Connect with us

    Rank winners; ವಚನ ಕಮ್ಮಟ ಪರೀಕ್ಷೆ | ರ‍್ಯಾಂಕ್ ವಿಜೇತರರಿಗೆ ಬಹುಮಾನ ವಿತರಣೆ

    ವಚನ ಕಮ್ಮಟ ಪರೀಕ್ಷೆ | ರ‍್ಯಾಂಕ್ ವಿಜೇತರರಿಗೆ ಬಹುಮಾನ ವಿತರಣೆ

    ಮುಖ್ಯ ಸುದ್ದಿ

    Rank winners; ವಚನ ಕಮ್ಮಟ ಪರೀಕ್ಷೆ | ರ‍್ಯಾಂಕ್ ವಿಜೇತರರಿಗೆ ಬಹುಮಾನ ವಿತರಣೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 06 OCTOBER 2024

    ಚಿತ್ರದುರ್ಗ: ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150 ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ-2024 ರ ಕಾರ್ಯಕ್ರಮದಲ್ಲಿ ವಚನ ಕಮ್ಮಟ ಪರೀಕ್ಷೆಯ ರ‍್ಯಾಂಕ್ ವಿಜೇತರ(Rank winners)ರಿಗೆ ಶನಿವಾರ ಮುರುಘಾ ಮಠದ ಅನುಭವ ಮಂಟಪದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

    ಕ್ಲಿಕ್ ಮಾಡಿ ಓದಿ: Adike: ಅಡಿಕೆ ಧಾರಣೆ | ವಾರಾಂತ್ಯದ ವಹಿವಾಟಿನಲ್ಲಿ ಅಡಿಕೆ ರೇಟ್

    ಹೆಗ್ಗುಂದದ ಶ್ರೀ ವನಕಲ್ ಮಲ್ಲೇಶ್ವರ ಮಠದ ಡಾ.ಬಸವರಮಾನಂದ ಸ್ವಾಮಿಗಳು ಮಾತನಾಡಿ, 1998 ರಿಂದ 26 ವರ್ಷಗಳ ಕಾಲ ನಿರಂತರವಾಗಿ ನಡೆದುಕೊಂಡು ಬಂದಿರುವಂತಹದ್ದು ಈ ವಚನ ಕಮ್ಮಟ ಪರೀಕ್ಷೆ. ಶ್ರೀ ಮಠದ ಎರಡು ಕಣ್ಣುಗಳು ಬಸವತತ್ವ ಮಹಾವಿದ್ಯಾಲಯ ಹಾಗೂ ವಚನ ಕಮ್ಮಟ ಪರೀಕ್ಷೆ. ವಚನ ಸಾಹಿತ್ಯ ಈ ನಾಡಿನ ಕಾವ್ಯಾತ್ಮಕವಾಗಿರುವಂತಹ ಸಂವಿಧಾನ ಎಂದು ಎಸ್. ನಿಜಲಿಂಗಪ್ಪನವರು ಡಾ.ಬಿ.ಆರ್. ಅಂಬೇಡ್ಕರ್ ರವರಿಗೆ ತಿಳಿಸಿದ್ದರು ಎಂದು ನುಡಿದರು.

    ಹಿರೇಮಾಗಡಿಯ ಶ್ರೀ ವಿರಕ್ತ ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಈ ದಿನ ಮಕ್ಕಳಿಗೆ ತ್ರಿಕರಣ ಶುದ್ದಿಯ ಶಿಕ್ಷಣವನ್ನು ನೀಡಬೇಕಾಗಿದೆ. ಹೊಟ್ಟೆಯನ್ನು ತುಂಬಿಸುವಂತಹ ಮತ್ತು ಮೆದುಳನ್ನು ತುಂಬಿಸುವ ಸಂಸ್ಕಾರಯುತ ಶಿಕ್ಷಣವನ್ನು ನೀಡಬೇಕೆಂದು ತಿಳಿಸಿದರು.

