ಮುಖ್ಯ ಸುದ್ದಿ
VV Sagara: ವಿವಿ ಸಾಗರ | ಇಂದಿನ ಜಲಾಶಯದ ನೀರಿನ ಮಟ್ಟ ಎಷ್ಟಿದೆ

Published on
CHITRADURGA NEWS | 03 AUGUST 2024
ಚಿತ್ರದುರ್ಗ: ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಂಗಾ ಹಾಗೂ ಭದ್ರಾ ಜಲಾಶಯಗಳು ಭರ್ತಿಯಾಗಿವೆ.
ಇದರೊಟ್ಟಿಗೆ ಚಿಕ್ಕಮಗಳೂರು ಜಿಲ್ಲೆಯ ಅಯ್ಯನಕೆರೆ, ಮದಗದ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದು ಹರಿಯುತ್ತಿವೆ. ಈ ನೀರು ವೇದಾವತಿ ಮೂಲಕ ವಿವಿ ಸಾಗರ ತಲುಪುತ್ತಿದೆ.
ಇದನ್ನೂ ಓದಿ: ಕಾರು ಅಪಘಾತ | ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು
ವೇದಾವತಿ ನದಿ ಮೂಲಕ ಹರಿದ ನೀರಿನ ಪ್ರಮಾಣ ಶನಿವಾರ ಬೆಳಗ್ಗೆ ನಡೆಸಿದ ಮಾಪನದಂತೆ ೮೦೮ ಕ್ಯೂಸೆಕ್ ನೀರು ಹರಿದು ಬಂದಿದೆ.
130 ಅಡಿ ಎತ್ತರದ ವಿವಿ ಸಾಗರ ಜಲಾಶಯದಲ್ಲಿ ೩೦ ಟಿಎಂಸಿ ಅಡಿ ನೀರು ಸಂಗ್ರಹಿಸಬಹುದು.
ಇದನ್ನೂ ಓದಿ: ವಾಣಿ ವಿಲಾಸ ಸಾಗರಕ್ಕೆ ಭದ್ರಾ ನೀರು | ಶುರುವಾಯ್ತು ಕೌಂಟ್‌ಡೌನ್
ಶನಿವಾರ 808 ಕ್ಯೂಸೆಕ್ ಒಳಹರಿವು ಬಂದಿದ್ದು, ಜಲಾಶಯದಲ್ಲಿ 18.64 ಟಿಎಂಸಿ ನೀರು ಸೇರಿದ್ದು, ಒಟ್ಟು 114.60 ಅಡಿವರೆಗೆ ನೀರು ಬಂದಿದೆ.
Continue Reading
Related Topics:Bhadra Reservoir, Chikkamagaluru, Chitradurga Updates, Hiriyur, Kannada News, Karnataka Latest News, Vedavati River, VV Sagar, ಕನ್ನಡ ಸುದ್ದಿ, ಕರ್ನಾಟಕ ಲೇಟೆಸ್ಟ್ ನ್ಯೂಸ್, ಚಿಕ್ಕಮಗಳೂರು, ಚಿತ್ರದುರ್ಗ ಅಪ್ಡೇಟ್ಸ್, ಭದ್ರಾ ಜಲಾಶಯ, ವಿವಿ ಸಾಗರ, ವೇದಾವತಿ ನದಿ, ಹಿರಿಯೂರು

Click to comment