Author: News Desk Chitradurga News

CHITRADURGA NEWS | 06 OCTOBER 2024 ಚಿತ್ರದುರ್ಗ: ಅಕ್ಟೋಬರ್‌ 6ರ ಭಾನುವಾರ, ಚಂದ್ರನು ತುಲಾ ನಂತರ ವೃಶ್ಚಿಕ ರಾಶಿಗೆ ಚಲಿಸಲಿದ್ದಾನೆ. ಅಲ್ಲದೆ, ಈ ದಿನ ದುರ್ಗಾ ಮಾತೆಯ ನಾಲ್ಕನೇ ರೂಪವಾದ ಕೂಷ್ಮಾಂಡಾ ದೇವಿಯನ್ನು ಪೂಜಿಸಲಾಗುತ್ತದೆ. ನವರಾತ್ರಿಯ ನಾಲ್ಕನೇ ದಿನ ಪ್ರೀತಿ ಯೋಗ, ರವಿಯೋಗ ಮತ್ತು ವಿಶಾಖ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದೆ. ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ತಾಯಿ ಕಣಿವೆ ಮಾರಮ್ಮ ದೇವಿಯನ್ನು ಪ್ರಾರ್ಥಿಸುತ್ತಾ ತಿಳಿದುಕೊಳ್ಳಿ. ಮೇಷ ರಾಶಿ (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ): ಉದ್ಯೋಗದ ವಿಚಾರದಲ್ಲಿ ಅಧಿಕಾರಿಗಳ ಕೋಪಕ್ಕೆ ಗುರಿಯಾಗುತ್ತೀರಿ. ಪ್ರಮುಖ ಕಾರ್ಯಕ್ರಮಗಳು ಮುಂದೂಡಲ್ಪಡುತ್ತವೆ ಮತ್ತು ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಬಂಧು ಮಿತ್ರರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಬದಲಾಯಿಸುವುದು ಒಳ್ಳೆಯದು. ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಅದೃಷ್ಟದ ದಿಕ್ಕು:ಪಶ್ಚಿಮ,…

Read More

CHITRADURGA NEWS | 05 OCTOBER 2024 ಚಿತ್ರದುರ್ಗ: ಅಕ್ಟೋಬರ್‌ 5ರ ಶನಿವಾರ ಚಂದ್ರನು ಶುಕ್ರನ ರಾಶಿ ತುಲಾ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಚಂದ್ರನಿಂದ 12 ನೇ ಮನೆಯಲ್ಲಿ, ಶುಭ ಗ್ರಹ ಅಂದರೆ ಬುಧ ಕನ್ಯಾರಾಶಿಯಲ್ಲಿ ಸ್ಥಿತನಾಗಲಿದ್ದಾನೆ, ಇದರಿಂದಾಗಿ ಅನ್ಫ ಯೋಗವು ರೂಪುಗೊಳ್ಳುತ್ತದೆ. ಈ ದಿನ ಮಾ ದುರ್ಗೆಯ ಮೂರನೇ ರೂಪವಾದ ಚಂದ್ರಘಂಟಾವನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಮೂರನೇ ದಿನ ಅನ್ಫ ಯೋಗದೊಂದಿಗೆ ಸರ್ವಾರ್ಥ ಸಿದ್ಧಿ ಯೋಗ ಮತ್ತು ಸ್ವಾತಿ ನಕ್ಷತ್ರದ ಶುಭ ಸಂಯೋಗವಿದೆ. ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ ಎಂಬುದನ್ನು ತಾಯಿ ಬರಗೇರಮ್ಮ ದೇವಿಯನ್ನು ಪ್ರಾರ್ಥಿಸುತ್ತಾ ತಿಳಿದುಕೊಳ್ಳಿ. ಮೇಷ ರಾಶಿ (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ): ಸ್ಥಿರಾಸ್ತಿ ವಿವಾದಗಳಿಂದ ಕಿರಿಕಿರಿ ಉಂಟಾಗುತ್ತದೆ. ವ್ಯವಹಾರಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣವಿರುತ್ತದೆ. ಹೊಸ ಸಾಲಗಳನ್ನು ಮಾಡಲಾಗುತ್ತದೆ. ಕೈಗೊಂಡ ಕೆಲಸದಲ್ಲಿ ಎಷ್ಟೇ ಕಷ್ಟಪಟ್ಟರೂ ಫಲ…

