Connect with us

Vasant Nadigera; ಹಿರಿಯ ಪತ್ರಕರ್ತರಾದ ವಸಂತ ನಾಡಿಗೇರ ಅವರಿಗೆ ನುಡಿನಮನ

ಹಿರಿಯ ಪತ್ರಕರ್ತರಾದ ವಸಂತ ನಾಡಿಗೇರ ಅವರಿಗೆ ನುಡಿನಮನ

ಮುಖ್ಯ ಸುದ್ದಿ

Vasant Nadigera; ಹಿರಿಯ ಪತ್ರಕರ್ತರಾದ ವಸಂತ ನಾಡಿಗೇರ ಅವರಿಗೆ ನುಡಿನಮನ

CHITRADURGA NEWS | 10 SEPTEMBER 2024

ಚಿತ್ರದುರ್ಗ: ತಮ್ಮ ವಿಶಿಷ್ಟ ಮಾತಿನ ಶೈಲಿ, ಹೆಡ್ಡಿಂಗ್‍ಗಳ ಮೂಲಕವೇ ಕನ್ನಡ ಪತ್ರಿಕೋದ್ಯಮದಲ್ಲಿ ಖ್ಯಾತಿ ಪಡೆದಿರುವ ವಸಂತ ನಾಡಿಗೇರ(Vasant Nadigera) ಅವರು ಸರಳ ಸಜ್ಜನಿಕೆಯವರಾಗಿದ್ದರು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯ ನಿರ್ದೇಶಕರಾದ ಬಿ.ವಿ.ತುಕರಾಂ ರಾವ್ ಹೇಳಿದರು.

ಕ್ಲಿಕ್ ಮಾಡಿ ಓದಿ: Horticulture: ಸೆ.12ರಂದು ಜಿಲ್ಲಾ ಹಾಪ್‍ಕಾಮ್ಸ್ ವಾರ್ಷಿಕ ಮಹಾಸಭೆ

ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದಿಂದ ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿ ಈಚೆಗೆ ನಿಧನರಾದ ವಸಂತ್ ನಾಡಿಗೇರ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.

ಪತ್ರಿಕೆಯಲ್ಲಿ ಅವರು ಶೀರ್ಷಿಕೆಗಳನ್ನು ಕೂಡುವುದರಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಮಾಡುವುದರ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ಹೂಸ ಆಯಾಮವನ್ನು ನೀಡಿದ್ದರು.

ಭಾಷೆಯ ಮೇಲೆ ಹಿಡಿತವನ್ನು ಸಾಧಿಸಿದವರು ಮಾತ್ರ ಉತ್ತಮವಾದ ತಲೆ ಬಹರವನ್ನು ನೀಡಲು ಸಾಧ್ಯವಿದೆ, ಇಂತಹ ವ್ಯಕಿತ್ವವನ್ನು ಹೊಂದಿದವರು ವಸಂತ ನಾಡಿಗೇರ ಅವರು, ಇದ್ದಲ್ಲದೆ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಳ್ಳುವುದರ ಮೂಲಕ ಅದನ್ನು ತಮ್ಮ ವೃತ್ತಿಯಲ್ಲಿ ಪಾಲಿಸುತ್ತಿದ್ದರು. ಇಂದಿನ ಯುವ ಪತ್ರಕರ್ತರಿಗೆ ಅವರು ಮಾರ್ಗದರ್ಶಕರಾಗಿದ್ದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಿಗೆರೆ ಮಾತನಾಡಿ, ವಸಂತ ನಾಡಿಗೇರ ಅವರು ಮರಾಠಿ ಮತ್ತು ಕನ್ನಡ ಭಾಷೆಯಲ್ಲಿ ಉತ್ತಮವಾದ ಹಿಡಿತವನ್ನು ಸಾಧಿಸಿದ್ದರು, ಯುವ ಪತ್ರಕರ್ತರಿಗೆ ದಾರಿ ದೀಪವಾಗಿದ್ದರು, ಅವರನ್ನು ಬೆನ್ನು ತಟ್ಟುವ ಕಾರ್ಯವನ್ನು ಮಾಡಿದ್ದಾರೆ.

ಕ್ಲಿಕ್ ಮಾಡಿ ಓದಿ: Upper Bhadra Project: ಭದ್ರಾ ಮೇಲ್ದಂಡೆ ಯೋಜನೆ ಅನುದಾನ | ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ

ಪತ್ರಕರ್ತರು ಯಾವ ರೀತಿ ಇರಬೇಕು ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ. ಇವರ ಮಾರ್ಗದರ್ಶನ ಬೇರೆ ಪತ್ರಕರ್ತರಿಗೆ ಮಾದರಿಯಾಗಬೇಕಿದೆ ಎಂದರು.