    ಖಜೂರಿಯ ಶ್ರೀ ಮುರುಘರಾಜೇಂದ್ರ ವಿರಕ್ತಮಠದ ಶ್ರೀ ಮುರುಘೇಂದ್ರ ಕೋರುಣ್ಯೇಶ್ವರ ಸ್ವಾಮಿಗಳು ಮಾತನಾಡಿ, ವಚನ ಎಂದರೆ ಮಾತು, ನುಡಿದಂತೆ ನಡೆ, ವಚನವನ್ನು ಪಚನ ಮಾಡಿಕೊಂಡರೆ, ಬದುಕಿನಲ್ಲಿ ಅನುಷ್ಟಾನಕ್ಕೆ ತಂದುಕೊಂಡರೆ ಪೋಲೀಸ್ ಠಾಣೆಗಳೇ ಬೇಕಿಲ್ಲ ಎಂದು ತಿಳಿಸಿದರು.

    ಕ್ಲಿಕ್ ಮಾಡಿ ಓದಿ: Shri Jayadeva swamiji; ಜಯದೇವ ಶ್ರೀಗಳ ಬೆಳ್ಳಿ ವಿಗ್ರಹದ ಪಲ್ಲಕ್ಕಿ ಉತ್ಸವಕ್ಕೆ ಸಂಸದ ಗೋವಿಂದ ಕಾರಜೋಳ ಚಾಲನೆ 

    ವಚನ ಕಮ್ಮಟ ಪರೀಕ್ಷೆಯ ನಿವೃತ್ತ ನಿರ್ದೇಶಕರಾದ ಪ್ರೊ. ಚಂದ್ರಪ್ಪ ಇವರನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಯವರು ಉಪಸ್ಥಿತರಿದ್ದರು.

    2023-24ನೇ ಸಾಲಿನ ರಾಜ್ಯ ಮಟ್ಟದ ರ‍್ಯಾಂಕ್ ವಿಜೇತರ ಪಟ್ಟಿ:

    5ನೇ ತರಗತಿ- ಪ್ರಥಮ ಭಗತ್ ಸಿಂಗ್ ಶ್ರೀ ಕಾಡಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಶಿರೋಳ, ದ್ವಿತೀಯ- ಹೇಮಲತ, ಭಾರತಮಾತ ಆಂಗ್ಲ ಮಾಧ್ಯಮ ಶಾಲೆ, ತುಮಕೂರು, ತೃತೀಯ- ತಮನ್ವಿ, ಎಸ್.ಜೆ.ಎಂ ಹಿರಿಯ ಪ್ರಾಥಮಿಕ ಶಾಲೆ, ಮಂಡಿಮಠ, ಚಳ್ಳಕೆರೆ.

    ಕ್ಲಿಕ್ ಮಾಡಿ ಓದಿ: Application; ಗಂಭೀರ ಕಾಯಿಲೆ ಆರೈಕೆ ಮಾಡುವವರಿಂದ ಪ್ರೊತ್ಸಾಹ ಧನಕ್ಕೆ ಅರ್ಜಿ ಆಹ್ವಾನ

    6ನೇ ತರಗತಿ- ಪ್ರಥಮ ಸ್ನೇಹ.ವಿ. ಎಸ್.ಜೆ.ಎಂ ಹಿರಿಯ ಪ್ರಾಥಮಿಕ ಶಾಲೆ, ಭರಮಸಾಗರ, ದ್ವಿತೀಯ ಸ್ತುತಿ.ಎಸ್., ವಿದ್ಯಾರಣ್ಯ ಹಿರಿಯ ಪ್ರಾಥಮಿಕ ಶಾಲೆ, ಕೆಳದಿ ರಸ್ತೆ, ಸಾಗರ, ತೃತೀಯ ಕುಸುಮ.ಸಿ. ಎಸ್.ಜೆ.ಎಂ ರೆಸಿಡೆನ್ಸಿಯಲ್ ಶಾಲೆ, ಎಂ.ಕೆ.ಹಟ್ಟಿ,

    7ನೇ ತರಗತಿ- ಪ್ರಥಮ ಇಂಚರಾ.ವಿ.ವಿಜಯಭಾರತಿ ವಿದ್ಯಾಲಯ, ಗಿರಿನಗರ, ಬೆಂಗಳೂರು, ದ್ವಿತೀಯ ಸೌಮ್ಯ.ಪಿ. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಬನ್ನಿಗೋಳ, ತೃತೀಯ-ನಿಷ್ಮಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿರಿಯಾರ, ಉಡುಪಿ

