ಮುಖ್ಯ ಸುದ್ದಿ
ಜಗದೊಡೆಯ ತಿಪ್ಪೇಶನಿಗೆ ಕಂಕಣಧಾರಣೆ | ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

CHITRADURGA NEWS | 20 MARCH 2024
ಚಿತ್ರದುರ್ಗ: ಮಧ್ಯ ಕರ್ನಾಟಕದ ಬಹು ದೊಡ್ಡ ರಥೋತ್ಸವದ ಹೆಗ್ಗಳಿಕೆಗೆ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಪಾತ್ರವಾಗಿದೆ. ಒಂಭತ್ತು ದಿನಗಳ ಜಾತ್ರೆಗೆ ಮಂಗಳವಾರ ರಾತ್ರಿ ಸ್ವಾಮಿಗೆ ಕಂಕಣಧಾರಣೆ ಮೂಲಕ ವಿದ್ಯುಕ್ತ ಚಾಲನೆ ದೊರೆಯಿತು.
ಕ್ಲಿಕ್ ಮಾಡಿ ಓದಿ: https://chitradurganews.com/arecanut-rates-in-karnataka-74/
ಸಂಪ್ರದಾಯದಂತೆ ನಾಯಕನಹಟ್ಟಿಯ ಒಳಮಠದಲ್ಲಿ ತಿಪ್ಪೇರುದ್ರ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಕಂಕಣಧಾರಣೆ ನೆರವೇರಿಸಲಾಯಿತು. ದೇವಾಲಯವನ್ನು ಸಂಪೂರ್ಣ ಹೂವುಗಳಿಂದ ಅಲಂಕರಿಸಲಾಗಿತ್ತು.
ಕ್ಲಿಕ್ ಮಾಡಿ ಓದಿ: https://chitradurganews.com/housewife-commits-suicide-due-to-creditors
ಕಂಕಣಧಾರಣೆ ಉತ್ಸವದ ಅಂಗವಾಗಿ ಮಹಾಗಣಪತಿ ಪೂಜೆ ನೆರವೇರಿಸಲಾಯಿತು. ಬಳಿಕ ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದ ದೇವರಿಗೆ ಪುರ ಪುರೋಹಿತ ಮುರಳಿಕೃಷ್ಣ ಕಂಕಣ ಧಾರಣೆ ನೆರವೇರಿಸಿದರು.
ಇದೇ ವೇಳೆ ಜಾತ್ರೆಯು ಸುಗಮವಾಗಿ ನಡೆಯಲು ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು, ಗ್ರಾಮಸ್ಥರು ಕಂಕಣ ಬದ್ಧರಾಗಿ ಜಾತ್ರೆಯ ಕೆಲಸಕಾರ್ಯಗಳಲ್ಲಿ ತೊಡಗುತ್ತೇವೆ ಎಂದು ದೃಢಸಂಕಲ್ಪದಿಂದ ಕಾರ್ಯನಿರ್ವಹಿಸಲು ಕಂಕಣ ಕಟ್ಟಿಸಿಕೊಂಡಿದ್ದು ವಿಶೇಷವಾಗಿತ್ತು.
ಕ್ಲಿಕ್ ಮಾಡಿ ಓದಿ: https://chitradurganews.com/accused-of-receiving-dowry-5-years-imprisonment/
ಮಹಾಮಂಗಳಾರತಿ ನಡೆಸಿ ದೇವರ ಉತ್ಸವಮೂರ್ತಿಯಿದ್ದ ಪಲ್ಲಕ್ಕಿಯನ್ನು ದೇವಾಲಯದ ಪ್ರಾಂಗಣದ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು. ಇದೇ ವೇಳೆ ನೂರಾರು ಮಹಿಳೆಯರು, ಪುರುಷರು, ಮಕ್ಕಳು ಪಲ್ಲಕ್ಕಿಗೆ ಅಡ್ಡ ಮಲಗಿ ದೇವರಿಗೆ ಹರಕೆ ಅರ್ಪಿಸಿದರು.
20 ರಂದು ರಾತ್ರಿ ಸರ್ಪವಾಹನೋತ್ಸವದಲ್ಲಿ ದೇವರ ಮೆರವಣಿಗೆ. 21 ರಂದು ಮಯೂರ ವಾಹನೋತ್ಸವ, 22 ರಂದು ದೊಡ್ಡರಥಕ್ಕೆ ಕಳಶ ಸ್ಥಾಪನೆ ಮತ್ತು ರಾತ್ರಿ ಗಜವಾಹನೋತ್ಸವದಲ್ಲಿ ಮೆರವಣಿಗೆ, 23 ರಂದು ಸಿಂಹವಾನೋತ್ಸವದಲ್ಲಿ ಮೆರವಣಿಗೆ, 24 ರಂದು ಅಶ್ವವಾಹನೋತ್ಸವದಲ್ಲಿ ಮೆರವಣಿಗೆ, 25 ರಂದು ರಥಕ್ಕೆ ತೈಲಾಭಿಷೇ, 26 ರ ಮಧ್ಯಾಹ್ನ 3 ಗಂಟೆಗೆ ಮುಕ್ತಿಬಾವುಟ ಹರಾಜು ನಂತರ ಮಹಾರಥೋತ್ಸವಕ್ಕೆ ಚಾಲನೆ, 27ರ ರಾತ್ರಿ ದೇವರನ್ನು ಪಾದಗಟ್ಟೆಯ ಬಳಿತಂದು ವಸಂತೋತ್ಸವ ಮತ್ತು ಓಕಳಿ ಕಾರ್ಯ ಹಾಗೂ ಏಪ್ರಿಲ್1ರಂದು ಮರಿಪರಿಷೆ ಮತ್ತು ಸಕಲ ಬಿರುದಾಳಿಗಳೊಂದಿಗೆ ವಾರೋತ್ಸವ ಕಾರ್ಯಕ್ರಮ ನಡೆಯಲಿವೆ.