Read More

CHITRADURGA NEWS | 04 OCTOBER 2024 ಚಿತ್ರದುರ್ಗ: ಜಿಲ್ಲೆಯ ಕೆಲ ಭಾಗ ಹಾಗೂ ಭದ್ರಾ ಜಲಾಶಯ, ಎತ್ತಿನಹೊಳೆಯಿಂದ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ವಾಣಿವಿಲಾಸ ಸಾಗರ ಜಲಾಶಯದ ಒಳಹರಿವು ಹೆಚ್ಚಾಗಿದೆ. ಭದ್ರಾ ಜಲಾಶಯದಿಂದ ಪ್ರತಿ ದಿನ 500 ರಿಂದ 650 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಆದರೆ, ಅಕ್ಟೋಬರ್‌ 04 ರಂದು ನಡೆಸಿದ ಮಾಪನದ ವೇಳೆ ಒಳಹರಿವಿನ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. ಕ್ಲಿಕ್ ಮಾಡಿ ಓದಿ: ನೋಟಿಸ್ ನೀಡಿಲ್ಲ, ಬೆಳೆ ಪರಿಹಾರ ಕೊಡುತ್ತಿಲ್ಲ | ಭದ್ರಾ ಕಾಮಗಾರಿ ನಡೆಸಲು ಬಿಡುವುದಿಲ್ಲ ಅ.4 ರಂದು ಬೆಳಗ್ಗೆ ವೇಳೆಗೆ ವಿವಿ ಸಾಗರ ಜಲಾಶಯಕ್ಕೆ 1386 ಕ್ಯೂಸೆಕ್ ನೀರು ಹರಿದು ಬಂದಿದೆ. ಮಳೆ ಇನ್ನೂ ಇರುವುದರಿಂದ ಈ ಒಳಹರಿವು ಹೆಚ್ಚಾಗುವ ಸಾಧ್ಯತೆಯೂ ಇದೆ.135 ಅಡಿ ಎತ್ತರದ ವಿವಿ ಸಾಗರದಲ್ಲಿ ಸದ್ಯ 122.60 ಅಡಿವರೆಗೆ ನೀರು ಬಂದಿದೆ.

Read More

CHITRADURGA NEWS | 04 OCTOBER 2024 ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ತುಂತುರು ನೀರಾವರಿ ವ್ಯವಸ್ಥೆ ಕಲ್ಪಿಸಲು ಪೈಪ್ ಅಳವಡಿಸುವ ಮುನ್ನ ರೈತರಿಗೆ ನೋಟಿಸ್ ನೀಡಿಲ್ಲ ಎಂದು ಆರೋಪಿಸಿ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕೆಲವು ಹಳ್ಳಿಗಳ ರೈತರು ಪೈಪ್ ಅಳವಡಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿಗೆ ಭದ್ರಾ ಯೋಜನೆಯ ನೀರು ಬರುವುದು ತಡವಾದರೆ ನೆಲದಲ್ಲಿ ಹೂತಿರುವ ಪೈಪುಗಳು ಉಳಿಯಲು ಸಾಧ್ಯವೇ? ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಾಕುವ ಪೈಪ್‌ಗಳಿಗೆ ಖಾತರಿ ಯಾರು? ಇಂತಹ ಹುಚ್ಚಾಟಗಳನ್ನು ಸ್ಥಗಿತಗೊಳಿಸಿ ಮೊದಲು ಭದ್ರಾ ಕಾಮಗಾರಿ ಪೂರ್ಣಗೊಳಿಸುವ ಇಚ್ಛಾಶಕ್ತಿ ತೋರಿಸಲಿ ಎಂದು ಆಗ್ರಹಿಸಿದ್ದಾರೆ. ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 04 ಅಕ್ಟೋಬರ್‌ | ಉದ್ಯೋಗಿಗಳಿಗೆ ಬಡ್ತಿ, ಆರೋಗ್ಯ ಸಮಸ್ಯೆಗೆ ಪರಿಹಾರ, ಪ್ರಯಾಣದಲ್ಲಿ ಎಚ್ಚರ ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ಕಾಲುವೆ ಮೂಲಕ ಜುಲೈನಿಂದ ಅಕ್ಟೋಬರ್‌ವರೆಗೆ ಮಳೆಗಾಲದಲ್ಲಿ ಜವನಗೊಂಡನಹಳ್ಳಿ ಹೋಬಳಿಯ 13,000 ಹೆಕ್ಟೇರ್ ಪ್ರದೇಶಕ್ಕೆ ತುಂತುರು ನೀರಾವರಿ ಹಾಗೂ ಆರು ಕೆರೆಗಳಿಗೆ…

