ಕ್ರೈಂ ಸುದ್ದಿ
ಮೂವರ ಸಾವು | ಕಲ್ಲಂಗಡಿ ತುಂಬಿದ್ದ ಲಾರಿಗೆ ಮತ್ತೆರಡು ಲಾರಿ ಡಿಕ್ಕಿ | ಸರಣಿ ಅಪಘಾತ |

CHITRADURGA NEWS | 05 MARCH 2025
ಚಿತ್ರದುರ್ಗ: ಇಂದು ಬೆಳಗ್ಗೆ ಮಾರಘಟ್ಟ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಮೂರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೆದ್ದಾರಿ ಮೇಲೆ ಕೆಟ್ಟು ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿದೆ. ಈ ಲಾರಿಗೆ ಹಿಂದಿನಿಂದ ಬಂದ ಟ್ರಕ್ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: ಲೇಔಟ್‍ನಲ್ಲಿ ಬೆಳ್ಳಂ ಬೆಳಗ್ಗೆ ಕರಡಿಯ ವಾಕಿಂಗ್
ಟೈಯರ್ ಸ್ಪೋಟವಾಗಿ ರಸ್ತೆಬದಿ ಲಾರಿಯೊಂದು ನಿಂತಿದ್ದು, ಅದರ ಟೈಯರ್ ಬದಲಾವಣೆ ಮಾಡಲಾಗುತ್ತಿತ್ತು. ಇದೇ ವೇಳೆ ಹಿಂದಿನಿಂದ ಬಂದ ಲಾರಿ ನಿಯಂತ್ರಣಕ್ಕೆ ಸಿಗದೇ ಡಿಕ್ಕಿಯಾಗಿದೆ. ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕಲ್ಲಂಗಡಿ ತುಂಬಿದ್ದ ಲಾರಿಯಲ್ಲಿದ್ದ ಇಬ್ಬರು ಸೇರಿ ಮೂರು ಜನ ಮೃತಪಟ್ಟಿದ್ದಾರೆ.
ಕಲ್ಲಂಗಡಿ ಹಣ್ಣಿನ ಲೋಡ್ ಇದ್ದ ಲಾರಿ ಹೆದ್ದಾರಿಯಲ್ಲಿ ನಿಂತಿತ್ತು. ಇದಕ್ಕೆ ಬೆಂಗಳೂರಿನಿಂದ ದಾವಣಗೆರೆ ಕಡೆಗೆ ಚಲಿಸುತ್ತಿದ್ದ ಲಾರಿ ಹಾಗೂ ಟ್ರಕ್ ಡಿಕ್ಕಿಯಾಗಿವೆ. ಅಪಘಾತದಲ್ಲಿ ಮೃತಪಟ್ಟವರು ಹೊರ ರಾಜ್ಯದವರಾಗಿದ್ದು ಗುರುತು ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: ಎಪಿಎಂಸಿ ಗೋದಾಮಿಗೆ ಬೆಂಕಿ | ಕಾರ್ಮೋಡದಂಥ ಹೊಗೆ | ಬೆಂಕಿ ನಂದಿಸಲು ಹರಸಾಹಸ
ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
