ಮುಖ್ಯ ಸುದ್ದಿ
VV Sagara Inflow: ವಿವಿ ಸಾಗರಕ್ಕೆ ಹರಿದು ಬಂತು 1 ಸಾವಿರ ಕ್ಯೂಸೆಕ್ ನೀರು

Published on
CHITRADURGA NEWS | 16 AUGUST 2024
ಚಿತ್ರದುರ್ಗ: ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾದ ಪರಿಣಾಮ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿದು ಬರುವ ನೀರಿನ ಒಳಹರಿವಿನ ಪ್ರಮಾಣವೂ ಹೆಚ್ಚಾಗಿದೆ.
ಭದ್ರಾ ಜಲಾಶಯದಿಂದ ಈಗಾಗಲೇ ಪ್ರತಿ ದಿನ 700 ಕ್ಯೂಸೆಕ್ ನೀರು ಹರಿಸುತ್ತಿದ್ದು, ಅದರೊಟ್ಟಿಗೆ ಶುಕ್ರವಾರ ಬೆಳಗ್ಗೆ 8 ಗಂಟೆಗೆ ನಡೆಸಿದ ಮಾಪನದ ವೇಳೆ 300ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬಂದಿದೆ.
ಇದನ್ನೂ ಓದಿ: ಸರ್ಕಾರಿ ನೌಕರರ ಅಭಿನಂದನಾ ಸಮಾರಂಭಕ್ಕೆ NPS ನೌಕರರ ಬಹಿಷ್ಕಾರ
ಶುಕ್ರವಾರದ ಹೊತ್ತಿಗೆ ಒಟ್ಟಾರೆ 1039 ಕ್ಯೂಸೆಕ್ ನೀರು ಜಲಾಶಯದ ಒಡಲು ಸೇರಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.
130 ಅಡಿ ಎತ್ತರದ, 30 ಟಿಎಂಸಿ ಸಾಮಥ್ರ್ಯದ ವಿವಿ ಸಾಗರ ಜಲಾಶಯದಲ್ಲಿ ಸದ್ಯ 116 ಅಡಿ ನೀರು ಬಂದಿದ್ದು, ಇದರ ಪ್ರಮಾಣ 19.48 ಟಿಎಂಸಿ ಆಗಿದೆ.
ಇದನ್ನೂ ಓದಿ: ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಪ್ಪರಸನಹಳ್ಳಿ ಬಸವರಾಜಪ್ಪ ನಿಧನ
ಕಳೆದ ವರ್ಷ ಇದೇ ದಿನ ಅಂದರೆ 16 ಆಗಸ್ಟ್ 2023 ರಂದು ವಿವಿ ಸಾಗರ ಜಲಾಶಯದಲ್ಲಿ 123 ಅಡಿ ನೀರಿತ್ತು.
Continue Reading
You may also like...
Related Topics:Bhadra Reservoir, Chitradurga, Chitradurga Updates, Inflow, Kannada Latest News, Karnataka Suddu, Rain, Vedavati, VV Sagar, ಒಳಹರಿವು, ಕನ್ನಡ ಲೇಟೆಸ್ಟ್ ನ್ಯೂಸ್, ಕರ್ನಾಟಕ ಸುದ್ದು, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಭದ್ರಾ ಜಲಾಶಯ, ಮಳೆ, ವಿವಿ ಸಾಗರ, ವೇದಾವತಿ

Click to comment