ಮುಖ್ಯ ಸುದ್ದಿ
ಹರಿವಾಯುಸ್ತುತಿ ಪಾರಾಯಣದ ಹರಿದಾಸ ಹಬ್ಬಕ್ಕೆ 23ನೇ ಸಂಭ್ರಮ | ಅಯೋಧ್ಯಾರಾಮನ ಭವ್ಯ ಶೋಭಾಯಾತ್ರೆ
CHITRADURGA NEWS | 18 JANUARY 2024
ಚಿತ್ರದುರ್ಗ (CHITRADURGA): ಶ್ರೀ ಹರಿವಾಯುಸ್ತುತಿ ಪಾರಾಯಣದ ಶ್ರೀ ಕನಕ–ಪುರಂದರಾದಿ ಹರಿದಾಸರುಗಳ ಸ್ಮರಣೀಯ ಹರಿದಾಸ ಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದೆ. ಶ್ರೀ ವಿಜಯ ವಿಠ್ಠಲ ಪ್ರಶಸ್ತಿ ಹಾಗೂ ಶ್ರೀ ಕೃಷ್ಣ ಮಾನ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಹರಿವಾಯು ಗುರು ಸೇವಾ ಟ್ರಸ್ಟ್‌ನಿಂದ ವಾಸವಿ ಶಾಲೆ ಆವರಣದಲ್ಲಿ 8 ದಿನಗಳ ಹಬ್ಬಕ್ಕೆ ಅಂತಿಮ ಸಿದ್ಧತೆ ಪ್ರಾರಂಭಿಸಿದೆ.
ಹಬ್ಬದಲ್ಲಿ ಪಾರಾಯಣ, ಭಜನೆ, ಉಪನ್ಯಾಸ, ಪವನ-ಹೋಮ ಶ್ರೀರಾಮಡೋಲೋತ್ಸವ ಆರ್ಶೀವಚನ, ದಾಸಲಹರಿ ಶ್ರೀ ರಾಮನ ಸ್ತುತಿ, ಸ್ತೋತ್ರ, ಪ್ರವಚನ, ಭವ್ಯ ಶೋಬಾಯಾತ್ರೆ, ಶ್ರೀರಾಮತಾರಕ ಹೋಮ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ: ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವ | ಬ್ರಹ್ಮ ರಥೋತ್ಸವಕ್ಕೆ ಸಿದ್ಧತೆ
ಪ್ರತಿ ದಿನ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಬೆಳಿಗ್ಗೆ 8 ರಿಂದ ಮಹಾಭಾರತ ತಾತ್ಪರ್ಯ ನಿರ್ಣಯಗಳ ಬಗ್ಗೆ ಪಾಠ-ಪ್ರವಚನ 9 ರಿಂದ ಶ್ರೀಗಳು ಗೃಹ ಭೇಟಿ ಪಾದ ಪೂಜಾ ಕಾರ್ಯಕ್ರಮ, 10.30ರಿಂದ ಸಂಸ್ಥಾನ ಪೂಜೆ ನಡೆಯಲಿದೆ. ಇದರೊಂದಿಗೆ ಪ್ರತಿ ದಿನ ಸಂಜೆ ವಾಸವಿ ಶಾಲೆಯ ಆವರಣದಲ್ಲಿ ಸಂಜೆ 6 ರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ, 6.30ರಿಂದ ಶ್ರೀ ರಾಮನಾಮ ಭಜನೆ ಸಂಕೀರ್ತನೆ 7 ರಿಂದ ಅಯೋಧ್ಯಾರಾಮನ ಬಗ್ಗೆ ಉಪನ್ಯಾಸ ನಡೆಯಲಿದ್ದು, 8 ರಿಂದ ಶ್ರೀಪಾದಂಗಳವರ ಅನುಗ್ರಹ ಅಮೃತವಾಣಿ ನಡೆಯಲಿದೆ.
