ಕ್ರೈಂ ಸುದ್ದಿ
ಬಸ್ ಪಲ್ಟಿ ಪ್ರಕರಣ | ಮೃತ ಮೂರು ಜನರ ಗುರುತು ಪತ್ತೆ
CHITRADURGA NEWS | 07 MARCH 2024
ಹೊಳಲ್ಕೆರೆ: ಹೊಳಲ್ಕೆರೆ ತಾಲೂಕಿನ ಹನುಮಂತ ದೇವರ ಕಣಿವೆ ಬಳಿ ಭಾನುವಾರ ಬೆಳಗ್ಗೆ ಸೀ ಬರ್ಡ್ ಬಸ್ ಪಲ್ಟಿಯಾಗಿ ಸ್ಥಳದಲ್ಲೇ ಮೂರು ಜನ ಮೃತಪಟ್ಟಿದ್ದು, 34 ಜನ ಗಾಯಗೊಂಡಿದ್ದರು.
ಇದನ್ನೂ ಓದಿ: ನಸುಕಿನಲ್ಲಿ ಖಾಸಗಿ ಬಸ್ ಪಲ್ಟಿ | ಭೀಕರ ಅಪಘಾತ | ಸ್ಥಳದಲ್ಲೇ ಮೂವರ ದುರ್ಮರಣ
ಸ್ಥಳದಲ್ಲೇ ಮೃತಪಟ್ಟವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಿವಾಸಿ ಸುಮಾರು 48 ವರ್ಷದ ಜಗದೀಶ್ ತಂದೆ ರಾಮಚಂದ್ರ ಮೇಸ್ತಾ, ಗೋಕರ್ಣ ನಿವಾಸಿ 34 ವರ್ಷದ ಗಣಪತಿ ಕಲ್ಲಪ್ಪ ತಂದೆ ವೆಂಕಟರಮಣ ಭಟ್ ಹಾಗೂ ಸಕಲೇಶಪುರದ ರೋಣಕ್‍ಸಿಂಗ್ ತಂದೆ ನರೇಂದ್ರ ಸಿಂಗ್ ಮೃತ ವ್ಯಕ್ತಿಗಳು.
ಇದನ್ನೂ ಓದಿ: ಕಂದನ ಕೊಂದು ಸೂಟ್‍ಕೇಸಿನಲ್ಲಿ ತುಂಬಿಕೊಂಡು ಬಂದಿದ್ದ ಮಹಿಳೆ ವಿರುದ್ಧ ಚಾರ್ಜ್‍ಶೀಟ್ | ಸಾವಿನ ರಹಸ್ಯ ಬಯಲು ಮಾಡಿದ ಪೊಲೀಸರು
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್ ಬೆಳಗಿನ ಜಾವ ಸುಮಾರು 4 ಗಂಟೆಗೆ ಹನುಮಂತ ದೇವರ ಕಣಿವೆಯಲ್ಲಿ ಪಲ್ಟಿಯಾಗಿತ್ತು. ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಒಮ್ಮೆ ‘ಬಾದಾಮಿ’ ನೆನಪಿಸಿಕೊಳ್ಳಲಿ | ಗೋ ಬ್ಯಾಕ್ ಹೇಳಿಕೆಗೆ ತಿರುಗೇಟು ನೀಡಿದ ಕೆ.ಎಸ್.ನವೀನ್