ಮುಖ್ಯ ಸುದ್ದಿ
ಎಸ್ಜೆಎಂ ವಿದ್ಯಾಪೀಠದ ಸಿಇಓ ಭರತ್ಕುಮಾರ್ ಸೇವೆಯಿಂದ ಬಿಡುಗಡೆ

ಚಿತ್ರದುರ್ಗ ನ್ಯೂಸ್.ಕಾಂ:
ಒಂದು ವರ್ಷದ ಹಿಂದಷ್ಟೇ ಮುರುಘಾ ಮಠದ ಎಸ್ಜೆಎಂ ವಿದ್ಯಾಪೀಠಕ್ಕೆ ಸಿಇಓ ಆಗಿ ನೇಮಕವಾಗಿದ್ದ ಉದ್ಯಮಿ ಭರತ್ಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಎಸ್ಜೆಎಂ ವಿದ್ಯಾಪೀಠ ಹಾಗೂ ಎಸ್ಜೆಎಂ ವಿಶ್ವವಿದ್ಯಾಲಯದ ಕರ್ತವ್ಯಗೊಳಿಸಿ ವಿದ್ಯಾಪೀಠದ ಅಧ್ಯಕ್ಷರಾದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಆದೇಶಿಸಿದ್ದಾರೆ ಎಂದು ಮುರುಘಾ ಮಠದ ಉಸ್ತುವಾರಿಗಳಾದ ಶ್ರೀ ಬಸವಪ್ರಭು ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುರುಘಾ ಮಠದ ಅಧೀನದಲ್ಲಿರುವ ಎಸ್ಜೆಎಂ ವಿದ್ಯಾಪೀಠಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ 2022 ಡಿಸೆಂಬರ್ 2 ರಂದು ನೇಮಕ ಮಾಡಲಾಗಿತ್ತು.
ಈಗ ಮುರುಘಾ ಶರಣರು ನ್ಯಾಯಾಂಗ ಬಂಧನದಿಂದ ಬಿಡುಗಡೆಯಾಗಿ ಬಂದು ಮಠದ ಆಡಳಿತ ವಹಿಸಿಕೊಂಡ ಎರಡೇ ದಿನಗಳಲ್ಲಿ ಭರತ್ಕುಮಾರ್ ಅವರನ್ನು ಹೊರಗೆ ಹಾಕುವ ತೀರ್ಮಾಣ ತೆಗೆದುಕೊಂಡಿದ್ದಾರೆ.
ಶರಣ ಸಂಸ್ಕøತಿ ಉತ್ಸವದ ವೇಳೆ ನಡೆದ ಕೆಲ ಗೊಂದಲಗಳು ಇಂತಹ ತೀರ್ಮಾನಕ್ಕೆ ಕಾರಣ ಎನ್ನಲಾಗುತ್ತಿದೆ. ಈ ವೇಳೆ ಮಠದ ಹಲವು ಭಕ್ತರು ಹಾಗೂ ಕೆಲ ಶಾಖಾ ಮಠಗಳ ಸ್ವಾಮೀಜಿಗಳು ಭರತ್ಕುಮಾರ್ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರು.
ಇಂಜಿನಿಯರಿಂಗ್ನಲ್ಲಿ ಉನ್ನತ ಪದವಿ ಪಡೆದು ಅಮೇರಿಕಾದಲ್ಲಿ ನೆಲೆಸಿದ್ದ ಎಂ.ಭರತ್ಕುಮಾರ್ ಮುರುಘಾ ಶರಣರೊಂದಿಗೆ ಬಾಂಧವ್ಯ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಕರೆತಂದು ವಿದ್ಯಾಪೀಠದ ಸಿಇಓ ಮಾಡಲಾಗಿತ್ತು.
ಇದನ್ನೂ ಓದಿ: ಮಠ, ಪೀಠದ ಅಧಿಕಾರ ಮರಳಿ ಪಡೆದ ಮುರುಘಾ ಶರಣರು ಇದನ್ನೂ ಓದಿ: ಚಿತ್ರದುರ್ಗ-ತುಮಕೂರು ನಡುವೆ ಏರ್ಪೋರ್ಟ್() ನಿರ್ಮಾಣಕ್ಕೆ ಚಿಂತನೆ
