ಮುಖ್ಯ ಸುದ್ದಿ
RAIN : ಭರಮಸಾಗರದಲ್ಲಿ 25.7 ಮಿ.ಮೀ ಮಳೆ | ಜಿಲ್ಲೆಯಲ್ಲಿ 15 ಮನೆ ಹಾನಿ


CHITRADURGA NEWS | 03 MAY 2025
ಚಿತ್ರದುರ್ಗ: ಶುಕ್ರವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದಲ್ಲಿ 25.7 ಮಿ.ಮೀ ಮಳೆಯಾಗಿದೆ.
Also Read: SSLC | ಹಿರಿಯೂರಿನ ಪಿಗ್ಮಿ ಕಲೆಕ್ಟರ್ ಪುತ್ರ, ಸರ್ಕಾರಿ ಶಾಲೆ ಶಿಕ್ಷಕರ ಪುತ್ರಿ ರಾಜ್ಯಕ್ಕೆ ಟಾಪರ್ಸ್
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 2 ಮಿ.ಮೀ, ಹಿರೇಗುಂಟನೂರು 10.8 ಮಿ.ಮೀ, ತುರುವನೂರು 12.4 ಮಿ.ಮೀ ಮಳೆಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 2.8 ಮಿ.ಮೀ, ನಾಯಕನಹಟ್ಟಿ 13.3 ಮಿ.ಮೀ, ಪರಶುರಾಂಪುರ 4.4 ಮಿ.ಮೀ, ತಳಕು 9.8 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 3 ಮಿ.ಮೀ, ಬಿ.ದುರ್ಗ 7.8 ಮಿ.ಮೀ, ರಾಮಗಿರಿ 1.4 ಮಿ.ಮೀ, ತಾಳ್ಯ 2.7 ಮಿ.ಮೀ ಮಳೆಯಾಗಿದೆ.
Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 4.2 ಮಿ.ಮೀ, ಮಾಡದಕೆರೆ 6 ಮಿ.ಮೀ, ಮತ್ತೋಡು 7 ಮಿ.ಮೀ, ಶ್ರೀರಾಂಪುರ 2.5 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 14.6 ಮಿ.ಮೀ ಹಾಗೂ ದೇವಸಮುದ್ರದಲ್ಲಿ 21.4 ಮಿ.ಮೀ ಮಳೆಯಾಗಿದೆ.
15 ಮನೆಗಳಿಗೆ ಹಾನಿ:
ಮಳೆಯಿಂದಾಗಿ ಜಿಲ್ಲೆಯಾದ್ಯಂತ 13 ಮನೆಗಳು ಭಾಗಶಃ ಹಾಗೂ 2 ಮನೆಗಳು ಸಂಪೂರ್ಣ ಹಾನಿಯಾಗಿವೆ. 2 ದೊಡ್ಡಜಾನುವಾರು ಹಾನಿ, 24.7 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಹಾಗೂ 4.5 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದೆ.
Also Read: ಬೇಸಿಗೆಯಲ್ಲಿ ಯೋಗ ಮಾಡಿದ ನಂತರ ಈ ಪಾನೀಯಗಳನ್ನು ಕುಡಿಯಿರಿ
ಚಿತ್ರದುರ್ಗ ತಾಲ್ಲೂಕಿನ 4 ಭಾಗಶಃ ಮನೆ ಹಾನಿ, ಚಳ್ಳಕೆರೆ ತಾಲ್ಲೂಕಿನಲ್ಲಿ 1 ದೊಡ್ಡ ಜಾನುವಾರು, ತಲಾ 3 ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆ, ಹೊಳಲ್ಕೆರೆ ತಾಲ್ಲೂಕಿನಲ್ಲಿ 2.5 ಹೆಕ್ಟೇರ್ ತೋಟಗಾರಿಕೆ ಬೆಳೆ, ಹೊಸದುರ್ಗ ತಾಲ್ಲೂಕಿನಲ್ಲಿ 14 ಹೆಕ್ಟೇರ್ ತೋಟಗಾರಿಕೆ ಬೆಳೆ, ಹಿರಿಯೂರು ತಾಲ್ಲೂಕಿನಲ್ಲಿ 5 ಭಾಗಶಃ 2 ಪೂರ್ಣ ಮನೆ ಹಾಗೂ 4.7 ಹೆಕ್ಟೇರ್ ತೋಟಗಾರಿಕೆ ಹಾಗೂ 1 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ.
ಮೊಳಕಾಲ್ಮುರು ತಾಲ್ಲೂಕಿನಲ್ಲಿ 2 ಭಾಗಶಃ ಮನೆ ಹಾನಿಯಾಗಿದೆ, 1 ದೊಡ ಜಾನುವಾರು ಮೃತಪಟ್ಟಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
