Connect with us

ಯರಬಳ್ಳಿ ಪಿಡಿಓ ಎಸ್.ಬಸವರಾಜು ಅಮಾನತು

ಯರಬಳ್ಳಿ ಪಿಡಿಓ ಎಸ್.ಬಸವರಾಜು ಅಮಾನತು

ಕ್ರೈಂ ಸುದ್ದಿ

ಯರಬಳ್ಳಿ ಪಿಡಿಓ ಎಸ್.ಬಸವರಾಜು ಅಮಾನತು

ಚಿತ್ರದುರ್ಗ ನ್ಯೂಸ್.ಕಾಂ: ಜಂಟಿ ಖಾತೆಯಲ್ಲಿದ್ದ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಮತ್ತೊಬ್ಬರಿಗೆ ಖಾತೆ ಹಾಗೂ ಇ-ಸ್ವತ್ತು ಮಾಡಿದ ಆರೋಪದಲ್ಲಿ ಹಿರಿಯೂರು ತಾಲ್ಲೂಕು ಯರಬಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಎಸ್.ಬಸವರಾಜು ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.

ಯರಬಳ್ಳಿಯ ತಿಪ್ಪಮ್ಮ ಹೆಸರಿನಲ್ಲಿನ ಸೈಟ್ ನಂ. 31 ಹಾಗೂ 32ನ್ನು ವೈನ್ ಶಾಪ್ ಅಂಗಡಿ ವ್ಯವಹಾರ ನಡೆಸುವುದಕ್ಕಾಗಿ ಯರಬಳ್ಳಿ ಗ್ರಾಮ ಪಂಚಾಯತ್‍ನ ಕಂದಿಕೆರೆ ಗ್ರಾಮದ ಕೆ.ವಿ.ಉಮಾದೇವಿ ಹಾಗೂ ಆರ್.ಹೊರಕೇರಪ್ಪ ಹಿರಿಯೂರಿನ ಉಪನೊಂದಣಾಧಿಕಾರಿ ಕಚೇರಿಯಲ್ಲಿ 2017 ಫೆಬ್ರವರಿ 13 ರಂದು ಜಂಟಿ ಖಾತೆ ಮಾಡಿಸಿಕೊಂಡಿದ್ದರು.

ಇದನ್ನೂ ಓದಿ: ಜಿಲ್ಲೆಯಲ್ಲಿ ಬರಗಾಲ, ಶೇ.25 ರಷ್ಟು ಮಧ್ಯಂತರ ಪರಿಹಾರಕ್ಕೆ ಸರ್ಕಾರಕ್ಕೆ ಶಿಫಾರಸ್ಸು | ಜಿಲ್ಲಾಧಿಕಾರಿ ದಿವ್ಯಪ್ರಭು ನೇತೃತ್ವದಲ್ಲಿ ರೈತರು, ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ

ಇದನ್ನು ಅಕ್ರಮವಾಗಿ ನಕಲಿ ಮತ್ತು ಪೋರ್ಜರಿ ದಾಖಲೆಗಳನ್ನು ಸೃಷ್ಟಿಸಿಕೊಂಡು, ಆರ್.ಹೊರಕೇರಪ್ಪ ಇವರಿಗೆ ಖಾತೆ ಮಾಡಿ, ಕಾನೂನು ಬಾಹಿರವಾಗಿ ಇ-ಸ್ವತ್ತು ಮಾಡಿಕೊಟ್ಟು ಅಧಿಕಾರದ ದುರುಪಯೋಗ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ಹಿರಿಯೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಂಡಿದ್ದರು.

ಈ ಬಗ್ಗೆ ಸ್ಥಳ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯವರಿಗೆ ಆದೇಶಿಸಲಾಗಿತ್ತು. ಅದರನ್ವಯ ಜಿ.ಪಂ. ಉಪಕಾರ್ಯದರ್ಶಿ ಸಲ್ಲಿಸಿರುವ ವರದಿ ಆಧಾರದಲ್ಲಿ, ಯರಬಳ್ಳಿ ಗ್ರಾಮ ಪಂಚಾಯತ್ ಪಿಡಿಒ ಬಸವರಾಜು ಅಮಾನತುಗೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
Exit mobile version