ಮುಖ್ಯ ಸುದ್ದಿ
BUS THEFT; ಕಳ್ಳತನವಾಗಿದ್ದ SRE ಬಸ್ ಹುಬ್ಬಳ್ಳಿ ಸಮೀಪ ಪತ್ತೆ | ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಶೋಧ ಮಾಡಿದ ಪೊಲೀಸರು

CHITRADURGA NEWS | 19 JULY 2024
ಚಿತ್ರದುರ್ಗ: ಗುರುವಾರ ತಡರಾತ್ರಿ ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದಿಂದ (BUS THEFT) ಕಳ್ಳತನವಾಗಿದ್ದ SRE ಬಸ್ ಪತ್ತೆ ಮಾಡುವಲ್ಲಿ ಚಿತ್ರದುರ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಗೆ ಬಸ್ ತೆಗೆದುಕೊಂಡು ಹೋಗಿರಬಹುದು ಎಂಬ ಬಲವಾದ ಶಂಕೆಯಿಂದ ತನಿಖೆಗೆ ಇಳಿದ ಪೊಲೀಸರಿಗೆ ಹೆಬ್ಬಾಳ ಹಾಗೂ ಹುಬ್ಬಳ್ಳಿ ಬಳಿಯಿರುವ ಟೋಲ್‍ಗಳಲ್ಲಿ SRE ಬಸ್ ಹೋಗಿರುವುದು ಪತ್ತೆಯಾಗಿತ್ತು.
ಇದನ್ನೂ ಓದಿ: ಪ್ರಯಾಣಿಕರಿಲ್ಲದ ಬಸ್ ತಡರಾತ್ರಿ ರೈಟ್..ರೈಟ್.. | ಬಸ್ ಅನ್ನೇ ಎಸ್ಕೇಪ್ ಮಾಡಿದ ಗ್ಯಾಂಗ್
ಹಳೇ ಹುಬ್ಬಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಸ್ ಪತ್ತೆಯಾಗಿದ್ದು, ಕಳ್ಳರು ನಾಪತ್ತೆಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಮೂಲದ ಸೈಯದ್ ಅನ್ವರ್ ಭಾಷಾ ಅವರಿಗೆ ಸೇರಿದ ಬಸ್ ಇದಾಗಿದ್ದು, ಬೆಳಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಆಖಲಿಸಲಾಗಿತ್ತು.
ಇದನ್ನೂ ಓದಿ: ಹೈನುಗಾರಿಕೆ ಮಾಡಲು ರೈತ ಮಹಿಳೆಯರಿಗೆ ಸಹಾಯಧನ
ಚಿತ್ರದುರ್ಗ, ಜಗಳೂರು, ಚಳ್ಳಕೆರೆ ಮಾರ್ಗದಲ್ಲಿ ಸಂಚರಿಸುತ್ತಿದ್ದ SRE ಬಸ್ ನಿತ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಹಾಲ್ಟ್ ಆಗುತ್ತಿತ್ತು.
ಚಿತ್ರದುರ್ಗ ನಗರ ಪೊಲೀಸ್ ಠಾಣೆ ಸಿಪಿಐ ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿಗಳ ತಂಡ ಕಳುವಾದ ಬಸ್ ಪತ್ತೆ ಕಾರ್ಯಾಚರಣೆ ನಡೆಸಿದ್ದು, ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಬಸ್ ಪತ್ತೆ ಮಾಡಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
