Connect with us

ಯುಗಾದಿ ಜೂಜು | ಜಿಲ್ಲೆಯಲ್ಲಿ 850 ಜನರ ಬಂಧನ | ಪೊಲೀಸ್ ಇಲಾಖೆಯ ಭರ್ಜರಿ ಕಾರ್ಯಚರಣೆ

ಪೊಲೀಸ್

ಕ್ರೈಂ ಸುದ್ದಿ

ಯುಗಾದಿ ಜೂಜು | ಜಿಲ್ಲೆಯಲ್ಲಿ 850 ಜನರ ಬಂಧನ | ಪೊಲೀಸ್ ಇಲಾಖೆಯ ಭರ್ಜರಿ ಕಾರ್ಯಚರಣೆ

CHITRADURGA NEWS | 01 APRIL 2025

ಚಿತ್ರದುರ್ಗ: ಯುಗಾದಿ ಅಂದ್ರೆ ತುಸು ಜೂಜು ಇರಬೇಕಲ್ವಾ ಎನ್ನುವವರಿಗೆ ಚಿತ್ರದುರ್ಗ ಪೊಲೀಸ್ ಶಾಕ್ ನೀಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಅಂದರ್ – ಬಾಹರ್ ಆಡುವುದು ಕಾನೂನು ಬಾಹೀರ ಎಂದು ಸಾರಿ ಸಾರಿ ಹೇಳಿದ್ದರೂ, ಕದ್ದು ಮುಚ್ಚಿ ಆಡಿ ನೂರಾರು ಮಂದಿ ಅಂದರ್ ಆಗಿದ್ದಾರೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ 5 ಆಹಾರಗಳನ್ನು ಸೇವಿಸುತ್ತೀದ್ದೀರಾ…? ಹುಷಾರು!

ಹಬ್ಬದ ಮೋಜು ಮಸ್ತಿಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರಿಗೆ ಪೊಲೀಸರು ಶಾಕ್ ನೀಡಿದ್ದು, ಜಿಲ್ಲೆಯಾದ್ಯಂತ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಮಾ.29 ರಿಂದಲೇ ಪೊಲೀಸರ ಕಾರ್ಯಾಚರಣೆ ಪ್ರಾರಂಭವಾಗಿದ್ದು, ಏ.1 ನಸುಕಿನವರೆಗೆ ಪೊಲೀಸ್ ಠಾಣೆಗಳಿಗೆ ತಂಡೋಪ ತಂಡವಾಗಿ ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸಿ ಕರೆತರುವ ಕೆಲಸ ನಡೆದಿದೆ.

ಇದನ್ನೂ ಓದಿ: ನೀವು ಯಾವಾಗಲೂ ಯಂಗ್ ಆಗಿ ಕಾಣಬೇಕೇ…? ಈ ಆಹಾರಗಳನ್ನು ತಪ್ಪದೇ ಸೇವಿಸಿ ನೋಡಿ!

ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಾದ್ಯಂತ ಪೊಲೀಸರು 154 ಕಡೆಗಳಲ್ಲಿ ದಾಳಿ ನಡೆಸಿ 850 ಆರೋಪಿಗಳನ್ನು ಬಂಧಿಸಿ, 10.80 ಲಕ್ಷ ರೂ. ಜಪ್ತಿ ಮಾಡಲಾಗಿದೆ.

ಯುಗಾದಿ ಅಂಗವಾಗಿ ಜಿಲ್ಲೆಯ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಇಷ್ಟು ದೊಡ್ಡ ಪ್ರಮಾಣದಲ್ಲಿ ದೂರು ದಾಖಲಿಸಿ, ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ | ಇಬ್ಬರು ಸಾವು | ಮೂವರಿಗೆ ಗಾಯ

ಚಿತ್ರದುರ್ಗ ಉಪವಿಭಾಗ ವ್ಯಾಪ್ತಿಯ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 47 ಪ್ರಕರಣ ದಾಖಲಿಸಿ 246 ಜನರ ಮೇಲೆ ದೂರು ದಾಖಲಿಸಲಾಗಿದೆ. ದಾಳಿ ವೇಳೆ 3,94,270 ರೂ. ನಗದು ಜಪ್ತಿ ಮಾಡಲಾಗಿದೆ.

ಹಿರಿಯೂರು ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು 56 ಪ್ರಕರಣ ದಾಖಲಾಗಿದ್ದು, 329 ಜನರನ್ನು ದಸ್ತಗಿರಿ ಮಾಡಲಾಗಿದೆ. ದಾಳಿ ವೇಳೆ 5,12,540 ರೂ. ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ಸಿರಿಗೆರೆ ಗುರುಗಳಿಂದ ಚಂದ್ರ ದರ್ಶನ

ಚಿತ್ರದುರ್ಗ ಉಪವಿಭಾಗ ವ್ಯಾಪ್ತಿಯಲ್ಲಿ 51 ದಾಳಿ ನಡೆಸಿ ದೂರು ದಾಖಲಿಸಿದ್ದು, 275 ಜನರನ್ನು ದಸ್ತಗಿರಿ ಮಾಡಲಾಗಿದೆ. ದಾಳಿ ವೇಳೆ 1.73,420 ರೂ. ಜಪ್ತಿ ಮಾಡಲಾಗಿದೆ.

ಮೂರು ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟಾರೆ, 154 ಪ್ರಕರಣ ದಾಖಲಿಸಿ, 850 ಜನರನ್ನು ಬಂದಿಸಿ, 10,80,230 ರೂ. ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ವರದಿ ನೀಡಿದೆ.

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
Exit mobile version