ಮುಖ್ಯ ಸುದ್ದಿ
ಔಡಲ ಚಿಗುರು ತಿಂದ 86 ಕುರಿ ಸಾವು

CHITRADURGA NEWS | 09 MARCH 2025
ಚಿತ್ರದುರ್ಗ: ಔಡಲ ಎಲೆ ತಿಂದು 86 ಕುರಿಗಳು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೊಳಹಾಳು ಗ್ರಾಮದ ತಿಮ್ಮೇಶ್ ಎಂಬುವವರಿಗೆ ಸೇರಿದ 150 ಕುರಿ ಸೇರಿದಂತೆ ಇತರೆ ಕುರಿಗಾಹಿಗಳ ನುರಾರು ಕುರಿಗಳು ಚನ್ನಗಿರಿ ಭಾಗಕ್ಕೆ ಮೇವಿಗಾಗಿ ತೆರಳಿದ್ದವು.
ಇದನ್ನೂ ಓದಿ: ಭೀಕರ ಅಪಘಾತ | ಐದು ಜನ ಸ್ಥಳದಲ್ಲೇ ಸಾವು | ತಮಟಕಲ್ಲು ಬಳಿ ಘಟನೆ
ಚನ್ನಗಿರಿ ತಾಲೂಕು ಗೊಪ್ಪೇನಹಳ್ಳಿ ಸುತ್ತಮುತ್ತಲ ರೈತರ ಜಮೀನುಗಳಲ್ಲಿ ಬೀಡು ಬಿಟ್ಟಿದ್ದರು. ಸಮೀಪದ ಕೋಮಾರನಹಳ್ಳಿ ಸಮೀಪದ ಜಮೀನೊಂದರಲ್ಲಿ ಚಿಗುರಿದ್ದ ಓಡಲ ಚಿಗುರು ತಿಂದು 86 ಕುರಿಗಳು ಮೃತಪಟ್ಟಿವೆ.
ಘಟನಾ ಸ್ಥಳಕ್ಕೆ ಚನ್ನಗಿರಿ ತಹಶೀಲ್ದಾರ್ ನಾಗರಾಜ್, ಪೊಲೀಸ್ ಅಧಿಕಾರಿಗಳು, ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯನ್ನೂ ನಡೆಸಿದ್ದಾರೆ.
ಇದನ್ನೂ ಓದಿ: ಮೂವರು ಪೊಲೀಸ್ Inspector ವರ್ಗಾವಣೆ
ಸರ್ಕಾರಕ್ಕೆ ವರದಿ ಸಲ್ಲಿಸಿ, ಮೃತ ಕುರಿಗಳಿಗೆ ಪರಿಹಾರ ಕೊಡಿಸುವುದಾಗಿ ತಹಶೀಲ್ದಾರ್ ನಾಗರಾಜ್ ಕುರಿಗಾಹಿಗಳಿಗೆ ಭರವಸೆ ನೀಡಿದ್ದಾರೆ.
