ಮುಖ್ಯ ಸುದ್ದಿ
ದೇಶದಲ್ಲೇ ಮೊದಲು ಎನ್‍ಇಪಿ ಜಾರಿ ಮಾಡಿದ ರಾಜ್ಯದಲ್ಲೇ ಎನ್‍ಇಪಿ ರದ್ದು ಎಷ್ಟು ಸರಿ: ಎಬಿವಿಪಿ ಪ್ರಶ್ನೆ
ಚಿತ್ರದುರ್ಗ ನ್ಯೂಸ್:
ಹೊಸ ಶಿಕ್ಷಣ ನೀತಿ(ಎನ್‍ಇಪಿ)ಯಲ್ಲಿ ಲೋಪದೋಷಗಳಿದ್ದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಿಪಡಿಸಲಿ, ಆದರೆ, ರಾಜಕೀಯ ಕಾರಣಕ್ಕಾಗಿ ಎನ್‍ಇಪಿ ರದ್ದು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಸರಿಯಲ್ಲ ಎಂದು ಎಬಿವಿಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಎಬಿವಿಪಿ ನೇತೃತ್ವದಲ್ಲಿ ಹಲವು ಕಾಲೇಜು ವಿದ್ಯಾರ್ಥಿಗಳು ಪ್ರತಿಭಟಿಸಿ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜಕೀಯ ಪ್ರೇರಿತ ಸಂಕುಚಿತತೆ ಹೊಂದದೆ, ರಾಜಕೀಯ ಸ್ವಾರ್ಥಕ್ಕೆ ಒಳಗಾಗಿದೆ ಎನ್‍ಇಪಿ ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದರು.
ಇಡೀ ದೇಶದಲ್ಲಿ ನಮ್ಮ ಕರ್ನಾಟಕದಲ್ಲೇ ಮೊದಲ ಬಾರಿಗೆ 2020-2021 ರಲ್ಲಿ ಎನ್‍ಇಪಿ ಜಾರಿಗೊಳಿಸಿದ ರಾಜ್ಯ ಎಂಬ ಹೆಮ್ಮೆಗೂ ಪಾತ್ರವಾಗಿದೆ. ಇಂತಹ ಶಿಕ್ಷಣ ನೀತಿಯನ್ನು ಅದು ಜಾರಿಗೊಳ್ಳುತ್ತಿರುವ ಹಂತದಲ್ಲಿಯೇ ರದ್ದುಗೊಳಿಸಲು ಹೊರಟಿರುವ ಈಗಿನ ರಾಜ್ಯ ಸರ್ಕಾರದ ಕ್ರಮ ಶಿಕ್ಷಣ ಹಾಗೂ ವಿದ್ಯಾರ್ಥಿ ವಿರೋಧಿಯಾಗಿದೆ. ಇಂತಹ ಪ್ರರ್ವಾಗ್ರಹ ಪೀಡಿತ ಆಲೋಚನೆಗಳಿಂದ ಸರ್ಕಾರ ಹೊರಬರಬೇಕು ಎಂದು ಆಗ್ರಹಿಸಿದರು.
ಎನ್‍ಇಪಿಯನ್ನು ಕೇಂದ್ರ ಸರ್ಕಾರ ಕೇವಲ ತನ್ನ ಮರ್ಜಿಯಂತೆ ರೂಪಿಸಿದ್ದಲ್ಲ, ದೇಶಾದ್ಯಂತ ವಿವಿಧ ಸ್ಥರಗಳಲ್ಲಿ ಶಿಕ್ಷಣ ರಂಗದ ತಜ್ಞರ ಜೊತೆಗೆ ನಿರಂತರವಾಗಿ ಚರ್ಚೆ ನಡೆಸಿ ತಯಾರಿಸಿದ ಕರಡಿನ ಆಧಾರದಲ್ಲಿ ಈ ನೀತಿಯನ್ನು ರೂಪಿಸಲಾಗಿದೆ, ಈಗಿನ ಎನ್‍ಇಪಿಯು ಮೊದಲ ಬಾರಿಗೆ ವಿದ್ಯಾರ್ಥಿ ಕೇಂದ್ರೀತವಾಗಿದ್ದು ಬಹು ಶಿಸ್ತೀಯ ಅಧ್ಯಯನಕ್ಕೆ, ಕೌಶಲ್ಯಾಧಾರಿತ ಶಿಕ್ಷಣಕ್ಕೆ, ಭಾರತದ ಬಹುಭಾಷಿಕ ಹಾಗೂ ಸಾಂಸ್ಕøತಿಕ ಬಹುತ್ವಕ್ಕೆ. ಪ್ರಾಂತೀಯ-ಸ್ಥಳೀಯ ಭಾಗ್ಯಗಳ ಅಭಿವೃದ್ಧಿಗೆ ಸೂಕ್ತ ಮಾನ್ಯತೆ ಹಾಗೂ ಪ್ರಾಮುಖ್ಯ ನೀಡಿ ರೂಪಿಸಲಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಎನ್‍ಇಪಿ ಬಗೆಗೆ ವಿರೋಧ ಯಾಕಾಗಿ, ಯಾವ ಶೈಕ್ಷಣಿಕ ಹಾಗೂ ತರ್ಕಬದ್ಧ ಕಾರಣಗಳಿಗಾಗಿ ಎಂದು ಪ್ರಶ್ನಿಸಿರುವ ಎಬಿವಿಪಿ, ಈಗ ಜಾರಿಯಲ್ಲಿರುವ ಓಇPಯ ಬಗ್ಗೆ, ಅದರ ಸಾಧಕ-ಭಾದಕಗಳ ಬಗ್ಗೆ ಸೂಕ್ತ ವೇದಿಕೆಗಳಲ್ಲಿ ಚರ್ಚಿಸದೆ, ಆ ಕುರಿತು ಶಿಕ್ಷಣ ತಜ್ಞರ ಸೆಮಿನಾರ್ ನಡೆಸಿ ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನ ಮಾಡದೆ ಅದರ ರದ್ದತಿಯ ಘೋಷಣೆ ಆದೆಷ್ಟು ಸರಿ ಎಂದು ಕೇಳಿದ್ದಾರೆ.
ಪ್ರತಿಭಟನೆಯಲ್ಲಿ ಎಬಿವಿಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ವಿಭಾಗ ಸಂಘಟನಾ ಕಾರ್ಯದರ್ಶಿ ಮಂಜುನಾಥ, ಪ್ರಾಂತ ಕಾರ್ಯಸಮಿತಿ ಆದರ್ಶ್, ಜಿಲ್ಲಾ ಸಂಚಾಲಕ ಸಿದ್ದೇಶ್, ಕನಕರಾಜ್, ಮನೋಜ್, ಭರತ್ ಮತ್ತಿತರರಿದ್ದರು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)