ಜ.20 ರಂದು ಸಂಜೆ 6.30ಕ್ಕೆ ಶ್ರೀ ಹರಿವಾಯುಸ್ತುತಿ ಪಾರಾಯಣದ 23ನೇ ವಾರ್ಷಿಕೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಭೀಮನಕಟ್ಟೆಯ ಶ್ರೀ ಭೀಮಸೇತು ಮುನಿವೃಂದ ಮಠದ ಶ್ರೀ ರಘುವರೇಂದ್ರತೀರ್ಥ ಶ್ರೀಪಾದಂಗಳವರು ವ್ಯಾಸ–ದಾಸ ಸುವಿಜ್ಞಾನ ದೀಪ ಬೆಳಗಲಿದ್ದಾರೆ. ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ಅಧ್ಯಾಪಕ ಕೃಷ್ಣರಾಜ ಕುತ್ವಾಡಿ ಉಪನ್ಯಾಸ ನೀಡಲಿದ್ದಾರೆ.
ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್, ಶ್ರೀ ರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕ ಪ್ರಾಣೇಶಾಚಾರ್ಯ ಕೊಪ್ರ, ಉತ್ತರಾದಿ ಮಠದ ವ್ಯವಸ್ಥಾಪಕ ಉಪಾಧ್ಯ ಪ್ರಭಂಜನಾಚಾರ್ಯ ಕೂಸಸೂರು, ನಗರಸಭೆ ಸದಸ್ಯ ಜಿ.ಹರೀಶ್, ಗುರುರಾಜ ಸೇವಾ ಸಂಘದ ಅಧ್ಯಕ್ಷ ವೇದವ್ಯಾಸಚಾರ್ಯ, ಬಡಗನಾಡು ಬ್ರಾಹ್ಮಣ ಸಂಘದ ಅಧ್ಯಕ್ಷ ಎ.ಶೇಷಗಿರಿರಾವ್, ಶ್ರೀ ವೈಷ್ಣವ ಸಭಾದ ಅಧ್ಯಕ್ಷ ಜಗದೀಶ್ ಜೆ.ಅಯ್ಯಂಗಾರ್, ಸದ್ಗುರು ಬ್ರಹ್ಮಚೈತನ್ಯ ಭಕ್ತ ಮಂಡಳಿ ಅಧ್ಯಕ್ಷ ಕಟೀಲ್ ದಿವಾಕರ್, ಚಳ್ಳಕೆರೆ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಅನಂತರಾಮ್ ಗೌತಮ್, ಹೊಸದುರ್ಗ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಬಿ.ಚಂದ್ರಪ್ರಕಾಶ್, ಹಿರಿಯೂರು ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಸ್ವಾಮಿನಾಥ್, ಮೊಳಕಾಲ್ಮುರು ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎಸ್.ಎನ್.ಲಕ್ಷ್ಮೀಪತಿ, ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಜ.21ರಂದು ಶ್ರೀ ಪರಂದರದಾಸರ ಕೃತಿಗಳ ಬಗ್ಗೆ ಶ್ರೀ ಬ್ರಹ್ಮ ಚೈತನ್ಯ ಭಜನಾ ಮಂಡಳಿಯವರಿಂದ, ಜ. 22ರಿಂದು ಶ್ರೀ ಕನಕದಾಸರ ಕೃತಿಗಳ ಬಗ್ಗೆ ಶ್ರೀವಾರಿ ಭಜನಾ ಮಂಡಳಿಯವರಿಂದ, ಜ.23 ರಂದು ಶ್ರೀ ವಿಜಯ ದಾಸರ ಕೃತಿಗಳ ಬಗ್ಗೆ ಸರಸ್ವತಿ ಭಜನಾ ಮಂಡಳಿಯವರಿಂದ, ಜ.24 ರಂದು ಶ್ರೀ ಗೋಪಾಲದಾಸರ ಕೃತಿಗಳ ಬಗ್ಗೆ ಶ್ರೀ ಸಪ್ತಗಿರಿ ಭಜನಾ ಮಂಡಳಿಯವರಿಂದ, ಜ.25 ರಂದು ಶ್ರೀ ಜಗನ್ನಾಥ ದಾಸರ ಕೃತಿಗಳ ಬಗ್ಗೆ ಶ್ರೀ ಪಾಂಡುರಂಗ ಭಜನಾ ಮಂಡಳಿಯವರಿಂದ ಶ್ರೀ ರಾಮ ಸಂಕೀರ್ತನೆ ನಡೆಯಲಿದೆ.
