Connect with us

    ಉಪ್ಪರಿಗೇನಹಳ್ಳಿ ಬಳಿ ಗುಂಡಿಹಳ್ಳಕ್ಕೆ 5 ಕೋಟಿ ವೆಚ್ಚದ ಚೆಕ್ ಡ್ಯಾಂ | ಶಾಸಕ ಚಂದ್ರಪ್ಪ

    ಹೊಳಲ್ಕೆರೆ

    ಉಪ್ಪರಿಗೇನಹಳ್ಳಿ ಬಳಿ ಗುಂಡಿಹಳ್ಳಕ್ಕೆ 5 ಕೋಟಿ ವೆಚ್ಚದ ಚೆಕ್ ಡ್ಯಾಂ | ಶಾಸಕ ಚಂದ್ರಪ್ಪ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 24 FEBRUARY 2025

    ಹೊಳಲ್ಕೆರೆ: ತಾಲ್ಲೂಕಿನ ಉಪ್ಪರಿಗೇನಹಳ್ಳಿ ಗ್ರಾಮದಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಗುಂಡಿ ಹಳ್ಳದಲ್ಲಿ ನೂತನ ಚೆಕ್‍ಡ್ಯಾಂ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ ಸಲ್ಲಿಸಿದರು.

    Also Read: ಮುಖ್ಯಮಂತ್ರಿಗೆ ಪತ್ರ ಬರೆದ ಸಚಿವ ಡಿ.ಸುಧಾಕರ್ | ಪತ್ರದ ಪೂರ್ಣ ವಿವರ ಇಲ್ಲಿದೆ

    ನಂತರ ಮಾತನಾಡಿದ ಶಾಸಕರು, ಅಪರ್ ಭದ್ರಾ ಯೋಜನೆ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಗಲಾಟೆ ಮಾಡಿದ್ದರಿಂದ ಆ.15 ರೊಳಗೆ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದಾಗಿ ಉತ್ತರ ಕೊಟ್ಟಿದ್ದಾರೆಂದು ತಿಳಿಸಿದರು.

    ಕೆರೆ ಬಂದೋಬಸ್ತ್ ಗಾಗಿ ರೂ.200 ಕೋಟಿ ಕೊಟ್ಟಿದ್ದೇನೆ. ಹಾಲೇನಹಳ್ಳಿ ಬಳಿ ಡ್ಯಾಂ ಕಟ್ಟಿಸಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ತಾಲ್ಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದೇನೆ ಎಂದು ಹೇಳಿದರು.

    ತೇಕಲವಟ್ಟಿ, ಎನ್.ಜಿ.ಹಳ್ಳಿ, ತಾಳ್ಯ, ದುಮ್ಮಿ, ಅರಿಶಿನಘಟ್ಟ ಸೇರಿದಂತೆ ಒಂಬತ್ತು ಕಡೆ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ.

    Also Read: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?

    ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ಜಿಲ್ಲೆಯಲ್ಲಿಯೇ ಇಲ್ಲದಂತ ದೊಡ್ಡ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣಕ್ಕಾಗಿ ಐದು ನೂರು ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ.

    ಹಳ್ಳಿ ಅಭಿವೃದ್ದಿಯಾಗಿ ರೈತರು ಸುಖವಾಗಿರಬೇಕೆಂದು ಸರ್ಕಾರದಿಂದ ಅನುದಾನ ತಂದು ಕೆರೆ, ಕಟ್ಟೆ, ಚೆಕ್‍ಡ್ಯಾಂ, ಸಿ.ಸಿ.ರಸ್ತೆ, ಗುಣ ಮಟ್ಟದ ಶಾಲಾ-ಕಾಲೇಜು, ಹೈಟೆಕ್ ಆಸ್ಪತ್ರೆ ಕಟ್ಟಿಸಿದ್ದೇನೆ.

    ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗುವುದು. ಇದರಿಂದ ಎಲ್.ಕೆ.ಜಿ.ಯಿಂದ ಹಿಡಿದು ಪಿ.ಯು.ಸಿ.ವರೆಗೆ ಒಂದೆ ಕಡೆ ಹಳ್ಳಿಗಾಡಿನ ಮಕ್ಕಳು ಓದಲು ಅನುಕೂಲವಾಗಲಿದೆ. ಮುಂಗಾರು ಮಳೆಗಾಲ ಆರಂಭವಾಗುವುದರೊಳಗೆ ಚೆಕ್‍ಡ್ಯಾಂ ನಿರ್ಮಾಣ ಕಾಮಗಾರಿ ಮುಗಿಯಬೇಕೆಂದು ಶಾಸಕ ಡಾ.ಎಂ.ಚಂದ್ರಪ್ಪ ಇಂಜಿನಿಯರ್‍ ಗಳಿಗೆ ಸೂಚಿಸಿದರು.

    Also Read: ಹೆದ್ದಾರಿಯಲ್ಲಿ‌ ಭೀಕರ ಅಪಘಾತ | ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

    ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ, ಉಪಾಧ್ಯಕ್ಷೆ ಬಿ.ರಮ್ಯ ಕೆಂಚೆಗೌಡರು, ಚಂದ್ರಣ್ಣ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪ್ರಸನ್ನಕುಮಾರ್, ದ್ಯಾಮಣ್ಣ, ನಟರಾಜ್, ಸುರೇಶ್, ವಿಜಯಮ್ಮ, ಕಲ್ಲೇಶಣ್ಣ, ಸುಬಾನ್, ಉಪ್ಪರಿಗೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಹೊಳಲ್ಕೆರೆ

    To Top