ಮುಖ್ಯ ಸುದ್ದಿ
Hospital; ಜಿಲ್ಲಾ ಆಸ್ಪತ್ರೆಗೆ ಸಂಸದ ಗೋವಿಂದ ಕಾರಜೋಳ ಭೇಟಿ | ವೈದ್ಯರ ಸಮಸ್ಯೆ ಆಲಿಸಿ ಸಲಹೆ
CHITRADURGA NEWS | 20 SEPTEMBER 2024
ಚಿತ್ರದುರ್ಗ: ಸಂಸದ ಗೋವಿಂದ ಕಾರಜೋಳ ಶುಕ್ರವಾರ ಮಧ್ಯಾಹ್ನ ಜಿಲ್ಲಾ ಆಸ್ಪತ್ರೆ(Hospital)ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕ್ಲಿಕ್ ಮಾಡಿ ಓದಿ: Adike: ಭೀಮಸಮುದ್ರದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಅಲ್ಪ ಏರಿಕೆ
ಈ ವೇಳೆ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡ ಸಂಸದರು, ಸ್ವಚ್ಛತೆ ಹಾಗೂ ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯಬೇಕು ಎಂದು ಸಿಬ್ಬಂದಿಗಳಿಗೆ ತಿಳಿಸಿದರು.
ಚಿತ್ರದುರ್ಗ ಹಿಂದುಳಿದ ಜಿಲ್ಲೆಯಾಗಿದ್ದು, ಜಿಲ್ಲಾ ಆಸ್ಪತ್ರೆಗೆ ಹೆಚ್ಚಾಗಿ ಬಡವರೇ ಬರುತ್ತಾರೆ. ಅವರಿಗೆ ಸೂಕ್ತ ಚಿಕಿತ್ಸೆ ದೊರೆಯಬೇಕು. ಸಾಧ್ಯವಾದಷ್ಟು ಎಲ್ಲ ಔಷಧಗಳನ್ನು ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಬೇಕು. ಸಿಗದಿದ್ದ ಔಷಧಿಗಳ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಿರಿ ನಾನು ಮಾತನಾಡುತ್ತೇನೆ ಎಂದು ಹೇಳಿದರು.
450 ಬೆಡ್ ಆಸ್ಪತ್ರೆ, ರೋಗಿಗಳ ಸಂಖ್ಯೆ ದುಪ್ಪಟ್ಟು:
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಕೇವಲ 450 ಬೆಡ್ ಆಸ್ಪತ್ರೆಯಾಗಿದ್ದು, ಇಲ್ಲಿಗೆ ಬರುವ ರೋಗಿಗಳ ಸಂಖ್ಯೆ ಮಾತ್ರ ದೊಡ್ಡದಾಗಿದೆ. ಇರುವ ಕಡಿಮೆ ಸಿಬ್ಬಂದಿಯೇ ಸಾಕಷ್ಟು ಪರಿಶ್ರಮದಿಂದ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರ ಸಂಖ್ಯೆ ಕಡಿಮೆ ಇದೆ. ಸಿಬ್ಬಂದಿಗಳ ಕೊರತೆ ಇದೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದರು.
ಕ್ಲಿಕ್ ಮಾಡಿ ಓದಿ: Notice; ಚಿತ್ರದುರ್ಗದಲ್ಲಿ ಖಾಲಿ ನಿವೇಶನ ಇರೋರಿಗೆ ಮಹತ್ವದ ಸೂಚನೆ | ಪೌರಾಯುಕ್ತೆ ರೇಣುಕಾ
ಆಸ್ಪತ್ರೆಯಲ್ಲಿ ಪಿಜಿ ಹಾಗೂ ವೈದ್ಯರ ನಡುವೆ ಅಸಮಧಾನ:
ಸಂಸದ ಗೋವಿಂದ ಕಾರಜೋಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಂಧರ್ಭದಲ್ಲಿ ಕೆಲ ವೈದ್ಯರು ಇಲ್ಲಿಗೆ ಬರುತ್ತಿರುವ ಪಿಜಿ ವೈದ್ಯರ ವರ್ತನೆಗಳ ಬಗ್ಗೆ ಗಮನ ಸೆಳೆದರು.
ಹೊಸದಾಗಿ ಬರುತ್ತಿರುವ ಪಿಜಿ ಹುಡುಗರು ಸರಿಯಾಗಿ ಸಹಕಾರ ನೀಡುತ್ತಿಲ್ಲ. ವೈದ್ಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ದೌರ್ಜನ್ಯ ನಡೆಸುವವರ ಬಗ್ಗೆ ಕ್ರಮ ತೆಗೆದುಕೊಳ್ಳಿ. ಒಂದಿಬ್ಬರಿಗೆ ನೋಟೀಸ್ ನೀಡಿ, ಬಗ್ಗದಿದ್ದರೆ ಪೊಲೀಸ್ ದೂರು ನೀಡಿ ಅವರಿಗೆ ವೈದ್ಯಕೀಯ ಪ್ರಮಾಣಪತ್ರ ಸಿಗದಂತೆ ಮಾಡಿ ಎಂದು ಸಲಹೆ ನೀಡಿದರು.
ಕ್ಲಿಕ್ ಮಾಡಿ ಓದಿ: Cotpa act: ನಿಯಮ ಉಲ್ಲಂಘಿಸುವ ಅಂಗಡಿಗಳ ಪರವಾನಿಗೆ ರದ್ದು ಮಾಡಿ | ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಖಜಾಂಚಿ ಮಾಧುರಿ ಗಿರೀಶ್, ವಕ್ತಾರ ನಾಗರಾಜ್ ಬೇದ್ರೆ, ಜಿಲ್ಲಾ ಆಸ್ಪತ್ರೆ ಆರ್‌ಎಂಓ ಡಾ.ಆನಂದಪ್ರಕಾಶ್ ಮತ್ತಿತರರಿದ್ದರು.