ಜ.26 ರಂದು ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀ ರಾಮ ತಾರಕ ಹೋಮ ನಡೆಯಲಿದೆ. ಬೆಳಿಗ್ಗೆ 5.30ಕ್ಕೆ ಪುಣ್ಯಾಹ, ಕಳಶ ಸ್ಥಾಪನೆ, ಹೋಮ 9.15ಕ್ಕೆ ಪೂರ್ಣಾಹುತಿ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ರಿಂದ ಅಯೋಧ್ಯಾರಾಮನ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ಪುಷ್ಪಾಲಂಕೃತ ರಜತ ರಥದಲ್ಲಿ ಶ್ರೀ ರಾಮಚಂದ್ರದೇವರ ವಿಗ್ರಹದೊಂದಿಗೆ ದಾಸವರೇಣ್ಯರ ಭಾವಚಿತ್ರ ಹಾಗೂ ಶ್ರೀಪಾದಂಗಳವರು ಭಾಗವಹಿಸಲಿದ್ದಾರೆ. ಯಾತ್ರೆ ಆನೆ ಬಾಗಿಲ ಬಳಿಯ ಶ್ರೀ ಸುವೃಷ್ಟಿ ಪ್ರಾಣದೇವರ ಸನ್ನಿಧಾನದಿಂದ ಪ್ರಾರಂಭವಾಗಿ ವಾಸವಿ ವಿದ್ಯಾ ಸಂಸ್ಥೆಯನ್ನು ತಲುಪಲಿದೆ. ಶೋಭಾಯಾತ್ರೆಯನ್ನು ಶಾಸಕ ಕೆ.ಸಿ.ವಿರೇಂದ್ರ ಹಾಗೂ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಉದ್ಘಾಟಿಸಲಿದ್ದಾರೆ. ಸಂಜೆ 6.30ರಿಂದ ಸಾಧನಾ ಸನ್ಮಾನ ಪ್ರವಚನ ಮಂಗಳ ಮಹೋತ್ಸವ ಸಂಜೆ 7 ಕ್ಕೆ ಶ್ರೀರಾಮ ಡೊಲೋತ್ಸವ ನಡೆಯಲಿದೆ.
ಇದನ್ನೂ ಓದಿ: ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ
ಜ.27 ರ ಶನಿವಾರ ಬೆಳ್ಳಿಗೆ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ವಾಯುಸ್ತುತಿ ಪುನಃಶ್ಚರಣ ಹೋಮ, ಬೆಳಿಗ್ಗೆ 5.30ಕ್ಕೆ ಪುಣ್ಯಾಹ, ಕಳಶ ಸ್ಥಾಪನೆ, ಹೋಮ 9.15ಕ್ಕೆ ಪೂರ್ಣಾಹುತಿ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಕ್ಕೆ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶ್ರೀರಾಮ ಸಂಕೀರ್ತನ ಶ್ರೀ ಬೃಂದಾವನ ಭಜನಾ ಮಂಡಲಿಯವರಿಂದ ಸಂಜೆ 6.30ಕ್ಕೆ 2024ರ ಹರಿದಾಸ ಹಬ್ಬದ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಆಶೋಕ ಹಾರನಹಳ್ಳಿ ಆಗಮಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ಕೆ.ನಾಗರಾಜ ರಾವ್ ತಿಳಿಸಿದ್ದಾರೆ.