Connect with us

    Murugha math; ಭೌತಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ದೊಡ್ಡದು |ವಿರಕ್ತಮಠದ ಬಸವಪ್ರಭು ಸ್ವಾಮೀಜಿ 

    ಭೌತಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ದೊಡ್ಡದು |ವಿರಕ್ತಮಠದ ಬಸವಪ್ರಭು ಸ್ವಾಮೀಜಿ 

    ಮುಖ್ಯ ಸುದ್ದಿ

    Murugha math; ಭೌತಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ದೊಡ್ಡದು |ವಿರಕ್ತಮಠದ ಬಸವಪ್ರಭು ಸ್ವಾಮೀಜಿ 

    CHITRADURGA NEWS | 07 OCTOBER 2024

    ಚಿತ್ರದುರ್ಗ: ಭೌತಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ದೊಡ್ಡದು ಎಂದು ದಾವಣಗೆರೆಯ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.

    ಕ್ಲಿಕ್ ಮಾಡಿ ಓದಿ: Lidkar; ಚರ್ಮ ಕುಶಲಕರ್ಮಿಗಳಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

    ನಗರದ ಮುರುಘಾ ಮಠ(Murugha math)ದಲ್ಲಿ ಶರಣ ಸಂಸ್ಕೃತಿ ಉತ್ಸವದ ನಿಮಿತ್ಯ ಯೋಗಗುರು ವೈದ್ಯಶ್ರೀ ಚನ್ನಬಸವಣ್ಣನವರ ಮಾರ್ಗದರ್ಶನದಲ್ಲಿ ಯೋಗ ಅರೋಗ್ಯ ಅಧ್ಯಾತ್ಮ ಶಿಬಿರದಲ್ಲಿ ಸಹ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ಮಾತನಾಡುತ್ತಾ,

    ಮಾನವ ಜೀವನದಲ್ಲಿ ಮೂರು ರೀತಿಯ ಜನರಿದ್ದಾರೆ. ಅದರಲ್ಲಿ ಮೊದಲನೆಯವರು ಅತೃಪ್ತರು, ಎಷ್ಟು ಗಳಿಸಿದರು ಅವರಿಗೆ ತೃಪ್ತಿ ಎಂಬುದು ಇರುವುದಿಲ್ಲ. ಇವರಿಗೆ ಇನ್ನೂ ಬೇಕೇ ಬೇಕು ಎನ್ನುವ ಭಾವನೆ ಸದಾ ಇರುತ್ತದೆ.

    ಎರಡನೇಯವರು ಅಲ್ಪ ತೃಪ್ತರು, ಇರುವುದರಲ್ಲಿ ಜೀವನ ಮಾಡುವವರು ಇವರು. ಯಾವುದಕ್ಕು ಅತಿ ಆಸೆ ಪಡದೇ ಇದ್ದುದ್ದರಲ್ಲಿ ಬದುಕುವವರು. ಮೂರನೆಯವರು ಸಂತೃಪ್ತರು. ನಿತ್ಯ ತೃಪ್ತರು. ಹಾಗಾದರೇ ಯಾರು ಸಂತೃಪ್ತರು?

    ಕ್ಲಿಕ್ ಮಾಡಿ ಓದಿ: Murugha shree Release: ಮುರುಘೇಶನ ಆಶೀರ್ವಾದದಿಂದ ಬಿಡುಗಡೆ | ಮುರುಘಾ ಶರಣರು

    12 ನೇಯ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವವನ್ನು ನೋಡಿ ಇಡೀ ಭಾರತದಾದ್ಯಂತ ಇರುವ ಶರಣ-ಶರಣೆಯರು ಅನುಭವ ಮಂಟಪ ನೀಡಿದರು.  ಇದರಿಂದ ಬಸವಣ್ಣನವರ ವ್ಯಕ್ತಿತ್ವ ಎಷ್ಟು ದೊಡ್ಡದಿರಬಹುದು ಎಂದು ಅರ್ಥವಾಗುತ್ತದೆ.

    ಜೀವನದಲ್ಲಿ ಅತೃಪ್ತಿಗಿಂತ, ಅಲ್ಪ ತೃಪ್ತಿಗಿಂತ ಸಂತೃಪ್ತಿಯನ್ನು ಗಳಿಸಬೇಕು. ಬಸವಣ್ಣನವರು ನೀಡಿರುವ ಇಷ್ಟಲಿಂಗದ ಮುಖಾಂತರ ಇಲ್ಲ ಶರಣ-ಶರಣೆಯರು ಸಂತೃಪ್ತಿಯನ್ನು ಗಳಿಸಿದರು.

    12ನೇಯ ಶತಮಾನದಲ್ಲಿ ಶರಣರು ಕಲ್ಯಾಣದಲ್ಲಿರುವ ಸಣ್ಣ ಸಣ್ಣ ಗವಿಗಳಲ್ಲಿಯೇ ಜೀವನ ಮಾಡುತ್ತಿದ್ದರು. ದೊಡ್ಡ ದೊಡ್ಡ ಬಂಗಲೆಯಲ್ಲಿ ವಾಸ ಮಾಡುವ ನಮಗೆ ಸಂತೃಪ್ತಿಯಿಲ್ಲ. ಆದರೆ ಶರಣರು ಸಂತೃಪ್ತಿಯ ಬದುಕನ್ನು ನಡೆಸಿದರು. ಅವರ ಪಾಲಿನ ಕಾಯಕ ಮಾಡಿ ದಾಸೋಹ ಮಾಡುತ್ತಿದ್ದರು. ಹೆಚ್ಚಿನ ಸಮಯವನ್ನು ಅನುಭವ ಮಂಟಪದಲ್ಲಿ ಚರ್ಚಾ ಗೋಷ್ಟಿಯಲ್ಲಿ ಕಳೆಯುತ್ತಿದ್ದರು.

