ಮುಖ್ಯ ಸುದ್ದಿ
ತಿಂಗಳ ಅಂತ್ಯಕ್ಕೆ ದುರ್ಗಕ್ಕೆ ಕಾದಿದೆ ನೀರಿನ ಗಂಡಾಂತರ | ಕುಸಿಯುತ್ತಿದೆ ಸೂಳೆಕೆರೆ ನೀರಿನ ಮಟ್ಟ
ಚಿತ್ರದುರ್ಗನ್ಯೂಸ್.ಕಾಂ
ಮಳೆ ಕೊರತೆ ಕಾರಣಕ್ಕೆ ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ಚಿತ್ರದುರ್ಗದ ಜನರಿಗೆ ಜಲಮೂಲದ ಆಸರೆಯಾಗಿರುವ ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಎಂದೇ ಖ್ಯಾತಿ ಪಡೆದಿರುವ ಚನ್ನಗಿರಿ ತಾಲೂಕಿನ ಶಾಂತಿಸಾಗರ (ಸೂಳೆಕೆರೆ)ದಲ್ಲಿ ನೀರಿ ಮಟ್ಟ ಸಂಪೂರ್ಣ ಕುಸಿದಿರುವುದು ಆತಂಕ ಸೃಷ್ಟಿಸಿದೆ.
ಸದ್ಯದ ನೀರಿನ ಮಟ್ಟದ ಆಧಾರದಲ್ಲಿ ಜನವರಿ ಅಂತ್ಯದವರೆಗೆ ಮಾತ್ರ ನೀರು ಲಭ್ಯವಾಗಲಿದೆ. 2022 ರಲ್ಲಿ ಉತ್ತಮ ಮಳೆಯಾದ ಕಾರಣ ಶಾಂತಿಸಾಗರ ಭರ್ತಿಯಾಗಿತ್ತು. ಆದರೆ 2023 ರ ಪ್ರಾರಂಭ ಹೊರತುಪಡಿಸಿದರೆ ಬಳಿಕ ಸರಿಯಾದ ಸಮಯಕ್ಕೆ ಮಳೆಯ ಆಗಮನ ಆಗದೆ ಇರುವುದರಿಂದ ದಿನೇ ದಿನೆ ಕೆರೆಯಲ್ಲಿ ನೀರು ಖಾಲಿಯಾಗುತ್ತಿದೆ. ಜತೆಗೆ ಮುಂಗಾರಿನಲ್ಲಿ ಕೆರೆಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಯದಿರುವುದು ಸಮಸ್ಯೆಗೆ ಮುಖ್ಯ ಕಾರಣವಾಗಿದೆ.
ಇದನ್ನೂ ಓದಿ: ವೇದಗಳಷ್ಟೇ ಪ್ರಾಮುಖ್ಯತೆ ಶ್ರೀರಾಮಾಯಣಕ್ಕಿದೆ | ಬೆಲಗೂರು ಮಾರುತಿ ವಿಜಯ ಶರ್ಮಾ ಸ್ವಾಮೀಜಿ
ಬೇಸಿಗೆಯಲ್ಲಿ ನೀರು ಪೂರೈಸಲು ಕನಿಷ್ಠ 1.5 ಟಿಎಂಸಿ ಅಡಿ ನೀರಿನ ಸಂಗ್ರಹ ಇರಬೇಕು. ಸದ್ಯ ನೀರಿನ ಸಂಗ್ರಹ ಕಡಿಮೆ ಇದೆ. ಭದ್ರಾ ನಾಲೆಯಿಂದ ನೀರು ಹರಿಸಿದರೆ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಲು ಸಾಧ್ಯ. ಇಲ್ಲವಾದರೆ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಲಿದೆ ಎನ್ನುತ್ತಾರೆ ದಾವಣಗೆರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್‌ಗಳು.