    8ನೇ ತರಗತಿ- ಕೀರ್ತಿ.ಯಲ್ಲಪ್ಪ.ಹಡಪದ, ಶ್ರೀ ಜಗದ್ಗುರು ಅನ್ನದಾನೇಶ್ವರ ವಿದ್ಯಾಲಯ ಸಮಿತಿ ಪ್ರೌಢಶಾಲೆ,

    ನರಸಾಪುರ, ಗದಗ, ದ್ವಿತೀಯ- ಶಿವಲೀಲಾ.ಎಸ್.ಎಂ., ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಬನ್ನಿಗೋಳ, ತೃತೀಯ- ಅಮೀನಾ.ಜೆ. ಶ್ರೀ ಬಕ್ಕೇಶ್ವರ ಪ್ರೌಢಶಾಲೆ, ದಾವಣಗೆರೆ.

    9ನೇ ತರಗತಿ- ಪ್ರಥಮ-ಅಕ್ಷತಾ.ಆರ್.ಎಸ್.ಜೆ.ಎಂ. ಪ್ರೌಢಶಾಲೆ, ತ್ಯಾವಣಗೆ, ದಾವಣಗೆರೆ, ದ್ವಿತೀಯ- ಸಿತಾರಾ.ಎಸ್.ಡಿ. ಎಸ್.ಜೆ.ಎಂ. ಆಂಗ್ಲ ಮಾಧ್ಯಮ ಶಾಲೆ, ಎಂ.ಸಿ.ಸಿ.ಎ ಬ್ಲಾಕ್, ದಾವಣಗೆರೆ, ತೃತೀಯ ರಾಶಿ.ಎಂ.ಸಿ., ಎಸ್.ಜೆ.ಎಂ ಪ್ರೌಢಶಾಲೆ, ಸೋಮವಾರ ಪೇಟೆ.

    10ನೇ ತರಗತಿ- ರಕ್ಷಿತಾ.ಹೆಚ್.ಕೆ., ರುದ್ರೇಶ್ ಪ್ರೌಢಶಾಲೆ, ಹೆಬ್ಬಾಳು, ದ್ವಿತೀಯ- ಅನುಶ್ರೀ.ಕೆ.ಎಸ್., ಎಸ್.ಜೆ.ಎಂ ರೆಸಿಡೆನ್ಸಿಯಲ್ ಶಾಲೆ, ಎಂ.ಕೆ.ಹಟ್ಟಿ, ತೃತೀಯ ಲಕ್ಷ್ಮಿ ಚಳ್ಳಣ್ಣವ, ಎಸ್.ಜೆ.ಜೆ.ಎಂ ಸಂಯುಕ್ತ ಪದವಿ ಪೂರ್ವ ಕಾಲೇಜು, ಮುಳುಗುಂದ.

    ಪ್ರಥಮ ಪಿ.ಯು.ಸಿ(ಅರಿವು) ಪ್ರಥಮ- ವೈಷ್ಣವಿ ಎಸ್ ಬಿರಾದಾರ, ಕೆ.ಎಲ್.ಇ.ಮಂಗರೂಳೆ ಜೂನಿಯರ್ ಕಾಲೇಜು, ಅಕ್ಕಲಕೋಟೆ, ದ್ವಿತೀಯ- ಜ್ಯೋತಿ ಶ್ರೀ ಕಂಬಾರ, ವಿಜಯ ಪದವಿ ಪೂರ್ವ ಕಾಲೇಜು, ಮುಲ್ಕಿ, ತೃತೀಯ- ಇಶರತ್ ಭಾನು ದಲ್ಯಾತ್, ಎಫ್.ಎಂ.ದಬಾಲಿ ಪದವಿ ಪೂರ್ವ ಕಾಲೇಜು, ಶಿರಹಟ್ಟಿ.