Read More

CHITRADURGA NEWS | 04 OCTOBER 2024 ಚಿತ್ರದುರ್ಗ: ಅಕ್ಟೋಬರ್‌ 4ರ ಶುಕ್ರವಾರ ಶುಕ್ರ ಗ್ರಹವು ಈಗಾಗಲೇ ಇರುವ ತುಲಾ ರಾಶಿಯಲ್ಲಿ ಚಂದ್ರನು ಸಾಗಲಿದ್ದಾನೆ, ಹೀಗಾಗಿ ಚಂದ್ರ ಮತ್ತು ಶುಕ್ರನ ಸಂಯೋಗದಿಂದ ಕಲಾ ಯೋಗವು ರೂಪುಗೊಳ್ಳುತ್ತದೆ. ಈ ದಿನ ದುರ್ಗಾದೇವಿಯ ಎರಡನೇ ರೂಪವನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಎರಡನೇ ದಿನ ಕಲಾಯೋಗ, ಬುಧಾದಿತ್ಯ ಯೋಗ ಮತ್ತು ಚಿತ್ರ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದೆ. ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ ಎಂಬುದನ್ನು ತಾಯಿ ಉಚ್ಚಂಗಿಯಲ್ಲಮ್ಮ ದೇವಿಯನ್ನು ಪ್ರಾರ್ಥಿಸುತ್ತಾ ತಿಳಿದುಕೊಳ್ಳಿ. ಮೇಷ ರಾಶಿ (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ): ಆತ್ಮೀಯರಿಂದ ಆರ್ಥಿಕ ನೆರವು ದೊರೆಯುತ್ತದೆ. ಹಳೆಯ ಸಾಲಗಳಿಂದ ಮುಕ್ತಿ ದೊರೆಯುತ್ತದೆ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದು ಉತ್ತಮ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಪ್ರತಿಭೆ ಬೆಳಕಿಗೆ ಬರುತ್ತದೆ ಮತ್ತು ವ್ಯಾಪಾರದ ವಿಷಯದಲ್ಲಿ ಹೊಸ ಹೂಡಿಕೆಗಳನ್ನು ಪಡೆಯುತ್ತೀರಿ. ಸಮಾಜದಲ್ಲಿ…

