ತಾಲೂಕು
ಉಡುವಳ್ಳಿ ನವೋದಯ ಶಾಲೆಯ 8 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ಚಿತ್ರದುರ್ಗ ನ್ಯೂಸ್.ಕಾಂ: ಹಿರಿಯೂರು ತಾಲೂಕು ಉಡುವಳ್ಳಿ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಫುಡ್ ಫಾಯಿಸನ್ ಸಮಸ್ಯೆಯಿಂದ ಆಸ್ಪತ್ರಗೆ ದಾಖಲಾಗಿದ್ದಾರೆ.
ಸೆಪ್ಟಂಬರ್ 26 ರಂದು ಬೆಳಗ್ಗೆ ಉಪಹಾರಕ್ಕೆ ಇಡ್ಲಿ, ಚಟ್ನಿ ಹಾಗೂ ಸಾಂಬಾರ್ ಸೇವಿಸಿದ ನಂತರ ಶಾಲೆಯ ಸುಮಾರು 8 ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದರು.
ಇದನ್ನೂ ಓದಿ: ಇಲ್ಲಿ ನಂದೇನು ಹೊಲ ಇಲ್ಲ, ನನಗೆ ಬೆಳೆವಿಮೆ ಹಣ ಬರಲ್ಲ, ರೈತರ ಹಿತವಷ್ಟೇ ಮುಖ್ಯ | ಜಿಲ್ಲಾಧಿಕಾರಿ ದಿವ್ಯಪ್ರಭು
ತಕ್ಷಣ ವಿದ್ಯಾರ್ಥಿಗಳನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದ, ಇಲ್ಲಿನ ಮಕ್ಕಳ ತಜ್ಞರಾದ ಡಾ.ರಂಗೇಗೌಡ ಚಿಕಿತ್ಸೆ ನೀಡಿದ್ದಾರೆ. ಮಕ್ಕಳ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ತಿಳಿಸಿದ್ದಾರೆ.
ನವೋದಯ ಶಾಲೆಯ ಶಿಕ್ಷಕ ಶ್ರೀನಿವಾಸ್ ರಾವ್ ಮಕ್ಕಳ ಜೊತೆಗೆ ಹಾಜರಿದ್ದು, ಘಟನೆಯ ಬಗ್ಗೆ ವೈದ್ಯಕೀಯ ವರದಿ ಬಂದ ನಂತರ ಪೂರ್ಣ ಮಾಹಿತಿ ತಿಳಿಯಲಿದೆ ಎಂದಿದ್ದಾರೆ.
ಮಕ್ಕಳ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪೋಷಕರು, ಕೇವಲ 8 ವಿದ್ಯಾರ್ಥಿಗಳಿಗೆ ಮಾತ್ರ ಈ ರೀತಿ ಆಗಿರುವುದು ಅನುಮಾನ ಮೂಡಿಸಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.