Connect with us

    ವಿಶ್ವಹಿಂದೂ ಪರಿಷತ್ ಷಷ್ಠಿಪೂರ್ತಿ ಸಂಭ್ರಮ | ಬಜರಂಗದಳ ಶೌರ್ಯ ಜಾಗರಣ ರಥಯಾತ್ರೆಗೆ ದುರ್ಗದಲ್ಲಿ ಚಾಲನೆ

    ಚಿತ್ರದುರ್ಗದಲ್ಲಿ ಶೌರ್ಯ ಜಾಗರಣಾ ರಥಯಾತ್ರೆಗೆ ಚಾಲನೆ

    ಮುಖ್ಯ ಸುದ್ದಿ

    ವಿಶ್ವಹಿಂದೂ ಪರಿಷತ್ ಷಷ್ಠಿಪೂರ್ತಿ ಸಂಭ್ರಮ | ಬಜರಂಗದಳ ಶೌರ್ಯ ಜಾಗರಣ ರಥಯಾತ್ರೆಗೆ ದುರ್ಗದಲ್ಲಿ ಚಾಲನೆ

    ಚಿತ್ರದುರ್ಗ ನ್ಯೂಸ್.ಕಾಂ: ಜಗತ್ತಿನ ಅತೀ ದೊಡ್ಡ ಹಿಂದೂ ಸಂಘಟನೆ ಎಂಬ ಹೆಗ್ಗೆಳಿಹೆ ಹೊಂದಿರುವ ವಿಶ್ವಹಿಂದೂ ಪರಿಷತ್ ಸ್ಥಾಪನೆಯಾಗಿ ಷಷ್ಠಿಪೂರ್ತಿ(60 ವರ್ಷ) ಸಂಭ್ರಮದ ಹಿನ್ನೆಲೆಯಲ್ಲಿ ವಿಎಚ್‍ಪಿಯ ತರುಣ ಸಂಘಟನೆ ಬಜರಂಗದಳದಿಂದ ದೇಶವ್ಯಾಪಿ ಶೌರ್ಯ ಜಾಗರಣಾ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.

    ಕರ್ನಾಟಕ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಸಂಚರಿಸುವ ರಥಯಾತ್ರೆಗೆ ಸೆ.25 ಸೋಮವಾರ ಚಿತ್ರದುರ್ಗದ ಹಿಂದೂ ಮಹಾಗಣಪತಿ ಪೆಂಡಾಲ್ ಬಳಿ ಚಾಲನೆ ನೀಡಲಾಯಿತು.

    ಇದನ್ನೂ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಮುಂಬೈ ಡಿಜೆ | ದಾವಣಗೆರೆಯಲ್ಲಿ ಡಿಜೆ ಸೀಕ್ರೇಟ್ ರಿವಿಲ್ ಮಾಡಿದ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ)

    ಶೌರ್ಯ ಜಾಗರಣಾ ಯಾತೆಗಾಗಿ ವಿಶೇಷವಾಗಿ ರಥವೊಂದನ್ನು ಸಿದ್ಧಪಡಿಸಲಾಗಿತ್ತು. ರಥದಲ್ಲಿ ಭಾರತ ಮಾತ್ರ ಪ್ರಮುಖ ಆಕರ್ಷಣೆಯಾಗಿ ಎರಡು ಬದಿಗಳಲ್ಲಿ ಘರ್ಜಿಸುವ ಸಿಂಹಗಳು, ರಥದ ಮೇಲೆ ಹನುಮಂತ, ಸುತ್ತಲೂ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಅನೇಕ ಮಹಾತ್ಮರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಬಂಗಾರ ವರ್ಣದಲ್ಲಿರುವ ರಥ ವಿಶೇಷ ಆಕರ್ಷಣೆಯಾಗತ್ತು.

    ಶೌರ್ಯ ಜಾಗರಣಾ ರಥಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು

    ಶೌರ್ಯ ಜಾಗರಣಾ ರಥಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು

    ರಥಯಾತ್ರೆಗೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಕೇಸರಿ ಧ್ವಜಗಳಿಂದ ಬಿ.ಡಿ.ರಸ್ತೆ ಅಲಂಕರಿಸಲಾಗಿತ್ತು. ಕಂಸಾಳೆ, ಚಂಡೆ, ವೀರಾಗಸೆ, ಡೊಳ್ಳು ವಾದ್ಯಗಳು ಇಡೀ ಯಾತ್ರೆಗೆ ಮೆರುಗು ನೀಡಿದ್ದವು. ಸಾವಿರಾರು ಜನ ರಸ್ತೆಯುದ್ದಕ್ಕೂ ರಥಯಾತ್ರೆಯನ್ನು ಕಣ್ತುಂಬಿಕೊಂಡರು.