Read More

CHITRADURGA NEWS | 03 OCTOBER 2024 ಚಿತ್ರದುರ್ಗ: ಅಕ್ಟೋಬರ್‌ 3ರ ಗುರುವಾರ ಕನ್ಯಾರಾಶಿಯ ನಂತರ ಚಂದ್ರನು ತುಲಾ ರಾಶಿಗೆ ಚಲಿಸಲಿದ್ದಾನೆ. ಅಲ್ಲದೆ, ಈ ದಿನದಂದು ಶಾರದೀಯ ನವರಾತ್ರಿ ಪ್ರಾರಂಭವಾಗುತ್ತದೆ. ಪ್ರತಿಪದ ತಿಥಿಯಂದು, ದುರ್ಗೆಯ ಮೊದಲ ರೂಪವಾದ ಮಾತೆ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ ಮತ್ತು ಉಪವಾಸ ಆಚರಿಸಲಾಗುತ್ತದೆ. ನವರಾತ್ರಿಯ ಮೊದಲ ದಿನ ಐಂದ್ರ ಯೋಗ, ಬುಧಾದಿತ್ಯ ಯೋಗ ಮತ್ತು ಹಸ್ತಾ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದೆ. ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ ಎಂಬುದನ್ನು ತಾಯಿ ಏಕನಾಥೇಶ್ವರಿಯನ್ನು ಪ್ರಾರ್ಥಿಸುತ್ತಾ ತಿಳಿದುಕೊಳ್ಳಿ. ಮೇಷ ರಾಶಿ (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ): ಪ್ರಮುಖರಿಂದ ಮಹತ್ವದ ಮಾಹಿತಿ ಸಂಗ್ರಹಿಸುತ್ತೀರಿ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಸ್ಥಿರಾಸ್ತಿ ಮಾರಾಟದಲ್ಲಿ ಲಾಭ ದೊರೆಯುತ್ತದೆ. ಪ್ರಮುಖ ವ್ಯವಹಾರಗಳಲ್ಲಿ ಯಶಸ್ಸು ದೊರೆಯುತ್ತದೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ. ಉದ್ಯೋಗದಲ್ಲಿ ನಿರೀಕ್ಷಿತ ಗುರಿಗಳು ಈಡೇರುತ್ತವೆ. ಅದೃಷ್ಟದ…

Read More

CHITRADURGA NEWS | 01 OCTOBER 2024 ಚಿತ್ರದುರ್ಗ: ಮುರುಘರಾಜೇಂದ್ರ ಬೃಹನ್ಮಠದ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಶ್ರೀ ಜಯದೇವ ಶ್ರೀಗಳ ಬೆಳ್ಳಿ ಪ್ರತಿಮೆ ಲೋಕಾರ್ಪಣೆಯಾಗಲಿದೆ. ಜಯದೇವ ಜಗದ್ಗುರುಗಳು ಮಾಡದ ಕೆಲಸಗಳು ಇಲ್ಲ. ಜಯದೇವ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಯಲ್ಲಿದ್ದಾರೆ. ಜಯದೇವ ಜಗದ್ಗುರುಗಳ ಕಾಲವನ್ನು ಸುವರ್ಣ ಯುಗವೆಂದು ಕರೆಯುತ್ತಾರೆ. ಜಯದೇವ ಜಗದ್ಗುರುಗಳ ಬೆಳ್ಳಿ ಪ್ರತಿಮೆ ಘಟಪ್ರಭದಲ್ಲಿ ಶಿಲ್ಪಿ ಶ್ರೀ ಪತ್ತಾರ್ ತಯಾರಿಸಿದ್ದಾರೆ. ಅ.4 ರಂದು ಬೆಳಿಗ್ಗೆ ದಾವಣಗೆರೆಯ ಅಥಣಿ ಶ್ರೀ ಶಿವಯೋಗಿಗಳವರ ಗದ್ದುಗೆಯಲ್ಲಿ ರುದ್ರಾಭಿಷೇಕ, ಶ್ರೀ ಜಯದೇವ ಜಗದ್ಗುರುಗಳವರ ಗದ್ದುಗೆಯಲ್ಲಿ ಪೂಜೆ ನಡೆಯಲಿದೆ. ಕ್ಲಿಕ್ ಮಾಡಿ ಓದಿ: ಹೊಸದುರ್ಗ ನನ್ನ ಕಾಯಕ ಕ್ಷೇತ್ರ | ವಿಧಾನ ಪರಿಷತ್ ಸದಸ್ಯ ಕೆ.ಎಸ್‌.ನವೀನ್‌ | 50ನೇ ವರ್ಷದ ಜನ್ಮದಿನಾಚರಣೆ ಸಂಭ್ರಮ ಚಿತ್ರದುರ್ಗ ಮುರುಘಾಮಠದಲ್ಲಿ ಅ.5 ರಂದು ಬೆಳಗ್ಗೆ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ 4 ಗಂಟೆಗೆ ಜಯದೇವ ಕಪ್ ಪಂದ್ಯಾವಳಿ ಅಂಗವಾಗಿ ಅಂಬೇಡ್ಕರ್‌ ವೃತ್ತದಲ್ಲಿ ಶ್ರೀ ಜಯದೇವ…

