Connect with us

    ಹಟ್ಟಿ ತಿಪ್ಪೇಶನ ದರ್ಶನಕ್ಕೆ ವರುಣ ದೇವ | ಆರ್ಭಟಿಸುತ್ತಾ ಆಗಮಿಸುವ ನಿರೀಕ್ಷೆ

    ಮುಖ್ಯ ಸುದ್ದಿ

    ಹಟ್ಟಿ ತಿಪ್ಪೇಶನ ದರ್ಶನಕ್ಕೆ ವರುಣ ದೇವ | ಆರ್ಭಟಿಸುತ್ತಾ ಆಗಮಿಸುವ ನಿರೀಕ್ಷೆ

    CHITRADURGA NEWS | 21 MARCH 2024
    ಚಿತ್ರದುರ್ಗ: ಎಂತಹ ಬರಗಾಲ ಬಂದರೂ ಸಹ ಹಟ್ಟಿ ತಿಪ್ಪೇಶ ನಮ್ಮನ್ನು ಕೈ ಬಿಡುವುದಿಲ್ಲ…ಸ್ವಾಮಿಗೆ ಕಂಕಣಧಾರಣೆ ಆಗಿ ತೇರಿಗೆ ಬರುವಷ್ಟರಲ್ಲಿ ಒಮ್ಮೆಯಾದರು ಮಳೆರಾಯ ಜಗದೊಡೆಯನ ದರ್ಶನಕ್ಕೆ ಬರುತ್ತಾನೆ ಎಂಬ ಬಯಲುಸೀಮೆ ಜನರ ನಂಬಿಕೆ ಶತಮಾನಗಳಿಂದ ಇದೆ. ಪ್ರತಿ ಜಾತ್ರೆ ಸಮಯದಲ್ಲೂ ಮಳೆ ಬರುವುದು ಹಟ್ಟಿ ತಿಪ್ಪೇಶನ ಪವಾಡಕ್ಕೆ ಸಾಕ್ಷಿಯಾಗಿದೆ.

    ಬೆಳಗ್ಗೆ ಮತ್ತು ಸಂಜೆ ವೇಳೆ ಇತ್ತೀಚೆಗೆ ತಂಪು ವಾತಾವರಣದ ರೀತಿ ಭಾಸವಾಗುತ್ತಿದೆ. ಮಧ್ಯಾಹ್ನ ಎಂದಿನಂತೆ ವಿಪರೀತ ಬಿಸಿಲು ದಾಖಲಾಗುತ್ತಿದೆ. ಆಕಾಶದಲ್ಲಿ ಮಳೆ ಮೋಡಗಳ ಸಂಚಾರ ಶುರುವಾಗಿದೆ. ಇದಕ್ಕೆ ಪೂರಕವಾಗಿ ಹವಾಮಾನ ಇಲಾಖೆ ಕೂಡ ಮಳೆಯಾಗುವ ಮುನ್ಸೂಚನೆ ನೀಡಿದೆ.

    ಕ್ಲಿಕ್ ಮಾಡಿ ಓದಿ: https://chitradurganews.com/arecanut-rates-in-karnataka-74/

    ಐದು ದಿನ ಚಿತ್ರದುರ್ಗದಲ್ಲಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ಐದು ದಿನಗಳ ಪೈಕಿ ಮೊದಲ ಮೂರು ಹೆಚ್ಚು ಮಳೆ ಬರುವ ಲಕ್ಷಣಗಳು ಇವೆ. ನಂತರದ ಎರಡು ದಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯ ಮಳೆ ಬೀಳಲಿದೆ ಎನ್ನುತ್ತಾರೆ ಹವಾಮಾನ ತಜ್ಞರು.

    ಕ್ಲಿಕ್ ಮಾಡಿ ಓದಿ: https://chitradurganews.com/accused-of-receiving-dowry-5-years-imprisonment/

    ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ವಿಜಯಪುರ, ಕೊಡಗು ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top