ಮುಖ್ಯ ಸುದ್ದಿ
ವಾಣಿವಿಲಾಸ ಸಾಗರ ಜಲಾಶಯದ ಇಂದಿನ ಮಟ್ಟ
CHITRADURGA NEWS | 08 JANUARY 2025
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯ ಕೋಡಿ ಬಿದ್ದಿದೆ ಎಂದು ಕಳೆದೆರಡು ದಿನಗಳಿಂದ ವೀಡಿಯೋ ಹರಿದಾಡುತ್ತಿದ್ದು, ಸಾಕಷ್ಟು ಜನ ನಿಜವೆಂದು ನಂಬಿದ್ದಾರೆ. ಆದರೆ, ಜಲಾಶಯ ಕೋಡಿ ಬೀಳಲು ಇನ್ನು ಸರಿಸುಮಾರು ಅರ್ಧ ಅಡಿ ನೀರು ಬರಬೇಕಿದೆ.
ಕ್ಲಿಕ್ ಮಾಡಿ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್…
ಈಗ ಭದ್ರಾ ಜಲಾಶಯದಿಂದ ಪ್ರತಿ ದಿನ 693 ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದೆ.
ಪ್ರತಿ ದಿನ ಒಂದು ಪಾಯಿಂಟ್ ಅಂದರೆ ಕನಿಷ್ಟ ಒಂದು ಇಂಚು ನೀರು ಹರಿದು ಬರುತ್ತಿದೆ. ಕೋಡಿ ಮಟ್ಟ ತುಂಬಿ ಮುಂದಕ್ಕೆ ನೀರು ಹರಿಯಲು ಇನ್ನೂ ಕನಿಷ್ಟ ಹತ್ತು ದಿನಗಳಾದರೂ ಬೇಕಾಗುತ್ತದೆ. ಬಹುತೇಕ ಸಂಕ್ರಾಂತಿಗೆ ಜಲಾಶಯ ಭರ್ತಿ ಆಗಬಹುದು.
ಇಂದಿನ ಜಲಾಶಯ ಮಟ್ಟ ಎಷ್ಟಿದೆ:
ಜನವರಿ 8 ಬುಧವಾರ ಬೆಳಗ್ಗೆ ವೇಳೆಗೆ 693 ಕ್ಯೂಸೆಕ್ ನೀರು ಹರಿದು ಬಂದಿದೆ. ವಾಣಿವಿಲಾಸ ಸಾಗರ ಜಲಾಶಯದ ಇಂದಿನ ನೀರಿನ ಮಟ್ಟ 129.85 ಅಡಿ ತಲುಪಿದೆ.
ಕ್ಲಿಕ್ ಮಾಡಿ ಓದಿ: ಯುವನಿಧಿ | ಜ.20ರವರೆಗೆ ವಿಶೇಷ ನೋಂದಣಿ ಅಭಿಯಾನ
135 ಅಡಿ ಎತ್ತರ ಇರುವ ಮಾರಿಕಣಿವೆ ಡ್ಯಾಂ 131 ಅಡಿ ದಾಟುವ ಮೊದಲೇ ನೀರು ಬಂದ ತಕ್ಷಣ ಕೋಡಿ ಬೀಳಲಿದೆ.
30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯಕ್ಕೆ ಈವರೆಗೆ 30.29 ಟಿಎಂಸಿ ಅಡಿ ನೀರು ಬಂದಿದೆ. ಇನ್ನೂ ಅರ್ಧ ಅಡಿ ನೀರು ಬರುವುದು ಬಾಕಿಯಿದೆ.