ಮುಖ್ಯ ಸುದ್ದಿ
20 ದಿನಗಳಿಂದ ನಗರದಲ್ಲಿ ಕುಡಿಯಲು ನೀರಿಲ್ಲ | ಪೌರಾಯುಕ್ತರು ಏನು ಮಾಡುತ್ತಿದ್ದಾರೆ? ತರಾಟೆಗೆ ತೆಗೆದುಕೊಂಡ ನಗರಸಭೆ ಸದಸ್ಯರು

CHITRADURGA NEWS | 26 MARCH 2025
ಚಿತ್ರದುರ್ಗ: ನಗರದಲ್ಲಿ ಕಳೆದ 20 ದಿನಗಳಿಂದ ಜನರಿಗೆ ಕುಡಿಯುವ ನೀರು ಬಿಟ್ಟಿಲ್ಲ. ಪೌರಾಯುಕ್ತರು ಏನು ಮಾಡುತ್ತಿದ್ದಾರೆ? ಅಧ್ಯಕ್ಷರ ಮಾತಿಗೆ ಕಿಮ್ಮತ್ತೇ ಕೂಡುವುದಿಲ್ಲ. ಈ ರೀತಿ ಮಾಡಿದರೆ ನಗರದ ಅಭಿವೃದ್ದಿ ಆಗುತ್ತಾ ಮಾತನಾಡಿ ಎಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪೌರಾಯುಕ್ತೆ ರೇಣುಕಾ ಅವರನ್ನು ತರಾಟೆಗೆ ತೆಗೆದುಕೊಂಡದರು.
Also Read: ಸಾಲ ನೀಡಲು ಲಂಚದ ಬೇಡಿಕೆ | ಡಿಸಿಸಿ ಬ್ಯಾಂಕ್ ನೌಕರ ಲೋಕಾಯುಕ್ತ ಬಲೆಗೆ
ಬುಧವಾರ ನಗರಸಭೆಯಲ್ಲಿ ಅಧ್ಯಕ್ಷೆ ಸುಮಿತಾ ಅವರ ಆಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬೇಸಿಗೆ ಕಾಲ ಬಂದರು ಕುಡಿಯುವ ನೀರು ಸಿಗದಿರುವ ಬಗ್ಗೆ ಸಾಕಷ್ಟು ಸದಸ್ಯರ ಆಕ್ರೋಶಕ್ಕೆ ಪೌರಾಯುಕ್ತೆ ರೇಣುಕಾ ಗುರಿಯಾದರು.
ಯುಗಾದಿ, ರಂಜಾನ್ ಹಬ್ಬ ಹತ್ತಿರ ಬಂದಿದೆ. ಎಲ್ಲೆಡೆ ಬೇಸಿಗೆಯ ಬಿಸಿಲು ಧಗೆ ಏರುತ್ತಿದೆ. ಆದರೂ 20 ದಿನಗಳಿಂದ ಜನರಿಗೆ ನೀರು ಸಿಗುತ್ತಿಲ್ಲ. ಮತ ಹಾಕಿರುವ ಜನರು ನಮ್ಮ ಮನೆಗಳಿಗೆ ಬಂದು ಮನಃ ಬಂದಂತೆ ಕೆಟ್ಟದಾಗಿ ಮಾತಾಡುತ್ತಾರೆ.
ನೀವು ಎ.ಸಿ. ರೂಮಿನಲ್ಲಿ ನಿಮ್ಮದಿಯಾಗಿ ಮಲಗಿರುತ್ತಿರಾ. ಯಾರು ಇದಕ್ಕೆ ಉತ್ತರ ಕೊಡಬೇಕು ಎಂದು ಅಧ್ಯಕ್ಷೆ ಸುಮೀತಾ, ಉಪಾಧ್ಯಕ್ಷೆ ಶ್ರೀದೇವಿ ಸೇರಿದಂತೆ ಸದಸ್ಯರಾದ ಶ್ರೀನಿವಾಸ್, ದೀಪು, ಮೊಹಮ್ಮದ್ ಜೈಲುದ್ದಿನ್, ಶಶಿಧರ್, ಮೀನಾಕ್ಷಿ, ಮಹಮದ್ ಅಹ್ಮದ್ ಪಾಷ ಅವರುಗಳು ಪೌರಾಯುಕ್ತರ ಮೇಲೆ ಹರಿಹಾಯ್ದರು.
Also Read: ನಿರುದ್ಯೋಗಿಗಳಿಗೆ ಸುವರ್ಣವಕಾಶ | ನೇರ ನೇಮಕಾತಿ ಸಂದರ್ಶನ ಮಾರ್ಚ್ 28ಕ್ಕೆ
ಇದಕ್ಕೆ ಪೌರಾಯುಕ್ತರು ಉತ್ತರಿಸುತ್ತಾ, ಟ್ರಾನ್ಸ್ ಫಾರ್ಮರ್ ಕೆಟ್ಟು ಹೋಗಿದೆ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ, ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ ಎಂದರು.
ಕುಡಿಯಲು ನೀರು ಕೊಡಿ ಎಂದು ಜನರು ಮನೆ ಬಾಗಿಲಿಗೆ ಬಂದು ಗಲಾಟೆ ಮಾಡುತ್ತಾರೆ. ಏನು ಸಮಸ್ಯೆ ಎಂದು ಕೇಳಲು ಇಂಜಿನಿಯರ್ ಮುನಿಸ್ವಾಮಿ ಪೋನ್ ಮಾಡಿದರೆ ಪೋನ್ ರೀಸಿವ್ ಮಾಡುವುದಿಲ್ಲ. ಪೌರಾಯುಕ್ತರೆ ಮಾತನಾಡಿ ಬಾಯಿಗೆ ಏನು ಲಕ್ವಾ ಹೊಡಿದಿದೆಯಾ? ಎಂದು 25 ನೇ ವಾರ್ಡಿನ ಸದಸ್ಯ ಮೊಹಮ್ಮದ್ ಜೈಲುದ್ದೀನ್ ಏರುಧ್ವನಿಯಲ್ಲಿ ಮಾತನಾಡಿದರು.
ಇದಕ್ಕೆ ಪೌರಾಯುಕ್ತರು ಮೌನ ವಹಿಸಿದ್ದು ಸದಸ್ಯರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ ಇಂಜಿನಿಯರ್ ಮುನಿಸ್ವಾಮಿ ಅವರನ್ನು ಕೂಡಲೇ ಅಮಾನತ್ತು ಮಾಡಿ ಎಂದು ಒತ್ತಾಯಿಸಿದರು.
Also Read: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಚಿತ್ರದುರ್ಗದ ಬಹುತೇಕ ನಗರಸಭೆ ಆಸ್ತಿಯನ್ನು ಸದಸ್ಯರು ಉಳಿಸಿಕೊಟ್ಟಿದ್ದೆವೆ. ಆದರೂ ಇವುಗಳನ್ನು ಒಳಗಿಂದ ಒಳಗೆ ಮಾರಾಟ ಮಾಡಿರುವ ವಿಷಯ ಕೇಳಿ ಬರುತ್ತಿದೆ. ಒಂದು ವೇಳೆ ಯಾರಿಗಾದರೂ ಮಾರಾಟ ಮಾಡಿದರೆ ಜೈಲಿಗೆ ಕಳಿಸಬೇಕಾಗುತ್ತದೆ, ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸದಸ್ಯ ಶ್ರೀನಿವಾಸ್ ಹೇಳಿದರು.