    ಈ ಕಾರ್ಯಕ್ರಮದಲ್ಲಿ ಬಸವಮೂರ್ತಿ ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ, ಶ್ರೀ ಸೇವಾಲಾಲ್ ಸ್ವಾಮೀಜಿ, ಬಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ, ವಿಎಚ್‍ಪಿ ಕೇಂದ್ರೀಯ ಜಂಟಿ ಕಾರ್ಯದರ್ಶಿ ಸ್ಥಾಣುಮಾಲಯನ್, ಆರೆಸ್ಸೆಸ್ಸ್ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್, ವಿಎಚ್‍ಪಿ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರೀ, ಬಜರಂಗದಳ ಪ್ರಾಂತ ಸಂಯೋಜಕ ಕೆ.ಆರ್.ಸುನೀಲ್, ಸಹ ಸಂಯೋಜಕ ಎಸ್.ಆರ್.ಪ್ರಭಂಜನ್, ಮುರುಳಿಕೃಷ್ಣ ಹಂಸತ್ತಡ್ಕ, ಶೌರ್ಯ ಜಾಗರಣ ರಥಯಾತ್ರೆ ಪ್ರಾಂತ ಸಮಿತಿ ಸದಸ್ಯ ಟಿ.ಬದರೀನಾಥ್, ಜಿಲ್ಲಾ ಅಧ್ಯಕ್ಷ ಜಿ.ಎಂ.ಸುರೇಶ್ ಸೇರಿದಂತೆ ಹಲವು ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.

    ಶೌರ್ಯ ಜಾಗರಣಾ ರಥಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು

    ಚಿತ್ರದುರ್ಗದಲ್ಲಿ ಶೌರ್ಯ ಜಾಗರಣಾ ರಥಯಾತ್ರೆಗೆ ಚಾಲನೆ

    ಶೌರ್ಯ ಜಾಗರಣ ರಥಯಾತ್ರೆಯ ಮಾರ್ಗಸೂಚಿ:

    ಸೆ.25 ರಂದು ಚಿತ್ರದುರ್ಗದಿಂದ ಆರಂಭವಾಗಿರುವ ಶೌರ್ಯ ಜಾಗರಣಾ ರಥಯಾತ್ರೆ ಕರ್ನಾಟಕ ದಕ್ಷಿಣ ಭಾಗದ 16 ಜಿಲ್ಲೆಗಳ ಮೂಲಕ ಸಂಚರಿಸಿ ಅಕ್ಟೋಬರ್ 10 ರಂದು ಉಡುಪಿಯಲ್ಲಿ ಮುಕ್ತಾಯವಾಗಲಿದೆ.

    ಚಿತ್ರದುರ್ಗದಿಂದ ಹೊರಟಿರುವ ರಥಯಾತ್ರೆ ಚನ್ನಗಿರಿ ಮೂಲಕ ಇಂದು ದಾವಣಗೆರೆ ತಲುಪಲಿದೆ.

    ಸೆ.26 ದಾವಣಗೆರೆ, ಹೊನ್ನಾಳಿ, ಶಿಖಾರಿಪುರ, ಸೊರಬ ಹಾಗೂ ಸಾಗರ.

    ಸೆ.27 ಸಾಗರ, ಆನಂದಪುರ, ತೀರ್ಥಹಳ್ಳಿ, ಶಿವಮೊಗ್ಗ.

    ಸೆ.28 ಶಿವಮೊಗ್ಗ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು.

    ಸೆ.29 ಬಾಳೆಹೊನ್ನೂರು, ಆಲ್ದೂರು, ಚಿಕ್ಕಮಗಳೂರು, ಬೇಲೂರು, ಹಾಸನ.

    ಸೆ.30 ಹಾಸನ, ಅರಸಿಕೆರೆ, ತಿಪಟೂರು, ತುಮಕೂರು.

    ಅ.1 ತುಮಕೂರು, ದಾಬಸ್‍ಪೇಟೆ, ದೊಡ್ಡಬಳ್ಳಾಪುರ.

    ಅ.2 ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ಯಲಹಂಕ.

    ಅ.3 ಯಲಹಮಕ, ಹೆಬ್ಬಾಳ, ವಿಜಯನಗರ.

    ಅ.4 ವಿಜಯನಗರ, ರಾಮನಗರ, ಮದ್ದೂರು, ಮಂಡ್ಯ, ಚಾಮರಾಜನಗರ.

    ಅ.5 ಚಾಮರಾಜನಗರ, ನಂಜನಗೂಡು, ಮೈಸೂರು, ಕುಶಾಲನಗರ.

    ಅ.6 ಕುಶಾಲನಗರ, ಮಡಿಕೇರಿ, ಸುಳ್ಯ.

    ಅ.7 ಸುಳ್ಯ, ಸುಬ್ರಹ್ಮಣ್ಯ, ಕಡಬ, ಉಪ್ಪಿನಂಗಡಿ, ಪುತ್ತೂರು.

    ಅ.8 ಪುತ್ತೂರು, ಕಲ್ಲಡ್ಕ, ಬಿ.ಸಿ.ರೋಡ್, ಬಂಟ್ವಾಳ.

    ಅ.9 ಬಂಟ್ವಾಳ, ಅರ್ಕುಳ, ಪಂಪ್‍ವೆಲ್, ಕದ್ರಿ,

    ಅ.10 ಕದ್ರಿ, ಸುರತ್ಕಲ್, ಪಡುಬಿದ್ರೆ ಹಾಗೂ ಉಡುಪಿಯಲ್ಲಿ ಸಮಾರೋಪವಾಗಲಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top