ಲೋಕಸಮರ 2024
ದಾಖಲೆ ಇಲ್ಲದ ₹ 1.6 ಲಕ್ಷ ವಶ | ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ

CHITRADURGA NEWS | 21 MARCH 2024
ಚಿತ್ರದುರ್ಗ: ಲೋಕಸಭಾ ಚುನಾವಣೆಯ ಅಕ್ರಮ ತಡೆಯಲು ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯ ಬಿರುಸಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಯದ್ದಲುಬೊಮ್ಮನಹಟ್ಟಿ ಬಳಿಯ ಅಂತರರಾಜ್ಯ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದ ₹ 1.6 ಲಕ್ಷವನ್ನು ಬುಧವಾರ ವಶಕ್ಕೆ ಪಡೆಯಲಾಗಿದೆ.
ಆಂಧ್ರಪ್ರದೇಶದ ಕಲ್ಯಾಣದುರ್ಗದ ತಿಮ್ಮರಾಜು (30) ಎಂಬುವರು ಸಾಗುತ್ತಿದ್ದ ವಾಹನ ಪರಿಶೀಲನೆ ನಡೆಸಿದಾಗ ₹ 1.6 ಲಕ್ಷ ನಗದು ಪತ್ತೆಯಾಗಿದೆ. ದಾಖಲೆ ಹಾಜರುಪಡಿಸಲು ವಿಫಲರಾದ ಹಿನ್ನೆಲೆಯಲ್ಲಿ ನಗದು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕ್ಲಿಕ್ ಮಾಡಿ ಓದಿ: https://chitradurganews.com/arecanut-rates-in-karnataka-74/
ಚಳ್ಳಕೆರೆ ನಗರದಲ್ಲಿ ತೆರೆಯಲಾದ ಚೆಕ್‍ಪೋಸ್ಟ್‌ಗಳಿಗೆ ಡಿವೈಎಸ್ಪಿ ಟಿ.ಬಿ.ರಾಜಣ್ಣ ಭೇಟಿ ನೀಡಿ ಸಿಸಿಟಿವಿ ಕ್ಯಾಮೆರಾ, ವಿದ್ಯುತ್ ದೀಪ ಹಾಗೂ ಶುದ್ಧ ಕುಡಿಯುವ ನೀರು ಮುಂತಾದ ವ್ಯವಸ್ಥೆಗಳನ್ನು ಪರಿಶೀಲಿಸಿದರು.
‘ಪ್ರತಿ ವಾಹನದ ಮೇಲೆ ಸದಾ ನಿಗಾ ಇಡಬೇಕು. ಅಗತ್ಯ ದಾಖಲೆ ಪರಿಶೀಲಿಸಿ ವಾಹನದ ಮಾಹಿತಿಯನ್ನು ಪುಸ್ತಕದಲ್ಲಿ ದಾಖಲಿಸಬೇಕು. ತಪಾಸಣೆ ನಡೆಸುವಾಗ ಚಾಲಕ ಹಾಗೂ ಮಾಲೀಕರ ಜತೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು’ ಎಂದು ಚೆಕ್‍ಪೋಸ್ಟ್ ಸಿಬ್ಬಂದಿಗೆ ಸೂಚಿಸಿದರು.
ಕ್ಲಿಕ್ ಮಾಡಿ ಓದಿ: https://chitradurganews.com/accused-of-receiving-dowry-5-years-imprisonment/
ಅಧಿಕಾರಿಗಳ ಕಾರ್ಯನಿರ್ವಹಣೆ ಪರಿಶೀಲಿಸಲು ಪ್ರತಿ ರಾತ್ರಿ ಚೆಕ್‍ಪೋಸ್ಟ್‌ಗಳಿಗೆ ಭೇಟಿ ನೀಡಲಾಗುವುದು ಎಂದು ಹೇಳಿದರು.
