ಮುಖ್ಯ ಸುದ್ದಿ
VaniVilasa: ವಿವಿ ಸಾಗರಕ್ಕೆ ಹರಿದು ಬಂತು 1 ಸಾವಿರ ಕ್ಯೂಸೆಕ್ ನೀರು
Published on
CHITRADURGA NEWS | 10 NOVEMBER 2024
ಚಿತ್ರದುರ್ಗ: ವಾಣಿವಿಲಾಸ (VaniVilasa)ಸಾಗರ ಜಲಾಶಯದ ನೀರಿನ ಮಟ್ಟ ದಿನೇ ದಿನೇ ಏರುತ್ತಲೇ ಇದೆ. ಮಳೆ ಇಲ್ಲದೆಯೂ ಭದ್ರಾ ಜಲಾಶಯದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ.
130 ಅಡಿ ಎತ್ತರದ ವಿವಿ ಸಾಗರ ಜಲಾಶಯದಲ್ಲಿ ಈಗ ಬರೋಬ್ಬರಿ 127.60 ಅಡಿವರೆಗೆ ನೀರು ಸಂಗ್ರಹವಾಗಿದೆ. ಜಲಾಶಯ ಬಹುತೇಕ ಭರ್ತಿಯಾಗಿದ್ದು, ಕೋಡಿ ಬೀಳಲು ಇನ್ನು 2.40 ಅಡಿ ಬಾಕಿ ಇದೆ.
ಇದನ್ನೂ ಓದಿ: ದಿನ ಭವಿಷ್ಯ | ನವೆಂಬರ್ 10 | ಈ ದಿನ ನಿಮ್ಮ ರಾಶಿ ಫಲ ಹೇಗಿದೆ…
ನವೆಂಬರ್ 10 ಭಾನುವಾರ ಬೆಳಗ್ಗೆ ನಡೆಸಿದ ಮಾಪನದ ವೇಳೆ ವಿವಿ ಸಾಗರ ಜಲಾಶಯಕ್ಕೆ 1040 ಕ್ಯೂಸೆಕ್ ನೀರು ಹರಿದು ಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ವಾಣಿವಿಲಾಸ ಸಾಗರ ಕೋಡಿ ಮಟ್ಟದ ವೀಡಿಯೋ ನೋಡಿ:
30 ಟಿಎಂಸಿ ಸಾಮಥ್ರ್ಯದ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸದ್ಯ 28.41 ಟಿಎಂಸಿ ನೀರು ಸಂಗ್ರಹವಾಗಿದೆ. ಭರ್ತಿಗೆ ಇನ್ನು 1.6 ಅಡಿ ಮಾತ್ರ ಬಾಕಿ ಇದೆ.
ಇದನ್ನೂ ಓದಿ: ದುಬೈ ಕನ್ನಡ ರಾಜ್ಯೋತ್ಸವಕ್ಕೆ ಎಸ್.ಲಿಂಗಮೂರ್ತಿಗೆ ಆಹ್ವಾನ
ಕಳೆದ ವರ್ಷ ಇದೇ ದಿನ ವಾಣಿವಿಲಾಸ ಸಾಗರ ಜಲಾಶಯದಲ್ಲಿ 121.85 ಅಡಿವರೆಗೆ ನೀರಿದ್ದು, 23.57 ಟಿಎಂಸಿ ನೀರಿತ್ತು.
Continue Reading
You may also like...
Related Topics:Bhadra Reservoir, Bhadra Upper Bank, Chitradurga, Chitradurga news, featured, Inflow Increase, Kannada News, Vanivilasa, Vanivilasa Sagar Reservoir, Vedavati, VV Sagar, ಒಳಹರಿವು ಹೆಚ್ಚಳ, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಫೀಚರ್ಡ್, ಭದ್ರಾ ಜಲಾಶಯ, ಭದ್ರಾ ಮೇಲ್ದಂಡೆ, ವಾಣಿವಿಲಾಸ ಸಾಗರ ಜಲಾಶಯ, ವಿವಿ ಸಾಗರ, ವೇದಾವತಿ
Click to comment