ಮುಖ್ಯ ಸುದ್ದಿ
ಲೋಕಾಯುಕ್ತ ದೂರಿನಲ್ಲಿ ಷಡ್ಯಂತ್ರ | ದೂರು ದಾಖಲಿಸಿಕೊಳ್ಳಲು ತಿಮ್ಮರಾಜು ಪತ್ನಿ ಮನವಿ | ಇಡೀ ದಿನ ಏನೇನಾಯ್ತು ?

CHITRADURGA NEWS | 27 APRIL 2025
ಚಿತ್ರದುರ್ಗ: ನ್ಯಾಯಾಂಗ ಬಂಧನದಲ್ಲಿ ಇದ್ದಾಗಲೇ ಮೃತಪಟ್ಟಿರುವ ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ಜಿ.ವಿ.ತಿಮ್ಮರಾಜು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜಿಲ್ಲಾ ಕಾರಾಗೃಹದಲ್ಲಿದ್ದ ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜುಗೆ ಶನಿವಾರ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಬಂಧಿಖಾನೆ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಪುರಸಭೆ ಮುಖ್ಯಾಧಿಕಾರಿ ಸಾವು | ಲೋಕಾಯುಕ್ತ ಬಲೆಗೆ ಬಿದ್ದಿದ್ದ ತಿಮ್ಮರಾಜು | ಜಿಲ್ಲಾಸ್ಪತ್ರೆಯಲ್ಲಿ ಮೃತ
ಈ ಘಟನೆ ತಿಳಿಯುತ್ತಿದ್ದಂತೆ ಮೃತ ತಿಮ್ಮರಾಜು ಪತ್ನಿ ಕಾವ್ಯ, ಸಹೋಧರ ಸೇರಿದಂತೆ ಸಂಬಂಧಿಕರು, ಬಂಧುಗಳು ಹೊಸದುರ್ಗದಿಂದ ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಆಗಮಿಸಿದರು. ತಿಮ್ಮರಾಜು ಅವರು ಪಾರ್ಥಿವ ಶರೀರ ನೋಡುತ್ತಲೇ ಆಕ್ರಂಧನ ಮುಗಿಲು ಮುಟ್ಟಿತ್ತು.
ಏ.21 ರಂದು ಹೊಸದುರ್ಗ ಪುರಸಭೆ ಕಚೇರಿಯಲ್ಲಿ 25 ಸಾವಿರ ಲಂಚ ಪಡೆಯುವಾಗ ತಿಮ್ಮರಾಜು ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಪುರಸಭೆ ಸದಸ್ಯ ಶಂಕರಪ್ಪ ನಿವೇಶನ ಹಾಗೂ ಕಟ್ಟಡಕ್ಕೆ ಇ-ಸ್ವತ್ತು ಮಾಡಿಕೊಡಲು ಲಂಚದ ಬೇಡಿಕೆ ಇಟ್ಟ ಕಾರಣಕ್ಕೆ ದೂರು ದಾಖಲಿಸಿದ್ದರು.
ಷಡ್ಯಂತ್ರ ಮಾಡಿ ಲೋಕಾಯುಕ್ತರ ಬಲೆಗೆ ಬೀಳಿಸಿದ್ದಾರೆ;
ಪತಿಯ ಸಾವಿನ ದುಃಖದಲ್ಲಿದ್ದ ಕಾವ್ಯ, ಲೋಕಾಯುಕ್ತ ಬಲೆಗೆ ಬೀಳಿಸಲಾಗಿದೆ ಎಂದು ಪೊಲೀಸರು, ಮಾಧ್ಯಮಗಳ ಮುಂದೆ ತಿಳಿಸಿದರು.
