Connect with us

Rain Report: ಹಿರೇಗುಂಟನೂರು ವ್ಯಾಪ್ತಿಯಲ್ಲಿ 33 ಮಿ.ಮೀ ಮಳೆ

ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಮಳೆ

ಮುಖ್ಯ ಸುದ್ದಿ

Rain Report: ಹಿರೇಗುಂಟನೂರು ವ್ಯಾಪ್ತಿಯಲ್ಲಿ 33 ಮಿ.ಮೀ ಮಳೆ

CHITRADURGA NEWS | 30 SEPTEMBER 2024

ಚಿತ್ರದುರ್ಗ: ಭಾನುವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 13.4 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನಲ್ಲಿ 17.1 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 17.7 ಹಿರಿಯೂರು ತಾಲ್ಲೂಕು 10 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 10.4 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 10.3 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 13.6 ಮಿ.ಮೀ ಮಳೆಯಾಗಿದೆ.

ಹೋಬಳಿವಾರು ಮಳೆ ವಿವರ: ಚಳ್ಳಕೆರೆಯಲ್ಲಿ 16.5 ಮಿ.ಮೀ, ನಾಯಕನಹಟ್ಟಿ 31.8 ಮಿ.ಮೀ, ಪರಶುರಾಂಪುರ 14.6 ಮಿ.ಮೀ, ತಳಕು 9.2 ಮಿ.ಮೀ ಮಳೆಯಾಗಿದೆ.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನ

ಚಿತ್ರದುರ್ಗದಲ್ಲಿ 9.5 ಮಿ.ಮೀ, ಭರಮಸಾಗರ 22.5 ಮಿ.ಮೀ, ಹಿರೇಗುಂಟನೂರು 33 ಮಿ.ಮೀ, ತುರುವನೂರು 15.1 ಮಿ.ಮೀ ಮಳೆಯಾಗಿದೆ.

ಹಿರಿಯೂರು 12.9 ಮಿ.ಮೀ, ಐಮಂಗಲ 9.4 ಮಿ.ಮೀ, ಧರ್ಮಪುರ 9 ಮಿ.ಮೀ, ಜವನಗೊಂಡನಹಳ್ಳಿ 9.6 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆಯಲ್ಲಿ 11.3 ಮಿ.ಮೀ, ಬಿ.ದುರ್ಗ 9.1 ಮಿ.ಮೀ, ರಾಮಗಿರಿ 10 ಮಿ.ಮೀ, ತಾಳ್ಯ 11.1 ಮಿ.ಮೀ ಮಳೆಯಾಗಿದೆ.

ಇದನ್ನೂ ಓದಿ: ವಿವಿ ಸಾಗರಕ್ಕೆ ಹೆಚ್ಚಿದ ಒಳಹರಿವು | ಇಲ್ಲಿದೆ ನೋಡಿ ಇಂದಿನ ನೀರಿನ ಮಟ್ಟ

ಹೊಸದುರ್ಗದಲ್ಲಿ 9.3 ಮಿ.ಮೀ, ಮಾಡದಕೆರೆ 18.3 ಮಿ.ಮೀ, ಮತ್ತೋಡು 5.3 ಮಿ.ಮೀ, ಶ್ರೀರಾಂಪುರ 4.4 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮೂರಿನಲ್ಲಿ 17.8 ಮಿ.ಮೀ ಹಾಗೂ ದೇವಸಮುದ್ರದಲ್ಲಿ 8.9 ಮಿ.ಮೀ ಮಳೆಯಾಗಿದೆ.

6 ಮನೆಗಳು ಭಾಗಶಃ ಹಾನಿ: ಭಾನುವಾರ ರಾತ್ರಿ ಸುರಿದ ಮಳೆಗೆ ಹಿರಿಯೂರು ತಾಲ್ಲೂಕಿನಲ್ಲಿ 1 ದೊಡ್ಡ ಜಾನುವಾರು ಹಾನಿಯಾಗಿದ್ದು, 6 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version