Connect with us

    ಟೌನ್ ಕೋ-ಆಪರೇಟಿವ್ ಬ್ಯಾಂಕ್ ಚುನಾವಣೆ | ನಿಶಾನಿ ಜಯ್ಯಣ್ಣ ಟೀಮ್ ನಾಮಪತ್ರ ಸಲ್ಲಿಕೆ

    ಮುಖ್ಯ ಸುದ್ದಿ

    ಟೌನ್ ಕೋ-ಆಪರೇಟಿವ್ ಬ್ಯಾಂಕ್ ಚುನಾವಣೆ | ನಿಶಾನಿ ಜಯ್ಯಣ್ಣ ಟೀಮ್ ನಾಮಪತ್ರ ಸಲ್ಲಿಕೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 24 JANUARY 2025

    ಚಿತ್ರದುರ್ಗ: ನಗರದ ಟೌನ್ ಕೋ-ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಯ ನಿರ್ದೇಶಕರುಗಳ ಸ್ಥಾನಕ್ಕೆ ಫೆ.2 ರಂದು ಚುನಾವಣೆ ನಡೆಯಲಿದೆ.

    Also Read: ಕಣಿವೆ ಮಾರಮ್ಮನ ಪೋಟೋ ಕ್ಲಿಕ್ಕಿಸಿಕೊಂಡ ಡಿಕೆಶಿ

    ಇಂದು ಎಂ.ನಿಶಾನಿ ಜಯಣ್ಣ ಮತ್ತವರ ಗುಂಪಿನಿಂದ ಟೌನ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರಗಳನ್ನು ಸಲ್ಲಿಸಲಾಯಿತು.

    ಎಂ.ನಿಶಾನಿ ಜಯಣ್ಣ, ಸೂರ್ಯಪ್ರಕಾಶ್, ನಾಗರಾಜ್‍ಬೇದ್ರೆ, ಜಿ.ಸುರೇಶ್‍ಕುಮಾರ್(ಭಾಫ್ನ) ಓ.ತಿಪ್ಪೇಸ್ವಾಮಿ, ಎ.ಚಂಪಕ, ಎನ್.ಎಂ.ಪುಷ್ಪವಲ್ಲಿ, ಡಾ.ರಹಮತ್‍ವುಲ್ಲಾ, ಚಿಕ್ಕಣ್ಣ, ಚಂದ್ರಣ್ಣ, ಬಿ.ವಿ.ಶ್ರೀನಿವಾಸ್‍ಮೂರ್ತಿ, ರಾಜ್‍ಕುಮಾರ್, ಕೇಶವಮೂರ್ತಿ, ಎನ್.ಲಿಂಗೇಶ್ ಇವರುಗಳು ತಮ್ಮ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಗೆ ಸಲ್ಲಿಸಿದರು.

    ಸಾಮಾನ್ಯ ವರ್ಗದಿಂದ 6, ಬಿ.ಸಿ.ಎಂ.ಬಿ.-1, ಪರಿಶಿಷ್ಟ ಜಾತಿ-1, ಪರಿಶಿಷ್ಟ ವರ್ಗ-1, ಬಿ.ಸಿ.ಎಂ.ಎ.-1, ಮಹಿಳಾ ಕ್ಷೇತ್ರದಿಂದ 2 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಜ.25 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 26 ರಂದು ಪರಿಶೀಲನೆ, 27 ನಾಮಪತ್ರಗಳನ್ನು ವಾಪಸ್ ಪಡೆಯಲು ಕಡೆ ದಿನವಾಗಿರುತ್ತದೆ.

    Also Read: ಆಹ್ವಾನ ಪತ್ರಿಕೆಯಲ್ಲಿ ಶ್ರೀ ಜಯದೇವ ಮುರುಘರಾಜೇಂದ್ರ ಕ್ರಿಡಾಂಗಣವೆಂದೇ ನಮೂದಿಸಿ

    ಫೆ.2 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಚುನಾವಣೆ ನಡೆಯುತ್ತದೆ. ಮತದಾನದ ನಂತರ ಅಂದೆ ಮತಗಳ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top