ಹಿರಿಯ ಪತ್ರಕರ್ತರು ಹಾಗೂ ಕನ್ನಡಪ್ರಭ ವರದಿಗಾರರಾದ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಕನ್ನಡಪ್ರಭ, ವಿಜಯ ಕರ್ನಾಟಕದಲ್ಲಿ ಕೆಲಸವನ್ನು ಮಾಡುವುದರ ಮೂಲಕ ಉತ್ತಮವಾದ ತಲೆ ಬಹರವನ್ನು ನೀಡುವುದರ ಮೂಲಕ ಹೆಸರನ್ನು ಪಡೆದಿದ್ದಾರೆ.

ಕಲಿಯುವವರಿಗೆ ಹೆಚ್ಚಿನ ರೀತಿಯ ಪ್ರೋತ್ಸಾಹವನ್ನು ನೀಡುತ್ತಿದ್ದರು, ಈಗ ಅವರಿಗೆ 59 ವರ್ಷ ಸಾಯುವಂತ ವಯಸ್ಸಲ್ಲ, ಅದರೂ ಸಹಾ ಭಗವಂತ ಅವರನ್ನು ಕರೆದುಕೊಂಡಿದ್ದಾನೆ, ಅವರು ಇನ್ನೂ ಬದುಕಿದ್ದರೆ ಹಲವಾರು ಜನರಿಗೆ ನೇರವಾಗುತ್ತಿದ್ದರು ಎಂದರು.

ಹಿರಿಯ ಪತ್ರಕರ್ತರು ಹಾಗೂ ವಿಜಯ ಕರ್ನಾಟಕದ ವರದಿಗಾರರಾದ ಅಹೋಬಲಪತಿ ಮಾತನಾಡಿ, ನಾನು ವಿಜಯ ಕರ್ನಾಟಕದಲ್ಲಿ ಕೆಲಸವನ್ನು ಮಾಡಲು ಒಂದು ರೀತಿಯಲ್ಲಿ ವಸಂತರವರು ನೆರವಾಗಿದ್ದಾರೆ, ನನ್ನ ಹಲವಾರು ಬರಹಗಳನ್ನು ಮೆಚ್ಚಿ ದೂರವಾಣಿಯನ್ನು ಮಾಡಿ ನನಗೆ ಶುಭವನ್ನು ಕೋರಿದ್ದರು.

ಸುದ್ದಿ ವಿಷಯದಲ್ಲಿ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಪತ್ರಿಕೋದ್ಯಮದಲ್ಲಿ ಬೆಳೆಯುವವರಿಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶಕರಾಗಿದ್ದರು. ವಸಂತರವರ ನಿಧನವನ್ನು ಹಲವಾರು ಮಾಧ್ಯಮಗಳು ಸ್ಮರಣೆಯನ್ನು ಮಾಡಿದ್ದಾರೆ. ಇನ್ನೂ ಮುಂದೆ ಇಂತಹ ಪತ್ರಕರ್ತರ ಸಂಖ್ಯೆ ಕಡಿಮೆಯಾಗುವ ನೀರಿಕ್ಷೆ ಇದೆ ಎಂದರು.

ಕ್ಲಿಕ್ ಮಾಡಿ ಓದಿ: GAS LEAKAGE: ಹೊಸದುರ್ಗ ಘಟನೆ: ಬಳಕೆಯಾಗದ ವಾಟರ್ FILTER ಕ್ಲೋರಿನ್ ಅನಿಲ ಸೋರಿಕೆಯಾಗಿದ್ದೇಗೆ ?

ಹಿರಿಯ ಪತ್ರಕರ್ತರು, ಸಂಯುಕ್ತ ಕರ್ನಾಟಕದ ವರದಿಗಾರರಾದ ಬಸವರಾಜು ಮಾತನಾಡಿ, ನನಗೆ ಮಾರ್ಗದರ್ಶಕರಾಗಿ ಉತ್ತಮವಾದ ಸಲಹೆಯನ್ನು ನೀಡುವುದರ ಮೂಲಕ ದಾರಿ ದೀಪವಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಆಶೋಕ ಸಂಗೇನಹಳ್ಳಿ ಮಾತನಾಡಿದರು.

ಈ ವೇಳೆ ನಿವೃತ್ತ ಪ್ರಾಂಶುಪಾಲರಾದ ಯಾದವ ರೆಡ್ಡಿ, ನೀರಾವರಿ ಹೋರಾಟ ಸಮಿತಿಯ ದಯಾನಂದ ಹಿರಿಯ ಪತ್ರಕರ್ತರು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version