Read More

CHITRADURGA NEWS | 01 OCTOBER 2024 ಚಿತ್ರದುರ್ಗ: ಸುಪ್ರೀಂ ಕೋರ್ಟ್‌ ಆದೇಶದಂತೆ ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಅ.3 ರಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಘಟಕದಿಂದ ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಹಿರಿಯೂರು ನಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಘಟಕದ ಕಾರ್ಯದರ್ಶಿ ಕೆ. ರಾಮಚಂದ್ರ, ರಾಜ್ಯ ಸರ್ಕಾರ ಯಾವುದೇ ನೆಪ ಹೇಳದೇ ಸುಪ್ರೀಂ ಕೋರ್ಟ್‌ ಆದೇಶದಂತೆ ಒಳಮೀಸಲಾತಿ ಅನುಷ್ಠಾನಕ್ಕೆ ತರಬೇಕು. ಜಿಲ್ಲೆಯಲ್ಲಿನ ದಲಿತ ಸಂಘಟನೆಗಳು ಪ್ರತಿ ಊರು–ಕೇರಿಗಳಲ್ಲಿ ನೆಲೆಸಿರುವ ಮಾದಿಗ ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿವೆ. ಪಾದಯಾತ್ರೆಗೆ ಪ್ರತಿ ತಾಲ್ಲೂಕಿನಿಂದ ಸಮುದಾಯದ ಸಾವಿರಾರು ಜನರು ಆಗಮಿಸಲಿದ್ದಾರೆ ಎಂದು ಹೇಳಿದರು. ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 01 ಅಕ್ಟೋಬರ್‌ | ಆರ್ಥಿಕ ಪ್ರಗತಿ , ಸಕಾಲದಲ್ಲಿ ಕೆಲಸಗಳು ಪೂರ್ಣ, ಶುಭ ಕಾರ್ಯ ಸುಪ್ರೀಂ ಆದೇಶ ಬಂದು ತಿಂಗಳು ಕಳೆದರೂ ರಾಜ್ಯ ಸರ್ಕಾರ ಈ ಬಗ್ಗೆ ಮೌನವಾಗಿದೆ. ಹೀಗಾಗಿ…

