Connect with us

    ರಂಗೇರಿದ ಎಂಎಲ್ಸಿ ಚುನಾವಣಾ ಕಣ | ಚುನಾವಣಾ ಕಚೇರಿ ತೆರೆದ ವೈ.ಎ.ನಾರಾಯಣಸ್ವಾಮಿ

    ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ವೈ.ಎ.ನಾರಾಯಣಸ್ವಾಮಿ ಅವರ ಚುನಾವಣಾ ಕಾರ್ಯಲಯ ಉದ್ಘಾಟಿಸಿದರು.

    ಮುಖ್ಯ ಸುದ್ದಿ

    ರಂಗೇರಿದ ಎಂಎಲ್ಸಿ ಚುನಾವಣಾ ಕಣ | ಚುನಾವಣಾ ಕಚೇರಿ ತೆರೆದ ವೈ.ಎ.ನಾರಾಯಣಸ್ವಾಮಿ

    CHITRADURGA NEWS | 30 JANUARY 2024

    ಚಿತ್ರದುರ್ಗ: ಆಗ್ನೇಯ ವಿಧಾನ ಪರಿಷತ್ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದ್ದು, ಹಾಲಿ ಪರಿಷತ್ ಸದಸ್ಯ, ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ನಗರದ ಜೆ.ಸಿ.ಆರ್. ಬಡಾವಣೆಯಲ್ಲಿ ಚುನಾವಣಾ ಕಾರ್ಯಲಯ ಉದ್ಘಾಟನೆ ಮಾಡುವ ಮೂಲಕ ಅಖಾಡಕ್ಕೆ ಸಜ್ಜಾಗಿದ್ದಾರೆ.

    ಚಿತ್ರದುರ್ಗದ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ವೈ.ಎ.ನಾರಾಯಣಸ್ವಾಮಿ ಅವರ ಚುನಾವಣಾ ಕಾರ್ಯಲಯ ಉದ್ಘಾಟಿಸಿ ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಮೊದಲ ಪ್ರಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

    ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ನಾರಾಯಣಸ್ವಾಮಿ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದಾರೆ. ಶಿಕ್ಷಕರ ನಿಜವಾದ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ. ಅವರನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡಿ ಕಳುಹಿಸಿಕೊಡಿ ಎಂದು ತಿಳಿಸಿದರು.

    ಇದನ್ನೂ ಓದಿ: ಜನವರಿ 30 ಅಡಿಕೆ ಧಾರಣೆ

    ಇಡೀ ದೇಶದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಪ್ರಧಾನಿ ನರೇಂದ್ರಮೋದಿ ನಾಯಕತ್ವದಲ್ಲಿ ಭಾರತ ಆರ್ಥಿಕ ಸ್ವಾವಲಂಬನೆಯಲ್ಲಿ 5ನೇ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಮೂರನೆ ಸ್ಥಾನಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದರು.

    ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 371 ರದ್ದುಪಡಿಸಿ ದಿಟ್ಟ ತೀರ್ಮಾನ ತೆಗೆದುಕೊಂಡಿರುವ ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟಿಸಿ 500 ವರ್ಷಗಳ ಭಾರತೀಯರ ಕನಸನ್ನು ಸಾಕಾರಗೊಳಿಸಿದ್ದಾರೆ. ಆರ್ಥಿಕವಾಗಿ ಭಾರತ ಬಲವಾಗಿರುವುದಕ್ಕೆ ವಿಶ್ವನಾಯಕ ಮೋದಿ ಕಾರಣ ಎಂದು ಹೇಳಿದರು.

    ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, 4ನೇ ಅವಧಿಗೆ ಆಗ್ನೇಯ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ. ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಲು ಶಿಕ್ಷಕರಲ್ಲಿ ಮನವಿ ಮಾಡಿದರು.

    ಇದನ್ನೂ ಓದಿ: ಪ್ರಿಯತಮೆಯ ಕತ್ತು ಕೊಯ್ದು ಹತ್ಯೆಗೆ ಯತ್ನ

    ಶಿಕ್ಷಕರ ಕ್ಷೇತ್ರ ಬುದ್ದಿವಂತ ಮತದಾರರ ಚುನಾವಣೆಯಾಗಿದ್ದು, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾಗಿರುವುದರಿಂದ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ವೈ.ಎ.ನಾರಾಯಣಸ್ವಾಮಿ ಮನವಿ ಮಾಡಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಿಕಾಂತ್, ಬಿಜೆಪಿ ನಗರಾಧ್ಯಕ್ಷ ನವೀನ್ ಚಾಲುಕ್ಯ, ತಿಪ್ಪೇಸ್ವಾಮಿ, ನಿವೃತ್ತ ಶಿಕ್ಷಕರಾದ ಜಯಣ್ಣ, ಚಿಕ್ಕನಾಗಪ್ಪ, ನೀಲಕಂಠಾಚಾರ್, ಶಿವಣ್ಣ, ನಾಗೇಂದ್ರಪ್ಪ, ಜ್ಞಾನಮೂರ್ತಿ, ನಾಗಲಿಂಗರೆಡ್ಡಿ ಮತ್ತಿತರರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top