ಮುಖ್ಯ ಸುದ್ದಿ
ವಕ್ಫ್ ವ್ಯವಸ್ಥೆಯಲ್ಲಿದ್ದ ಪಾರದರ್ಶಕ ಕೊರತೆ ನೀಗಿದೆ | ಎಂ.ಶಿವಮೂರ್ತಿ

CHITRADURGA NEWS | 05 APRIL 2025
ಚಿತ್ರದುರ್ಗ: ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸಿರುವುದರಿಂದ ವಕ್ಫ್ ವ್ಯವಸ್ಥೆಯಲ್ಲಿ ಹಲವು ದಶಕಗಳಿಂದ ಇದ್ದ ಪಾರದರ್ಶಕ ಕೊರತೆ ನೀಗಿದಂತಾಗಿದ್ದು ಎಂದು ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ ತಿಳಿಸಿದ್ದಾರೆ.
Also Read: ರಾಜ್ಯ ಸರ್ಕಾರದ ಅಬಕಾರಿ ನೀತಿ ವಿರೋಧಿಸಿ ಮದ್ಯ ಮಾರಾಟಗಾರರ ಪ್ರತಿಭಟನೆ
ಬಡ ಮುಸ್ಲಿಂರಿಗೆ ಹಾಗೂ ರೈತರಿಗೆ ಅನುಕೂಲವಾಗಿದೆಯಲ್ಲದೆ ಸಾಮಾಜಿಕ, ಆರ್ಥಿಕ ನ್ಯಾಯದ ದೃಷ್ಟಿಯಿಂದ ಉಭಯ ಸದನಗಳಲ್ಲಿ ಮಹತ್ವದ ತೀರ್ಮಾನ ಕೈಗೊಂಡಂತಾಗಿದೆ.
12 ಗಂಟೆಗಳ ಕಾಲ ನಡೆದ ಸುಧೀರ್ಘ ಚರ್ಚೆಯ ನಂತರ ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗಿದ್ದು, ಮಸೂದೆಯ ಪರವಾಗಿ 288 ಮತಗಳು. ವಿರುದ್ದವಾಗಿ 232 ಮತಗಳು ಬಿದ್ದಿವೆ. ಇದಾದ ನಂತರ ರಾಜ್ಯಸಭೆಯಲ್ಲಿಯೂ 13 ಗಂಟೆಗಳ ಕಾಲ ಚರ್ಚೆ ನಡೆಸಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿರುವುದಕ್ಕೆ ಪ್ರಧಾನಿ ನರೇಂದ್ರಮೋದಿ ಮತ್ತು ಬಿಜೆಪಿ ಮುಖಂಡರಿಗೆ ಎಂ.ಶಿವಮೂರ್ತಿ ಅಭಿನಂದಿಸಿದ್ದಾರೆ.
Also Read: ಅಧಿಕಾರಿ, ಸಿಬ್ಬಂದಿ | ನಾಳೆ ಕಡ್ಡಾಯ ಹಾಜರಾತಿಗೆ ಡಿಸಿ ಸೂಚನೆ