Read More

CHITRADURGA NEWS | 01 OCTOBER 2024 ಚಿತ್ರದುರ್ಗ: ಮುಂದಿನ ದಿನಗಳಲ್ಲಿ ಹೊಸದುರ್ಗದಲ್ಲಿ ಗಟ್ಟಿಯಾಗಿ ನಿಂತು ನಿಮ್ಮೆಲ್ಲರ ಪರವಾಗಿ ಕೆಲಸ ಮಾಡುತ್ತೇನೆ. ಇದನ್ನು ನನ್ನ ಕಾಯಕ ಕ್ಷೇತ್ರವನ್ನಾಗಿ ಮಾಡುವೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್‌.ನವೀನ್‌ ತಿಳಿಸಿದರು. ಹೊಸದುರ್ಗ ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಭಿಮಾನಿಗಳು ಸೋಮವಾರ ಆಯೋಜಿಸಿದ್ದ ಅವರ 50ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾರದ 3 ದಿನ ತಾಲ್ಲೂಕಿನ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ, ಜನರ ಕಷ್ಟ ಸುಖಗಳನ್ನು ಆಲಿಸುವೆ ಎಂದರು. ಮೊದಲು ಈ ತಾಲ್ಲೂಕಿನ ಜನರ ಮನಸ್ಸನ್ನು ಗೆದ್ದು ಪ್ರೀತಿ ಗಳಿಸುವ ಕೆಲಸ ಮಾಡುವೆ. ಆ ಮೇಲೆ ಈ ನಿಮ್ಮ ನವೀನ್‌ ನಿಮಗೆ ಬೇಕಾ ಅಥವಾ ಬೇಡವಾ ಎಂದು ನೀವೇ ನಿರ್ಧರಿಸಿ. ನಾನು ಎಂದಿಗೂ ಅಧಿಕಾರದ ಬೆನ್ನ ಹಿಂದೆ ಬಿದ್ದವನಲ್ಲ, ಜನರ ಸೇವೆ ಮಾಡಲು ರಾಜಕಾರಣಕ್ಕೆ ಬಂದವನು ಎಂದು ತಿಳಿಸಿದರು. ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 01 ಅಕ್ಟೋಬರ್‌ | ಆರ್ಥಿಕ ಪ್ರಗತಿ ,…

Read More

CHITRADURGA NEWS | 01 OCTOBER 2024 ಚಿತ್ರದುರ್ಗ: ವಾಡಿಕೆಯಂತೆ ಮೊಳಕಾಲ್ಮುರು ಸಮೀಪದ ಗೌರಸಮುದ್ರದ ತುಂಬಲು ಪ್ರದೇಶದಲ್ಲಿ ಅ.1(ಮಂಗಳವಾರ) ಐತಿಹಾಸಿಕ ಮಾರಮ್ಮದೇವಿ ಮರಿ ಪರಿಷೆ ನಡೆಯಲಿದೆ. ಪ್ರತಿವರ್ಷ ಚೌತಿ ಅಮವಾಸ್ಯೆ ನಂತರ ಬರುವ ಮಂಗಳವಾರದಂದು ದೇವಿಯ ದೊಡ್ಡ ಪರಿಷೆ ನಡೆಯುತ್ತದೆ. ಮರಿ ಷರಿಷೆಯಲ್ಲೂ ರಾಜ್ಯದ ವಿವಿಧ ಜಿಲ್ಲೆ ಮತ್ತು ನೆರೆಯ ಆಂಧ್ರಪ್ರದೇಶದಿಂದ 1.50 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ದೇವಿ ಮೂಲ ವಿಗ್ರಹವನ್ನು ಮರಿಪರಿಷೆಯಲ್ಲಿ ತುಂಬಲು ಸ್ಥಳಕ್ಕೆ ಕರೆದುಕೊಂಡು ಬಾರದ ಕಾರಣ ಗ್ರಾಮದಲ್ಲಿರುವ ಮಾರಮ್ಮ ದೇವಸ್ಥಾನಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ. ಬೇವಿನಸೀರೆ ಹರಕೆ, ಬಾಯಿಗೆ ಬೀಗ, ದವಸ ಧಾನ್ಯ ಅರ್ಪಣೆ ಸೇರಿದಂತೆ ವಿವಿಧ ಹಕರೆಗಳು ಸಲ್ಲಿಕೆಯಾಗಲಿವೆ. ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 01 ಅಕ್ಟೋಬರ್‌ | ಆರ್ಥಿಕ ಪ್ರಗತಿ , ಸಕಾಲದಲ್ಲಿ ಕೆಲಸಗಳು ಪೂರ್ಣ, ಶುಭ ಕಾರ್ಯ ಈ ಪರಿಷೆ ನಂತರ ಬರುವ ಐದನೇ ಮಂಗಳವಾರ ಮರಿ ಪರಿಷೆ ನಡೆಸಿಕೊಂಡು ಬರಲಾಗುತ್ತಿದೆ. ಅಲ್ಲಿಯ ತನಕ ಸುತ್ತಮುತ್ತಲಿನ…

Read More