ಮುಖ್ಯ ಸುದ್ದಿ
ಹಿರೇಗುಂಟನೂರಿನಲ್ಲಿ ಗಾಳಿಯ ಅವಾಂತರ | ಧರೆಗುರುಳಿದ ಮರ, ವಿದ್ಯುತ್ ಕಂಬಗಳು

CHITRADURGA NEWS | 08 MAY 2024
ಚಿತ್ರದುರ್ಗ: ಬುಧವಾರ ಸಂಜೆ ಭಾರೀ ಗಾಳಿಯೊಂದಿಗೆ ಆರಂಭವಾದ ಮಳೆ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರಿನಲ್ಲಿ ಅವಾಂತರ ಸೃಷ್ಟಿಸಿದ್ದಾನೆ.
ಭಾರೀ ಗಾಳಿ ಬೀಸಿದ್ದರಿಂದ ಹಿರೇಗುಂಟನೂರು ಗ್ರಾಮ ಪಂಚಾಯಿತಿ ಕಟ್ಟದ ಸಮೀಪದಲ್ಲಿದ್ದ ಬೃಹತ್ ಗಾತ್ರದ ಮರವೊಂದು ರಸ್ತಗೆ ಉರುಳಿದೆ.
ಇದನ್ನೂ ಓದಿ: ಮಂಗಳವಾರ ಸಂಜೆ ಎಲ್ಲೆಲ್ಲಿ ಎಷ್ಟು ಮಳೆ ಸುರಿದಿದೆ
ಮರ ಧರೆಗುರುಳುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಸುಮಾರು 8 ರಿಂದ 9 ವಿದ್ಯುತ್ ಕಂಬಗಳು ಕೂಡಾ ನೆಲಕ್ಕೆ ಅಪ್ಪಳಿಸಿವೆ. ವಿದ್ಯುತ್ ತಂತಿ ರಸ್ತೆಯಲ್ಲಿ ಹರಡಿಕೊಂಡಿದೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.
ಗ್ರಾಮದ ಪ್ರಮುಖ ಮಾರ್ಗದ ವಿದ್ಯುತ್ ಕಂಬಗಳೇ ನೆಲಕ್ಕೆ ಬಿದ್ದಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.
ಇದನ್ನೂ ಓದಿ: ಸಚಿವ ಸಂಪುಟದಿಂದ ಡಿಕೆಶಿ ವಜಾಗೊಳಿಸಿ | ಜೆಡಿಎಸ್ ಅಗ್ರಹ
ಗಾಳಿಯೇ ಹೆಚ್ಚಾಗಿದ್ದು, ಮಳೆಯ ಪ್ರಮಾಣ ಕಡಿಮೆಯಾಗಿದೆ ಎಂದು ರೈತರು ಹೇಳಿಕೊಂಡಿದ್ದಾರೆ
ಚಿತ್ರದುರ್ಗ ನಗರದಲ್ಲೂ ಸಂಜೆ ಗಾಳಿ ಸಮೇತ ಸಣ್ಣ ಪ್ರಮಾಣದ ಮಳೆಯಾಗಿದೆ.