    ಇಷ್ಟಲಿಂಗ ಪೂಜೆ, ಧ್ಯಾನ, ಶಿವಯೋಗ ಮಾಡಿ ಸಂತೃಪ್ತಿ ಪಡೆಯುತ್ತಿದ್ದರು. ಯಾರು ಶಿವಯೋಗವನ್ನು ಮಾಡುತ್ತಾರೋ ಅವರು ಆಸೆಯನ್ನು ಗೆಲ್ಲುತ್ತಾರೆ, ಆಸೆಯನ್ನು ಗೆದ್ದವರೇ ಮಹಾತ್ಮರಾಗುತ್ತಾರೆ, ಶರಣರಾಗುತ್ತಾರೆ.

    ಕ್ಲಿಕ್ ಮಾಡಿ ಓದಿ: APMC; ಚಿತ್ರದುರ್ಗ ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ಧಾರಣೆ ಎಷ್ಟಿದೆ?

    ಯಾರು ಶಿವಯೋಗ ಮಾಡುತ್ತಾರೋ ಅವರ ಜೀವನದಲ್ಲಿ ಸದಾ ನೆಮ್ಮದಿ, ಸಂತೃಪ್ತಿ ನೆಲೆಸಿರುತ್ತದೆ. ಬೇಕೆ ಬೇಕು ಎನ್ನುವ ದುರಾಸೆ ಗೆಲ್ಲಲು ಶಿವಯೋಗ ತುಂಬಾ ಅಗತ್ಯ. ನಾವು ಜೀವನದಲ್ಲಿ ಆಶಾವಾದಿಗಳಾಗಬೇಕು, ಆದರೆ ದುರಾಸೆ ಬೇಡ. ಅದು ಅತೃಪ್ತರನ್ನಾಗಿಸಿ ದುಖಿಃತರನ್ನಾಗಿಸುವುದು. ಎಲ್ಲರೂ ಪ್ರತಿದಿನ ಮನೆಯಲ್ಲಿ 15 ನಿಮಿಷವಾದರೂ ಶಿವಯೋಗ ಮಾಡಬೇಕು. ಶಿವಯೋಗ ನಮ್ಮ ಮನಸ್ಸುಗಳನ್ನು ಅರಳಿಸುತ್ತದೆ, ಬದುಕಿನ ಕಷ್ಟಗಳು ನಿವಾರಣೆಯಾಗುತ್ತವೆ. ಅಂತಹ ಶಕ್ತಿ ಇಷ್ಟಲಿಂಗದಲ್ಲಿದೆ. ಸಂಪತ್ತಿಗಿಂತ ಸಂತೃಪ್ತಿ ದೊಡ್ಡದು ಎಂದು ನುಡಿದರು.

    ಕಾರ್ಯಕ್ರಮದಲ್ಲಿ ಶಿಗ್ಗಾಂವಿ ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮಿಗಳು, ಉಪ್ಪುಣಸೆ ಶ್ರೀಮುರುಘಾಮಠದ ಶ್ರೀ ಜಯಬಸವೇಶ್ವರ ಸ್ವಾಮಿಗಳು, ಶಿರಸಂಗಿ ಖಾಸಾಮಠದ ಶ್ರೀ ಬಸವ ಮಹಾಂತ ಸ್ವಾಮಿಗಳು, ರಾಣೆಬೆನ್ನೂರು ವಿರಕ್ತಮಠದ ಶ್ರೀ ಗುರುಬಸವ ಸ್ವಾಮಿಗಳು ಹಾಗೂ ತಿಳುವಳ್ಳಿ ಕಲ್ಮಠ(ಮುರುಘಾಮಠ)ದ ಶ್ರೀ ಬಸವ ನಿರಂಜನ ಸ್ವಾಮಿಗಳು, ಶ್ರೀ. ಬಸವಭೂಷಣ ಸ್ವಾಮಿಗಳು, ಶ್ರೀ. ಶಾಂತವೀರ ಮಹಾಸ್ವಾಮಿಗಳು ಸಾನಿದ್ಯ ವಹಿಸಿದ್ದರು.

    ಕ್ಲಿಕ್ ಮಾಡಿ ಓದಿ: VV Sagara: ವಿವಿ ಸಾಗರಕ್ಕೆ 2426 ಕ್ಯೂಸೆಕ್ ಒಳಹರಿವು | ಜಿಲ್ಲೆಯ ರೈತರಿಗೆ ಸಂತಸ

    ಹೊಸಕೋಟೆ ಲಿಂಗಾಯತ-ವೀರಶೈವ ಮಹಾಸಭಾದ ಶ್ರೀ ಗುರುಬಸಪ್ಪ, ನರಗುಂದ ಬಸವಕೇಂದ್ರದ ಶ್ರೀ ಸಿ.ಹೆಚ್.ಕೋರಿ, ಹುಬ್ಬಳ್ಳಿ ಬಸವಕೇಂದ್ರದ ಶ್ರೀ ಕುಮಾರಣ್ಣ ಹುಗ್ಗಿಶೆಟ್ಟರ್, ಹಾವೇರಿ ಬಸವಕೇಂದ್ರದ ಶ್ರೀ ಮುರಿಗೆಪ್ಪಕಡೇಕೊಪ್ಪ, ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಕೆಂಚಪ್ಪ ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಡಾ.ಬಸವಕುಮಾರ ಸ್ವಾಮೀಜಿ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top