Connect with us

    ಸುನಿತಾ – ಬುಚ್ ಜಗತ್ತಿಗೆ ಮಾದರಿ | ಪಿ.ಬಸವರಾಜ್

    ಮುಖ್ಯ ಸುದ್ದಿ

    ಸುನಿತಾ – ಬುಚ್ ಜಗತ್ತಿಗೆ ಮಾದರಿ | ಪಿ.ಬಸವರಾಜ್

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 19 MARCH 2025

    ಚಿತ್ರದುರ್ಗ: ಬಾಹ್ಯಾಕಾಶದಲ್ಲಿ ಒಂಬತ್ತು ತಿಂಗಳ ಸವಾಲುಗಳ ದಿನಗಳನ್ನು ಎದುರಿಸಿ, ಭೂಮಿಗೆ ಬಂದಿಳಿದಿರುವ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಜಗತ್ತಿನ ಸರ್ವಜನರಿಗೂ ಸ್ಫೂರ್ತಿ ಆಗಬೇಕು ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಪಿ.ಬಸವರಾಜ್ ತಿಳಿಸಿದ್ದಾರೆ.

    Also Read: ಸುನಿತಾ ವಿಲಿಯಮ್ಸ್ ತಾಳ್ಮೆ ಯುವ ಪೀಳಿಗೆಗೆ ಮಾದರಿ | ಡಾ.ಸೌಮ್ಯ

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಗತ್ತಿನಲ್ಲಿ ಭೂತ, ದೆವ್ವದ ಹೆಸರಲ್ಲಿ ಭೀತಿ ಹುಟ್ಟಿಸುವ, ಜಾತಿ-ಧರ್ಮದ ಹೆಸರಲ್ಲಿ ಕಂದಕ ಉಂಟು ಮಾಡುವ ವ್ಯಕ್ತಿಗಳು ಜಗತ್ತಿಗೆ ಕಂಟಕವಾಗಿದ್ದು, ನಮಗೆ ಸುನಿತಾ ವಿಲಿಯಮ್ಸ್ ಅಂತಹ ದಿಟ್ಟರ ವೈಜ್ಞಾನಿಕ ನಡೆ ಮಾದರಿ ಆಗಬೇಕಾಗಿದೆ ಎಂದು ಹೇಳಿದ್ದಾರೆ.

    ಇವರು ಹಾಗೂ ಇಲ್ಲಿಯವರೆಗೂ ಸಹಸ್ರಾರು ಮಂದಿ ವಿಜ್ಞಾನ ಕ್ಷೇತ್ರದಲ್ಲಿ ನಿರಂತರ ಅಧ್ಯಯನದ ಮೂಲಕ ಜಗತ್ತಿನ ಸಂಕಷ್ಟಗಳನ್ನು ದೂರ ಮಾಡಲು ಶ್ರಮಿಸಿದ್ದಾರೆ.

    ಪಿ.ಬಸವರಾಜ್

    ಈ ನಡೆ ನಿರಂತರವಾಗಿರುತ್ತದೆ. ಈ ಮಧ್ಯೆ ಮೌಢ್ಯ, ಕಂದಾಚಾರಗಳು ಹೆಚ್ಚುತ್ತಿವೆ. ಮೌಢ್ಯಾಚಾರಣೆಗಳ ಮೂಲಕ ಸಮಸ್ಯೆಗಳೇ ಹೆಚ್ಚು. ವಿಜ್ಞಾನದತ್ತ ಆಸಕ್ತಿ ಬೆಳೆಸಿಕೊಂಡರೇ ಬದುಕು ನೆಮ್ಮದಿಯತ್ತ ಸಾಗುತ್ತದೆ. ಇದಕ್ಕೆ ಬಾಹ್ಯಾಕಾಶದಲ್ಲಿ 9 ತಿಂಗಳ ಕಾಲ ಇದ್ದು, ಜೀವಂತವಾಗಿ ಭೂಮಿಗೆ ಬಂದಿಳಿದಿರುವ ಇಬ್ಬರು ಉತ್ತಮ ಸಾಕ್ಷಿ ಎಂದಿದ್ದಾರೆ.

    Also Read: SSLC ವಿದ್ಯಾರ್ಥಿಗಳಿಗೆ ಡಿಸಿ, ಸಿಇಓ ಪತ್ರ | ಏನಿದೆ ಪತ್ರದಲ್ಲಿ ಈ LINK CLICK ಮಾಡಿ

    ಶೀಘ್ರದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಈ ಇಬ್ಬರು ಹಾಗೂ ಇಲ್ಲಿಯವರೆಗೂ ಬಾಹ್ಯಾಕಾಶಕ್ಕೆ ತೆರಳಿದವರು, ವಿಜ್ಞಾನದ ವಿಸ್ಮಯಗಳ ಕುರಿತು ಕಾರ್ಯಕ್ರಮ ಆಯೋಜಿಸಲಾಗುವುದು. ಈ ಮೂಲಕ ಜನರನ್ನು ವೈಜ್ಞಾನಿಕ ಚಿಂತನೆಯತ್ತ ಕೊಂಡೊಯ್ಯುವ ಕೆಲಸವನ್ನು ಮಾನವ ಬಂಧುತ್ವ ವೇದಿಕೆಯಿಂದ ಮಾಡಲಾಗುವುದು ಎಂದು ಪಿ.ಬಸವರಾಜ್ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top