿ.ಮೀ, ರಾಮಗಿರಿ 5.4, ಚಿಕ್ಕಜಾಜೂರಿನಲ್ಲಿ 10.8 , ಬಿ.ದುರ್ಗ 8.2 ಮಿ.ಮೀ, ಹೆಚ್.ಡಿ.ಪುರದಲ್ಲಿ 12.2, ತಾಳ್ಯ 3 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 28.9 ಮಿ.ಮೀ, ಪರಶುರಾಂಪುರ 32.8, ನಾಯಕನಹಟ್ಟಿ 29.2, ತಳಕು 21.4, ಡಿ.ಮರಿಕುಂಟೆಯಲ್ಲಿ 20.2, ಮೊಳಕಾಲ್ಮುರಿನಲ್ಲಿ 23 ಮಿ.ಮೀ, ರಾಯಾಪುರ 7.8 ಮಿ.ಮೀ, ಬಿ.ಜಿ.ಕೆರೆ 37 ಮಿ.ಮೀ, ರಾಂಪುರ 2.2 ಮಿ.ಮೀ, ದೇವಸಮುದ್ರದಲ್ಲಿ 4 ಮಿ.ಮೀ ಮಳೆಯಾಗಿದೆ.
ಕ್ಲಿಕ್ ಮಾಡಿ ಓದಿ: ತೆರೆದಿದೆ ಉದ್ಯೋಗಾವಕಾಶದ ಬಾಗಿಲು | 22ರಂದು ನೇರ ನೇಮಕಾತಿ ಸಂದರ್ಶನ
ಜಿಲ್ಲೆಯಾದ್ಯಂತ ಭಾಗಶಃ 12 ಮನೆಗಳು ಹಾಗೂ 5.53 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 1, ಚಳ್ಳಕೆರೆ ತಾಲ್ಲೂಕಿನಲ್ಲಿ 1, ಹೊಸದುರ್ಗ ತಾಲ್ಲೂಕಿನಲ್ಲಿ ಭಾಗಶಃ 6 ಮನೆ ಹಾನಿ ಹಾಗೂ 0.35 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.
ಹಿರಿಯೂರು ತಾಲ್ಲೂಕಿನಲ್ಲಿ ಭಾಗಶಃ 3 ಮನೆಹಾನಿ ಹಾಗೂ 2.18 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಮನೆಹಾನಿಯಾಗಿದೆ.
