Connect with us

    ಭದ್ರಾ ಮೇಲ್ದಂಡೆಗೆ ಶೀಘ್ರ ₹ 5,300 ಕೋಟಿ ಅನುದಾನ | ಸಂಸದ ಗೋವಿಂದ ಎಂ.ಕಾರಜೋಳ

    govinda karjola

    ಮುಖ್ಯ ಸುದ್ದಿ

    ಭದ್ರಾ ಮೇಲ್ದಂಡೆಗೆ ಶೀಘ್ರ ₹ 5,300 ಕೋಟಿ ಅನುದಾನ | ಸಂಸದ ಗೋವಿಂದ ಎಂ.ಕಾರಜೋಳ

    CHITRADURGA NEWS | 29 JUNE 2024
    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಕಾಮಗಾರಿಗೆ ₹ 5,300 ಕೋಟಿ ಅನುದಾನ ಶೀಘ್ರ ಬಿಡುಗಡೆಯಾಗಲಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಭರವಸೆ ನೀಡಿದರು.

    ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಗೆ ಆಗಮಿಸಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ ಜತೆ ರಾಜ್ಯದ ಸಂಸದರ ಸಭೆ ನಡೆಸಿದರು. ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ವಿಚಾರ ಮೊದಲು ಪ್ರಸ್ತಾಪ ಮಾಡಲಾಯಿತು’ ಎಂದು ಶನಿವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

    ಕ್ಲಿಕ್‌ ಮಾಡಿ ಓದಿ: ಭದ್ರೆಗೆ ಹೆಚ್ಚಿದ ಒಳ ಹರಿವು | ಒಂದೇ ದಿನಕ್ಕೆ 1.5 ಅಡಿ ನೀರು ಸಂಗ್ರಹ

    ‘ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸಂಸದರಾದ ಬಸವರಾಜ್‌ ಬೊಮ್ಮಾಯಿ ಮತ್ತು ನಾನು ಸ್ಪಷ್ಟವಾಗಿ ವಿವರಣೆ ನೀಡಿದೆವು. ಈ ವೇಳೆ‌ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ‌ ನೀರಾವರಿ ಇಲಾಖೆಗೆ ಕೆಲ ತಾಂತ್ರಿಕ ವಿವರಣೆ ಕೇಳಿದ್ದೇವೆ, ಆ ಮಾಹಿತಿ ಎಷ್ಟು ಬೇಗ ಕೊಡುತ್ತಿರೋ ಅಷ್ಟು ಬೇಗ ₹ 5,300 ಕೋಟಿ ಅನುದಾನ ಬಿಡುಗಡೆ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ’ ಎಂದು ಹೇಳಿದರು.

    ‘ರಾಜ್ಯ ಸರ್ಕಾರ ತಾಂತ್ರಿಕ ವಿವರಣೆ ನೀಡಿದ ಕೂಡಲೇ ಯೋಜನೆಗೆ ₹ 5,300 ಕೋಟಿ‌ ಬಿಡುಗಡೆಯಾಗುತ್ತದೆ. ಆದರೆ ರಾಜ್ಯ ಸರ್ಕಾರ ಈ ವರ್ಷ ₹ 800 ಕೋಟಿ ಮೀಸಲಿಟ್ಟಿದೆ. ಆದರೆ, ಇದು ಬಹಳ‌ ಕಡಿಮೆ. ಹಿಂದೆ ಬಿಜೆಪಿ ಸರ್ಕಾರ ಸಾವಿರ ಕೋಟಿ ಲೆಕ್ಕದಲ್ಲಿ ಅನುದಾನ ನೀಡಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ನೂರರ ಲೆಕ್ಕದಲ್ಲಿ ಕೊಡುತ್ತಿದೆ’ ಎಂದು ಬೇಸರಿಸಿದರು.

    ಕ್ಲಿಕ್‌ ಮಾಡಿ ಓದಿ: ಭರಮಸಾಗರ ದೊಡ್ಡಕೆರೆಗೆ ಹರಿದ ನೀರು | ಸಂಭ್ರಮಿಸಿದ ರೈತರು

    ಮಾಜಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ಮುಖಂಡರಾದ ಜಿ.ಟಿ.ಸುರೇಶ್‌, ಸಂಪತ್‌ ಕುಮಾರ್, ವೆಂಕಟೇಶ್‌ ಯಾದವ್, ನವೀನ್‌ ಚಾಲುಕ್ಯ, ಮಾಧುರಿ ಗಿರೀಶ್‌, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್‌ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top