ಮುಖ್ಯ ಸುದ್ದಿ
VV Sagara: ವಾಣಿವಿಲಾಸ ಸಾಗರ ಕೋಡಿ ಬೀಳಲು 1.95 ಅಡಿ ಬಾಕಿ
CHITRADURGA NEWS | 15 NOVEMBER 2024
ಚಿತ್ರದುರ್ಗ: ವಿವಿ ಸಾಗರ ಜಲಾಶಯ (VV Sagara) ಭರ್ತಿಯಾಗಿದ್ದು, ಕೋಡಿ ಬೀಳಲು ಬಹುತೇಕ ಇನ್ನು ಒಂದೂವರೆ ಅಡಿ ಬಾಕಿ ಇದೆ.
ಜಲಾಶಯಕ್ಕೆ ನ.14 ರಂದು ಕೇವಲ 424 ಕ್ಯೂಸೆಕ್ ಒಳಹರಿವು ಬಂದಿತ್ತು. ಆದರೆ, ನ.15 ರಂದು ಮತ್ತೆ ಒಳಹರಿವು ಹೆಚ್ಚಾಗಿದೆ. ಇದರೊಟ್ಟಿಗೆ ಮಳೆಯೂ ಹೆಚ್ಚಾಗಿದೆ.
ಇದನ್ನೂ ಓದಿ: ವಿದೇಶಿ ವ್ಯಾಸಂಗ ವೇತನಕ್ಕೆ ಅರ್ಜಿ ಆಹ್ವಾನ
ನ.15 ರಂದು ಬೆಳಗ್ಗೆ ನಡೆಸಿದ ಮಾಪನದ ವೇಳೆ ಬರೋಬ್ಬರಿ 924 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಇದರಿಂದಾಗಿ 130 ಅಡಿ ಎತ್ತರದ ಜಲಾಶಯದ ನೀರಿನ ಮಟ್ಟ 128.05 ಅಡಿಗೆ ಬಂದು ತಲುಪಿದೆ. ಇನ್ನೂ 1.95 ಅಡಿ ನೀರು ಬಂದರೆ ಕೋಡಿಯಲ್ಲಿ ನೀರು ಹರಿಯಲಿದೆ.
ಇದನ್ನೂ ಓದಿ: 6.60 ಕೋಟಿ ಅಡಿಕೆ ದುಡ್ಡಿಗೆ ಪ್ರಾಣವೇ ಹೋಯ್ತು
ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯ ಏಕೈಕ ಜಲಾಶಯ, ಕರ್ನಾಟಕದ ಮೊಟ್ಟ ಮೊದಲ ಜಲಾಶಯ, ಮಧ್ಯ ಕರ್ನಾಟಕ ಭಾಗಕ್ಕೆ ಮೈಸೂರು ಅರಸರ ಕೊಡುಗೆ ಎಂಬ ಹೆಗ್ಗಳಿಕೆ ಹೊಂದಿರುವ ಈ ಜಲಾಶಯ ಕೋಡಿ ಬಿದ್ದರೆ, ಜಲಾಶಯ ನಿರ್ಮಾಣವಾದ ನಂತರ ಮೂರನೇ ಬಾರಿ ಕೋಡಿ ಹರಿದ ದಾಖಲೆಯಾಗಲಿದೆ.