ಇದನ್ನೂ ಓದಿ: ಲೋಕಾಯುಕ್ತರ ಬಲೆಗೆ ಬಿದ್ದ ಪುರಸಭೆ ಮುಖ್ಯಾಧಿಕಾರಿ | ಲಂಚ ಸ್ವೀಕರಿಸುತ್ತಿದ್ದಾಗ ದಾಳಿ
ದುರ್ಗಮ್ಮನ ಜಾತ್ರೆಗೆ ನೀವೆ ಹಣ ಕೊಡಿ ಎಂದು ನನ್ನ ಪತಿಯ ಜೇಬಿನಲ್ಲಿ ಹಣ ಇಟ್ಟು, ಅದನ್ನು ತೆಗೆದು ವಾಪಾಸು ಕೊಡುವಾಗ ಲೋಕಾಯುಕ್ತರಿಗೆ ಸಿಕ್ಕಿ ಬೀಳುವಂತೆ ಮಾಡಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ, ಸರ್ವೋತ್ತಮ ಪ್ರಶಸ್ತಿ ಪಡೆದು ಅತ್ಯುತ್ತಮ ಅಧಿಕಾರಿ ಎಂದೇ ಹೆಸರಾಗಿದ್ದ ನನ್ನ ಪತಿ ತಿಮ್ಮರಾಜುಗೆ ಕೆಲ ಪುರಸಭೆ ಸದಸ್ಯರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.
ಇದನ್ನೂ ಓದಿ: BSC Agriculture ಪದವಿ ಸೇರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ
ಅಕ್ರಮ ದಾಖಲೆ ಮಾಡಿಕೊಡದ ಕಾರಣ ಲೋಕಾಯುಕ್ತರಿಗೆ ದೂರು ನೀಡಿ ಸಿಕ್ಕಿ ಬೀಳಿಸಿದ್ದಾರೆ. ನನ್ನ ಪತಿಯ ಸಾವಿಗೆ ಅವರೇ ಕಾರಣ. ಈ ಅವಮಾನ ತಾಳಲಾರದೆ ಮಾನಸಿಕವಾಗಿ ಕುಗ್ಗಿ ಹೋಗಿ ಮೃತಪಟ್ಟಿದ್ದಾರೆ ಎಂದು ದೂರಿದರು.
ನನ್ನ ಪತಿಯ ವಿರುದ್ಧ ಷಡ್ಯಂತ್ರ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವವರೆಗೆ ಶವ ತೆಗೆದುಕೊಂಡು ಹೋಗುವದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಇದನ್ನೂ ಓದಿ: ಅಡಿಕೆ ಧಾರಣೆ | ಚನ್ನಗಿರಿ ಮಾರುಕಟ್ಟೆಯಲ್ಲಿ ಇಳಿಕೆ ಕಂಡ ಅಡಿಕೆ
ಇಲ್ಲಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಅಲ್ಲಿಯೂ ಪ್ರತಿಭಟನೆ ನಡೆಸಿದರು. ಆದರೆ, ಲೋಕಾಯುಕ್ತಕ್ಕೆ ದೂರು ನೀಡಿದವರ ವಿರುದ್ಧ ಈ ಸಂದರ್ಭದಲ್ಲಿ ದೂರು ದಾಖಲಿಸಿಕೊಳ್ಳಲು ಬರುವುದಿಲ್ಲ. ನ್ಯಾಯಾಲಯದ ಮೊರೆ ಹೋಗಬಹುದು ಎಂದು ಪೊಲೀಸರು ಸಲಹೆ ನೀಡಿದರು.
ಇಲ್ಲಿಂದ ಶವಾಗಾರಕ್ಕೆ ಆಗಮಿಸಿದ ಕಾವ್ಯ ಹಾಗೂ ಸಂಬಂಧಿಕರು, ಪೋಸ್ಟ್ ಮಾರ್ಟಮ್ ಗೆ ಆಗಮಿಸಿದ ನ್ಯಾಯಾಧೀಶರ ಎದುರು ತಮ್ಮ ಅಳಲು ತೋಡಿಕೊಂಡು ದೂರು ದಾಖಲಿಸಲು ಸೂಚನೆ ನೀಡುವಂತೆ ಮನವಿ ಮಾಡಿದರು.
