Connect with us

    ಕೈ ಚೀಲದಲ್ಲಿ ₹ 3.55 ಕೋಟಿ ಮೌಲ್ಯದ ಚಿನ್ನ ಪತ್ತೆ | ಹೇಳಿದ್ರು ಶೇಂಗಾ ಕಥೆ…

    ಮುಖ್ಯ ಸುದ್ದಿ

    ಕೈ ಚೀಲದಲ್ಲಿ ₹ 3.55 ಕೋಟಿ ಮೌಲ್ಯದ ಚಿನ್ನ ಪತ್ತೆ | ಹೇಳಿದ್ರು ಶೇಂಗಾ ಕಥೆ…

    https://chat.whatsapp.com/Jhg5KALiCFpDwME3sTUl7x

    ‌CHITRADURGA NEWS | 28 MARCH 2024
    ಚಿತ್ರದುರ್ಗ: ಸಾಮಾನ್ಯವಾಗಿ ಕೈ ಚೀಲದಲ್ಲಿ ತರಕಾರಿ,ಹಾಲು, ಹೂವು ತೆಗೆದುಕೊಂಡು ಹೋಗುವುದನ್ನು ನೋಡಿದ್ದೇವೆ. ಆದರೆ ಕೋಟ್ಯಾಂತರ ಮೌಲ್ಯದ ಚಿನ್ನಾಭರಣವನ್ನು ತೆಗದುಕೊಂಡು ಹೋಗುವುದನ್ನು ಎಲ್ಲಿಯಾದರೂ ಕೇಳಿದ್ದೀರಾ ?..ಇಂತಹ ಒಂದು ಘಟನೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಾಕ್ಷಿಯಾಗಿದೆ.

    ಚಿಕ್ಕ ಚಿಕ್ಕ ಪ್ಲಾಸ್ಸಿಕ್‌ ಕವರ್‌, ಮನೆಯ ಅಡುಗೆ ಮನೆಯಲ್ಲಿ ಉಪ್ಪು, ಸಂಬಾರ್‌ ಪುಡಿ ಹಾಕುವಂತಾ ಡಬ್ಬಿಗಳಲ್ಲಿ ಚಿನ್ನದ ಸರ, ಕಿವಿಯೋಲೆ ಹೀಗೆ ಬಂಗಾರದ ಆಭರಣಗಳನ್ನು ಹಾಕಿಕೊಂಡು ಚಿಕ್ಕ ಸುಳಿವು ಸಿಗದಂತೆ ಹಿರಿಯೂರು ನಗರದಲ್ಲಿ ಓಡಾಡುತ್ತಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅನುಮಾನಸ್ಪದವಾಗಿ ಚೀಲವಿಡಿದು ಓಡಾಡುತ್ತಿದ್ದವರನ್ನು ವಿಚಾರಿಸಿ ಬ್ಯಾಗ್ ಅನ್ನು ಪರಿಶೀಲಿಸಿದ ಪೊಲೀಸರು ಬ್ಯಾಗ್‌ನಲ್ಲಿ ಚಿನ್ನ ನೋಡಿ ಬೆಚ್ಚಿದ್ದಾರೆ.

    ಕ್ಲಿಕ್ ಮಾಡಿ ಓದಿ: ಎರಡು ದಿನ ನಿದ್ರಿಸದ ನಾಯಕನಹಟ್ಟಿ | ತಿಪ್ಪೇರುದ್ರಸ್ವಾಮಿ ಮಡಿಲಲ್ಲಿ ಭಜನೆ ವೈಭವ | ಬೆಳದಿಂಗಳ ಹುಣ್ಣಿಮೆ ಸಾಥ್‌

    ಬಳಿಕ ವಿಚಾರಿಸಿದಾಗ ಸೂಕ್ತ ದಾಖಲೆಗಳು ಇಲ್ಲದಿರುವುದು ಖಚಿತವಾಗಿದೆ. ಕೂಡಲೇ ಬ್ಯಾಗ್‌ನಲ್ಲಿದ್ದ 5ಕೆಜಿ, 250ಗ್ರಾಂ,18 ಕ್ಯಾರೆಟ್ ಚಿನ್ನವನ್ನು ಪೊಲೀಸ್‌ ಮತ್ತು ಎಫ್‌ಎಸ್ಟಿ ತಂಡದ ಅಧಿಕಾರಿಗಳು ಬುಧವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ. 3.55 ಕೋಟಿಗೂ ಹೆಚ್ಚಿನ ಮೌಲ್ಯ ಎಂದು ಅಂದಾಜಿಸಲಾಗಿದೆ.

    ದಾವಣಗೆರೆಯಿಂದ ವರ್ಧಮಾನ ಜೂವೆಲ್ಲರಿಯಿಂದ ಹಿರಿಯೂರಿನ ರಂಗನಾಥ ಜೂಯೆಲರ್ಸ್ ಅಂಗಡಿಗೆ ಕೊಡಲು ತಂದಿದ್ದರು ಎನ್ನಲಾಗಿದೆ. ಆದರೆ ಸೂಕ್ತ ಅಧಿಕೃತ ದಾಖಲೆಗಳಿಲ್ಲ. ಆದ್ದರಿಂದ ಒಡವೆಗಳನ್ನು ಪೊಲೀಸರು ವಶಪಡಿಸಿಕೊಂಡು ತಾಲೂಕು‌ ಖಜಾನೆಗೆ ಒಪ್ಪಿಸಿದ್ದಾರೆ.

    ಶೇಂಗಾ ಕಥೆ: ತಾಲ್ಲೂಕಿನ ಮಸ್ಕಲ್ ಬಳಿ ಎಫ್‌ಎಸ್ಟಿ ತಂಡದ ಅಧಿಕಾರಿಗಳು ಇಚರ್ ವಾಹನ ತಡೆದು ಪರಿಶೀಲಿಸಿದಾಗ ಅದರಲ್ಲಿ ₹ 6.80 ಸಾವಿರ ನಗದು ಸಿಕ್ಕಿದೆ.

    ಆಂಧ್ರ ಪ್ರದೇಶದ ನಂದ್ಯಾಲದಿಂದ ಶೇಂಗಾ ಮಾರಾಟ ಮಾಡಲು ಬಬ್ಬೂರಿಗೆ ಬಂದಿದ್ದು, ಶೇಂಗಾ ಮಾರಾಟ ಮಾಡಿದಾಗ ಬಂದಿರುವ ಹಣ ಎಂದು‌ ಹೇಳಲಾಗುತ್ತಿದೆ. ಆದರೆ ಇದಕ್ಕೂ ಅಧಿಕೃತ ದಾಖಲೆ ಇಲ್ಲವಾಗಿದೆ. ಪೊಲೀಸರು ₹ 6.80 ಲಕ್ಷ ನಗದನ್ನು ವಶಪಡಿಸಿಕೊಂಡು ಹಿರಿಯೂರಿನ ಖಜಾನೆಗೆ ಒಪ್ಪಿಸಿದ್ದಾರೆ.

    ಕ್ಲಿಕ್ ಮಾಡಿ ಓದಿ: ಕುಡಿಯುವ ನೀರು ಪ್ರಕರಣ| ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಮಾನತು

    ಎರಡು ಪ್ರಕರಣದ ವರದಿಯನ್ನು ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ನೀಡಿದ್ದಾರೆ. ಚಿನ್ನದ ಒಡವೆಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಐಟಿ‌ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಎರಡು ಪ್ರಕರಣಗಳು ಹಿರಿಯೂರು ನಗರ ಠಾಣೆಯಲ್ಲಿ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top