    ಕ್ಲಿಕ್ ಮಾಡಿ ಓದಿ: DCC ಬ್ಯಾಂಕಿನಿಂದ 17.75 ಲಕ್ಷ ಶಿಕ್ಷಣ ನಿಧಿ ವಿತರಣೆ

    ದ್ವಿತೀಯ ಪಿ.ಯು.ಸಿ (ಆಚಾರ) ಪ್ರಥಮ- ಈರಯ್ಯಾಬ ನಿಂಗೊಳ್ಳಿ, ಬಸವೇಶ್ವರ ವಾಣಿಜ್ಯ ಕಾಲೇಜು, ಬಾಗಲಕೋಟೆ, ದ್ವಿತೀಯ-ಭವ್ಯ .ಹೆಚ್.ಆರ್., ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು, ತುರುವೇಕೆರೆ, ತೃತೀಯ-ಭಾಗ್ಯಲಕ್ಷ್ಮಿ ಗುಡ್ಡಪ್ಪ ನಾಯಕ, ಎಸ್.ಜೆ.ಎಂ ಮಹಿಳಾ ಪದವಿ ಪೂರ್ವ ಕಾಲೇಜು, ರಾಣೇಬೆನ್ನೂರು.

    ಪ್ರಥಮ ಪದವಿ: ಪ್ರಥಮ- ಸೃಷ್ಠಿ ಅಲೆಗಾವಿ, ಎಸ್.ಬಿ.ಕಲಾ & ಕೆ.ಸಿ.ಸಿ. ವಿಜ್ಞಾನ ಕಾಲೇಜು, ವಿಜಯಪುರ, ದ್ವಿತೀಯ- ಜಯಲಕ್ಷ್ಮೀ ಹೆಚ್.ವಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಣ ಗಲ್, ತೃತೀಯ-ಜ್ಯೋತಿ.ಪಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ದೊಡ್ಡಬಳ್ಳಾಪುರ.

    ದ್ವಿತೀಯ ಪದವಿ: ಪ್ರಥಮ- ತೇಜಸ್ವಿನಿ ಶ್ರೀ ಮೇಟಿ, ಬಿ.ವ್ಹಿ.ವ್ಹಿ. ಸಂಘದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ, ಬಾಗಲಕೋಟೆ, ದ್ವಿತೀಯ- ಕು. ಸಿಂಧೂ.ಎನ್.ಬಿ., ಡಿ.ವಿ.ಎಸ್. ಕಲಾ ಮತ್ತು ವಿಜ್ಞಾನ ಕಾಲೇಜು, ಬಸವೇಶ್ವರ ವೃತ್ತ, ಶಿವಮೊಗ್ಗ, ತೃತೀಯ- ಸ್ವಾತಿ.ಜಿ. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀ ವೀರೇಂದ್ರ ಪಾಟೀಲ್ ಪದವಿ ಮಹಾವಿದ್ಯಾಲಯ, ಸದಾಶಿವನಗರ, ಬೆಂಗಳೂರು.

    ಕ್ಲಿಕ್ ಮಾಡಿ ಓದಿ: Rain Report; ನಾಯಕನಹಟ್ಟಿಯಲ್ಲಿ 91.5 ಮಿ.ಮೀ ಮಳೆ | ತುಂಬಿ ಹರಿದ ಹಳ್ಳಗಳು 

    ತೃತೀಯ ಪದವಿ: ಪ್ರಥಮ- ಕು.ಲಕ್ಷೀ ರಾ ಬಿರಾದಾರ, ಜಿ.ಪಿ.ಪೋರವಾಲ ಕಲಾ, ವಾಣಿಜ್ಯ & ವ್ಹಿ.ವ್ಹಿ ಸಾಲಿಮಠ ವಿಜ್ಞಾನ ಕಾಲೇಜು, ಸಿಂಧಗಿ, ದ್ವಿತೀಯ- ನಿತ್ಯಶ್ರೀ.ಎನ್., ಕೆ.ಎಲ್.ಇ.ಸಂಸ್ಥೆಯ ಎಸ್.ನಿಜಲಿಂಗಪ್ಪ ಕಾಲೇಜು 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು, ತೃತೀಯ- ಚೇತನ.ಜೆ., ಎಸ್.ಜೆ.ಎಂ ಕಲಾ & ವಾಣಿಜ್ಯ ಕಾಲೇಜು ಡೆಂಟಲ್ ಕಾಲೇಜು ಆವರಣ, ಚಿತ್ರದುರ್ಗ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top