Connect with us

    ಮತಗಟ್ಟೆ ಸಿಬ್ಬಂದಿಗೆ ವಾಹನ | ಮಿಸ್‌ ಆದ್ರೆ ಕಾಲ್‌ ಮಾಡಿ

    ಲೋಕಸಮರ 2024

    ಮತಗಟ್ಟೆ ಸಿಬ್ಬಂದಿಗೆ ವಾಹನ | ಮಿಸ್‌ ಆದ್ರೆ ಕಾಲ್‌ ಮಾಡಿ

    CHITRADURGA NEWS | 24 APRIL 2024
    ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಏ.26ರಂದು ಮತದಾನ ನಡೆಯಲಿದೆ. ಮತಗಟ್ಟೆ ಸಿಬ್ಬಂದಿಗೆ ಜಿಲ್ಲಾಡಳಿತ ವಾಹನ ವ್ಯವಸ್ಥೆ ಮಾಡಿದೆ. ಜತೆಗೆ ಪ್ರತಿ ತಾಲ್ಲೂಕಿಗೂ ಸಿಬ್ಬಂದಿ ನೇಮಕ ಮಾಡಿದೆ. ನೀವು ತೆರಳುವ ಮಾರ್ಗದ ಬಸ್‌ ಮಿಸ್‌ ಆದರೆ ಕೂಡಲೇ ಕರೆ ಮಾಡಿ ವಿಚಾರಿಸುವ ವ್ಯವಸ್ಥೆ ಮಾಡಿದೆ.

    ಏ.25ರಂದು ಮಸ್ಟರಿಂಗ್‌ ಕಾರ್ಯವಿರುವುದರಿಂದ ವಿವಿಧ ತಾಲ್ಲೂಕುಗಳಿಗೆ ಮತಗಟ್ಟೆ ಸಿಬ್ಬಂದಿ ತೆರಳಲು ಹಾಗೂ ಏ.26ರಂದು ಮತದಾನ ಮುಗಿದ ನಂತರ ತಾಲ್ಲೂಕಿನ ಡಿ-ಮಸ್ಟರಿಂಗ್ ಕೇಂದ್ರದಿಂದ ವಿವಿಧ ತಾಲ್ಲೂಕುಗಳಿಗೆ ಮತಗಟ್ಟೆ ಸಿಬ್ಬಂದಿಯು ತೆರಳಲು ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಿದೆ.

    ಚುನಾವಣೆ ಕಾರ್ಯಕ್ಕೆ 299 ವಾಹನ ನಿಯೋಜಿಸಲಾಗಿದೆ. ಪ್ರತಿ ವಾಹನಗಳು ತೆರಳುವ ಮಾರ್ಗದ ಬಗ್ಗೆ ನಾಮಫಲಕ ಹಾಕಲಾಗಿರುತ್ತದೆ. ವಾಹನ ಕಾರ್ಯಕ್ಕೆ ಸಂಪರ್ಕಿಸಬೇಕಾದ ತಾಲ್ಲೂಕು ಕಚೇರಿಯ ನೌಕರರ ವಿವರ ಇಂತಿದೆ.

    ಮೊಳಕಾಲ್ಮುರು ತಾಲ್ಲೂಕು ವಾಹನ ನಿರ್ವಹಣೆ ಶಾಖೆಯ ಮೇಲ್ವಿಚಾರಣೆಗಾಗಿ ನೌಕರರಾದ ಕೆಂಚಲಿಂಗಪ್ಪ-9880691998, ಶಿವರಾಜ್-9108836293, ಚಳ್ಳಕೆರೆ ಶ್ರೀನಿವಾಸ್-9448566953, ಪ್ರಸನ್ನ-9844401294 , ಚಿತ್ರದುರ್ಗ ಎಸ್‌.ಕೆ.ಮಂಜುನಾಥ್‌ 9844412448, ಹಿರಿಯೂರು ಮಾರುತಿ 6360157344, ಹೊಸದುರ್ಗ ಕರಿಯಪ್ಪ 9900894779, ಹೊಳಲ್ಕೆರೆ ಆನಂದ 9632414253. ಹೆಚ್ಚಿನ ಮಾಹಿತಿಗೆ ವಿಭಾಗೀಯ ಸಂಚಲನಾಧಿಕಾರಿ ಜಿ.ಸುರೇಶ್‌ 9606908962 ಅವರನ್ನು ಸಂಪರ್ಕಿಸಬಹುದು.

    ಕ್ಲಿಕ್ ಮಾಡಿ ಓದಿ: ಘಟಾನುಘಟಿಗಳ ನಡುವೆ ಜಿದ್ದಾಜಿದ್ದಿಗೆ ಸಾಕ್ಷಿ ಕೋಟೆನಾಡು | ಚಿತ್ರದುರ್ಗ ಲೋಕಸಭೆಯ ಸಮಗ್ರ ಮಾಹಿತಿ

    ಮತದಾನ ಮುಗಿದ ನಂತರ ಸಿಬ್ಬಂದಿಗಳನ್ನು ಆಯಾ ತಾಲ್ಲೂಕಿಗೆ ವಾಪಸ್ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕಾರ್ಯ ನಡೆಯುವ ಮೊಳಕಾಲ್ಮುರು ಸರ್ಕಾರಿ ಪಿ.ಯು ಕಾಲೇಜು, ಚಳ್ಳಕೆರೆಯ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿತ್ರದುರ್ಗದ ಮುರುಘಾ ರಾಜೇಂದ್ರ ಕ್ರೀಡಾಂಗಣದ ಸರ್ಕಾರಿ ಕಲಾ ಕಾಲೇಜು, ಹಿರಿಯೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು, ಗುರುಭವನ ಪಕ್ಕದ ಸರ್ಕಾರಿ ಬಾಲಕಿಯರ ಪಿಯು ಕಾಲೇಉ, ಹೊಸದುರ್ಗ ತಾಯಮ್ಮ ಎಡೆತೊರೆ ಸದ್ದಿವಾಲ್ ಲಿಂಗಯ್ಯ ಪದವಿ ಪೂರ್ವ ಕಾಲೇಜು, ಹೊಳಲ್ಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 6 ಗಂಟೆಗೆ ವಾಹನಗಳು ಸಿದ್ದವಿರಲಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಲೋಕಸಮರ 2024

    To Top