ಕ್ರೈಂ ಸುದ್ದಿ
Court news: ದೇವಸ್ಥಾನದ ಹುಂಡಿ, ಮನೆಗಳ್ಳತನ ಮಾಡಿದ್ದ ಕಳ್ಳರಿಗೆ 3 ವರ್ಷ ಜೈಲು
CHITRADURGA NEWS | 28 AUGUST 2024
ಚಿತ್ರದುರ್ಗ: ದೇವಸ್ಥಾನದ ಹುಂಡಿ ಹಾಗೂ ಮನೆಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರಿಗೆ ಚಿತ್ರದುರ್ಗದ ಸಿಜೆಎಂ ನ್ಯಾಯಾಲಯ(court) 3 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ರಾಣೆಬೆನ್ನೂರು ತಾಲೂಕು ನಿಟ್ಟುವಳ್ಳಿಯ ಸಿದ್ದೇಶ ಪಕೀರಪ್ಪ ಬಸವನಗೌಡ್ರು ಹಾಗೂ ಸಂತೋಷ್ ಪಕೀರಪ್ಪ ಬಸವನಗೌಡ್ರು ಶಿಕ್ಷೆಗೊಳಗಾದ ಅಪರಾಧಿಗಳು.
ಇದನ್ನೂ ಓದಿ: ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ | ಸುಟ್ಟು ಹೋಯತು 9 ಕ್ವಿಂಟಾಲ್ ಹತ್ತಿ
2018 ನವೆಂಬರ್ 17 ರಂದು ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಐಯುಡಿಪಿ ಬಡಾವಣೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಹುಂಡಿ ಹೊಡೆದು 5 ಸಾವಿರ ಕಳ್ಳತನ, ಸರಸ್ವತಿ ಪುರಂ ಮತ್ತು ಬ್ಯಾಂಕ್ ಕಾಲೋನಿಗಳಲ್ಲಿ ಯಾರು ಇಲ್ಲದ ಮನೆಗಳಲ್ಲಿ ರಾತ್ರಿ ವೇಳೆ ಕಳ್ಳತನ ಮಾಡಿದ್ದರು.
ಆರೋಪಿಗಳನ್ನು ದಸ್ತಗಿರಿ ಮಾಡಿದ್ದ ಕೋಟೆ ಠಾಣೆ ಪೊಲೀಸರು ಕದ್ದ ಮಾಲನ್ನು ವಶಪಡಿಸಿಕೊಂಡು ದೂರು ದಾಖಲಿಸಿದ್ದರು. ಸಿಪಿಐ ಪ್ರಕಾಶ ಗೌಡ ಪಾಟೀಲ್ ಈ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ: ರೈಲಿಗೆ ಸಿಲುಕಿ ಭೀಮಸಮುದ್ರದ ನಿತಿನ್ ತೋಟದ್ ಆತ್ಮಹತ್ಯೆ
ವಿಚಾರಣೆ ನಡೆಸಿದ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮಮತಾ ಡಿ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರೂ ಆರೋಪಿಗಳಿಗೆ ತಲಾ 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 3 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕರಾದ ಶಂಶಿರ್ ಅಲಿಖಾನ್ ವಿಚಾರಣೆ ನಡೆಸಿ, ಸಿ.ಮಂಜುನಾಥ್ ವಾದ ಮಂಡಿಸಿದ್ದರು.